ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜಿ.ಕೆ.ಪರಮೇಶ್ವರಪ್ಪ ಇನ್ನಿಲ್ಲ.

ಗುಬ್ಬಿ: ತಾಲ್ಲೂಕಿನಲ್ಲಿ ಉಳಿದಿದ್ದ ಏಕೈಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜಿ.ಕೆ.ಪರಮೇಶ್ವರಪ್ಪ (94) ವಯೋಸಹಜ ಅನಾರೋಗ್ಯದಿಂದ ಮುಂಜಾನೆ ಪಟ್ಟಣದ ದೊಡ್ಡಪೇಟೆಯ ಅವರ ಸ್ವಗೃಹದಲ್ಲಿ ದೈವಾಧೀನರಾದರು.

1930 ರ ಡಿಸೆಂಬರ್ 17 ರಂದು ಕರಿಬಸವಯ್ಯ ಗುಬ್ಬಿಯಮ್ಮ ದಂಪತಿ ಗರ್ಭದಲ್ಲಿ ಜನಿಸಿದ ಪರಮೇಶ್ವರಪ್ಪ ಅವರು ವಿದ್ಯಾರ್ಥಿ ದೆಸೆಯಲ್ಲಿ ಹೋರಾಟದ ಮನೋಭಾವ ಹೊಂದಿದ್ದರು. ಗಾಂಧೀಜಿ ಅವರಿಂದ ಪ್ರಭಾವಿತರಾದ ತಮ್ಮ 17 ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿ ಮೈಸೂರು ಚಲೋನಲ್ಲಿ ಭಾಗವಹಿಸಿ ಸೆರೆವಾಸ ಕೂಡಾ ಅನುಭವಿಸಿದ್ದರು.

ಪತ್ನಿ ಮಕ್ಕಳನ್ನು ಅಗಲಿದ ಮೃತರ ಅಂತ್ಯಕ್ರಿಯೆ ಜೈನಿಗರಹಳ್ಳಿ ಅವರ ತೋಟದಲ್ಲಿ ಜರುಗಲಿದೆ.

ದರ್ಶನ ಪಡೆದ ಅನೇಕ ಗಣ್ಯರು ಕಂಬಿನಿ ಮಿಡಿದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!