ಶೇಕಡಾ 40 ರಷ್ಟು ಮಂದಿಯ ಸ್ವಾರ್ಥಕ್ಕೆ ಸಮಾಜ ಈಗಾಗಲೇ ಅದೋಗತಿಯತ್ತ ಸಾಗಿದೆ : ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ.

ಗುಬ್ಬಿ: ನಮ್ಮ ದೇಶದ ಹಂತವಾಗಿ ಕುಸಿಯುತ್ತಿದೆ. ಶೇಕಡಾ 40 ರಷ್ಟು ಮಂದಿ ಸ್ವಾರ್ಥಕ್ಕೆ ಸಮಾಜ ಈಗಾಗಲೇ ಅದೋಗತಿಯತ್ತ ಸಾಗಿದೆ. ಈ ನಿಟ್ಟಿನಲ್ಲಿ ಶ್ರೀ ಸಾಮಾನ್ಯ, ಬಡವರು ದೀನರ ಬದುಕು ಅರ್ಥೈಸಿಕೊಂಡವರಿಗೆ ಆಳ್ವಿಕೆ ನೀಡಬೇಕು ಎಂದು ಬೆಟ್ಟದಹಳ್ಳಿ ಗವಿ ಮಠಾಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ನಿಟ್ಟೂರು ಹೋಬಳಿ ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ನೂತನ ಸಂಜೀವಿನಿ ಕಾರ್ಯಾಗಾರ ಘಟಕ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕ, ಗಣಕೀಕೃತ ಗ್ರಂಥಾಲಯ ಮತ್ತು ಶಾಲಾ ಕಾಂಪೌಂಡ್ ಉದ್ಘಾಟನಾ ಸಮಾರಂಭ ವೇದಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು ಸ್ವಾರ್ಥಿಗಳು ಈಗಾಗಲೇ ಶೇಕಡಾ 20 ರಷ್ಟು ನಮ್ಮ ಸಂಪತ್ತು ವಿದೇಶದಲ್ಲಿಟ್ಟು ಮಾಯವಾಗಿದ್ದಾರೆ. ಶೇಕಡಾ 40 ರಷ್ಟು ಮಂದಿ ಜೀವನ ನಡೆಸಲು ಪರದಾಡುತ್ತಿದ್ದಾರೆ. ಇಂತಹವರ ಬದುಕು ಕಟ್ಟಿಕೊಡುವ ಕೆಲಸ ಮಾಡುವ ಸಮರ್ಥ ನಾಯಕರನ್ನು ಆಯ್ಕೆ ಮಾಡಿ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸ್ಥಳೀಯ ಸರ್ಕಾರ ಎನಿಸಿಕೊಂಡಿದೆ. ವಿಧಾನಸೌಧ ರೀತಿಯಲ್ಲೇ ಕೆಲಸ ಮಾಡುವ ಗ್ರಾಮ ಸೌಧಕ್ಕೆ ತನ್ನದೇ ಸ್ವತಂತ್ರ ಅಧಿಕಾರವಿದೆ. ಇದನ್ನು ಬಳಸಿ ಗ್ರಾಮೀಣ ಭಾಗದಲ್ಲಿ ಅಭಿವೃದ್ದಿ ಕೆಲಸ ಮಾಡಲು ಚುನಾಯಿತ ಸದಸ್ಯರು ಒಗ್ಗೂಡಿ ಕೆಲಸ ಮಾಡಬೇಕು ಎಂದ ಅವರು ಪಕ್ಷಾತೀತ ಜಾತ್ಯತೀತ ನಿಲುವು ತಾಳಿದ ಪಂಚಾಯಿತಿಯಲ್ಲಿ ಸಕಲ ಕೆಲಸಗಳು ಸುಸೂತ್ರವಾಗಿ ನಡೆಯಲಿದೆ. ಸರ್ಕಾರದ ಸವಲತ್ತು ಅರ್ಹರಿಗೆ ನೀಡುವ ಮೂಲಕ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಕರೆ ನೀಡಿದರು.

ಬಿಜೆಪಿ ಮುಖಂಡ ಜಿ.ಎನ್.ಬೆಟ್ಟಸ್ವಾಮಿ ಮಾತನಾಡಿ ರಾಜಕೀಯ ನಡೆಸುವ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ವಿಕೇಂದ್ರಿಕರಣ ಎಂಬುದು ಎಲ್ಲಾ ಜಾತಿ ವರ್ಗದ ಜನರಿಗೆ ಅಧಿಕಾರ ಹಂಚಿಕೆ ಆಯಿತು. ಈ ಜೊತೆಗೆ ಅಧ್ಯಕ್ಷ ಸ್ಥಾನಕ್ಕೆ ಕೊಟ್ಟ ಮೀಸಲು ಹಂಚಿಕೆ ನಂತರ ಕೇವಲ ಆರು ತಿಂಗಳಲ್ಲೇ ಅಧಿಕಾರ ಬದಲಾವಣೆ ಮಾಡುವುದು ಅಭಿವೃದ್ದಿಗೆ ಮಾರಕ. ಅಧಿಕಾರ ಗದ್ದುಗೆ ಕಿತ್ತಾಟ ಬಿಟ್ಟು ಒಗ್ಗೂಡಿ ಜನಪರ ಕೆಲಸ ಮಾಡುವುದು ಒಳಿತು. ಇದು ಎಂ.ಎನ್.ಕೋಟೆ ನಡೆಸಿದೆ ಎಂದು ಶ್ಲಾಘಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ ಸ್ಥಳೀಯ ಜನರ ಜೀವನಕ್ಕೆ ಹತ್ತಿರವಾದ ಗ್ರಾಮ ಪಂಚಾಯಿತಿಗೆ ಗ್ರಾಮ ಸರ್ಕಾರ ಎಂದು ನಾಮಕರಣ ಮಾಡಬೇಕು ಎಂಬ ಒತ್ತಾಯ ಮಾಡುತ್ತೇವೆ. ಸುಪ್ರೀಂ ಎನಿಸಿದ ಪಂಚಾಯಿತಿ ವ್ಯವಸ್ಥೆ ಸಕಲ ಅನುಕೂಲ ಒದಗಿಸುತ್ತದೆ. ಜೊತೆಗೆ ಹತ್ತಿರವಾಗಿ ಜನರ ಸಂಪರ್ಕಕ್ಕೆ ಬರುವ ಸದಸ್ಯರು ನಿಜವಾದ ಜನ ನಾಯಕರು ಎಂದ ಅವರು ಮಹಿಳೆಯರಿಗೂ ಅಧಿಕಾರ ನೀಡಿದ ಪಂಚಾಯಿತಿ ವ್ಯವಸ್ಥೆಯಲ್ಲಿ ಎಲ್ಲವೂ ಪಕ್ಕಾ ಲೆಕ್ಕಾಚಾರವಿದೆ. ಇಂತಹ ವ್ಯವಸ್ಥೆಗೆ ಜನರ ಭಾಗವಹಿಸುವಿಕೆ ಅತೀ ಮುಖ್ಯ ಎಂದು ಇಡೀ ವ್ಯವಸ್ಥೆ ಬಗ್ಗೆ ಕೂಲಂಕುಷವಾಗಿ ವಿವರಿಸಿದರು.

ತಾಪಂ ಇಓ ವಿ.ಪರಮೇಶ್ ಕುಮಾರ್ ಮಾತನಾಡಿ ಗ್ರಾಮ ಸೌಧ ಸೇರಿದಂತೆ ಇವತ್ತಿನ ಅಭಿವೃದ್ದಿ ಕೆಲಸಗಳು ನರೇಗಾ ಯೋಜನೆಯಲ್ಲಿ ನಡೆದಿರುವುದು ಸ್ವಾಗತಾರ್ಹ. ಕಟ್ಟಡ ನಿರ್ಮಾಣಕ್ಕಿಂತ ನಿರ್ವಹಣೆ ಮುಖ್ಯ. ಸಾರ್ವಜನಿಕರ ಬಳಕೆಗೆ ಬರುವಂತೆ ಕೆಲಸ ಮಾಡಬೇಕು. ಜನೋಪಯೋಗಿ ಕೆಲಸದತ್ತ ಸಿಬ್ಬಂದಿಗಳು ನಿಗಾವಹಿಸಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಗೆ ಸಂಸದ ಜಿ ಎಸ್.ಬಸವರಾಜು ಆಗಮಿಸಿ ಪಂಚಾಯಿತಿ ಕೆಲಸಗಳಿಗೆ ಶುಭ ಕೋರಿದರು. ಬಿಜೆಪಿ ಮುಖಂಡರಾದ ಎನ್.ಸಿ.ಪ್ರಕಾಶ್, ಎಸ್.ಡಿ.ದಿಲೀಪ್ ಕುಮಾರ್, ಪಿ.ಬಿ.ಚಂದ್ರಶೇಖರ ಬಾಬು, ಹಾರನಹಳ್ಳಿ ಪ್ರಭಣ್ಣ ಇವರು ಸಹ ಕಾರ್ಯಕ್ರಮಕ್ಕೆ ಹಾಜರಾದರು.

ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಪಿ.ಎಸ್.ಶಶಿಕಲಾ ಯೋಗೀಶ್, ಉಪಾಧ್ಯಕ್ಷ ಎಂ.ಆರ್.ದಿಲೀಪ್, ಸದಸ್ಯರಾದ ಎಂ.ಎನ್. ಭೀಮಶೆಟ್ಟಿ, ಸಿದ್ದಗಂಗಮ್ಮ, ರವೀಶ್, ಉಮಾ, ಶೈಲಜಾ, ಸಿದ್ದರಾಮಯ್ಯ, ನರಸಯ್ಯ, ಲೋಕೇಶ್, ಕಾಂತರಾಜು, ಶಿವಮೂರ್ತಿ, ಸಿದ್ದಗಂಗಯ್ಯ,ಯಶೋಧಾ, ರುಕ್ಮಿಣಿ, ಭವ್ಯ, ಕವಿತಾ, ದಿವ್ಯ, ಭಾಗ್ಯ, ಮುಖಂಡರಾದ ವಸಂತಕುಮಾರ್, ಉಮೇಶ್ ಬಾಬು, ಪಿಡಿಓ ಕೃಷ್ಣಮೂರ್ತಿ ಇತರರು ಇದ್ದರು.

ವರದಿ: ಹರೀಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!