ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಲ್ಪತರು ನಾಡಿನ ಜನತೆ ಹಾಗೂ ಕೃಷಿಕ ವರ್ಗದ ಪರವಾಗಿ ಅಡಕೆ ಪೇಟ ಹಾಗೂ ಅಡಕೆ ಹಾರ ನೀಡಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ಗುಬ್ಬಿ: ವಿಶ್ವವೇ ಗುರುತಿಸುವ ಹೆಲಿಕಾಪ್ಟರ್ ತಯಾರಿಕಾ ಘಟಕ ಫೆ.06 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಉದ್ಘಾಟನೆಗೆ ತಾಲ್ಲೂಕಿನ ಬಿದರೆಹಳ್ಳ ಕಾವಲ್ ನಲ್ಲಿ ನೂತನವಾಗಿ ‌ನಿರ್ಮಾಣವಾದ ಹೆಚ್ ಎ ಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಸಕಲ ಸಜ್ಜುಗೊಂಡಿದೆ.

ಎಚ್ ಎ ಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ ನಿರ್ಮಾಣಕ್ಕೆ 615 ಎಕರೆ ಜಮೀನು 2017 ಹಸ್ತಾಂತರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಆವರು ಅಂದು ಭೂಮಿ ಪೂಜೆ ಸಲ್ಲಿಸಿದ್ದರು. 6 ವರ್ಷದಲ್ಲಿ ಹೆಲಿಕಾಪ್ಟರ್ ತಯಾರಿಸುವ ಘಟಕ ಸಿದ್ದಗೊಳಿಸಿ ಮಧ್ಯಾಹ್ನ 3 ಕ್ಕೆ ಲೋಕಾರ್ಪಣೆ ಮಾಡಲಾಗುತ್ತಿದೆ. ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಅಲ್ಲಿ ಆಯೋಜಿಸಿರುವ ಬೃಹತ್ ವೇದಿಕೆಯ ಬಹಿರಂಗ ಸಭೆಯಲ್ಲಿ ಮಾತನಾಡಲಿದ್ದಾರೆ.

ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಕೇಂದ್ರ ರಕ್ಷಣಾ ಸಚಿವರು , ಸಹಾಯಕ ರಕ್ಷಣಾ ಸಚಿವರು , ರಾಜ್ಯ ರಕ್ಷಣಾ ಸಚಿವರು , ರಾಜ್ಯಪಾಲರು , ಮುಖ್ಯಮಂತ್ರಿಗಳು , ಸಚಿವರುಗಳು , ಶಾಸಕರು , ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಸರಿ ಸುಮಾರು 1500 ಕ್ಕೂ ಅಧಿಕ ಮಂದಿ ಗಣ್ಯರು ಆಗಮಿಸಲಿದ್ದು, 70 ಸಾವಿರದಿಂದ ಒಂದು ಲಕ್ಷ ಮಂದಿ ಸಾರ್ವಜನಿಕರು ಸೇರುವ ನಿರೀಕ್ಷೆ ಇದೆ . ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ , ಬಸ್ ವ್ಯವಸ್ಥೆ , ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಯಾವುದೇ ರೀತಿಯ ಆಡಚಣೆಗಳು ಆಗದಂತೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಮುಂಜಾಗ್ರತ ಕ್ರಮ ಕೈಗೊಂಡಿದೆ.

ಫೆ.6ರ ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೂ 206 ರಾಷ್ವ್ರೀಯ ಹೆದ್ದಾರಿಯ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ಅನ್ಯ ಮಾರ್ಗವನ್ನು ಸಹ ಸೂಚಿಸಲಾಗಿದೆ. ಜಿಲ್ಲೆಗೆ ಪ್ರಧಾನಿ ಅವರ ಭೇಟಿ ಹಿನ್ನಲೆಯಲ್ಲಿ ಈಗಾಗಲೇ ಹಲವು ಸಭೆಗಳನ್ನು ನಡೆಸಿ ಅಗತ್ಯ ಸೂಚನೆಗಳನ್ನು ಕೊಡಲಾಗಿದೆ. ಒಳಭಾಗದಲ್ಲಿ ಎಚ್ ಎಎಲ್ ಅಧಿಕಾರಿಗಳು ಸಹ ಎಲ್ಲಾ ಸಕಲ ಸಿದ್ದತೆಗಳನ್ನು ಕೈಗೊಂಡಿದ್ದಾರೆ.

ಹೆಚ್ ಎಎಲ್ ಉದ್ಘಾಟನೆಯ ಬಳಿಕ ಪ್ರಧಾನ ಮಂತ್ರಿಗಳು ಮನೆ ಮನೆಗೆ ನಳ ಸಂಪರ್ಕ ಜಲ ಜೀವನ್ ಮೀಷನ್ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದು, ಮಧ್ಯಾಹ್ನ 1 ಗಂಟೆಯಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಾರ್ವಜನಿಕರನ್ನು ಬಿಡಲು ಪ್ರಾರಂಭಿಸಿ 2.30 ರ ಒಳಗಡೆ ಎಲ್ಲರೂ ಒಳಗಡೆ ಸೇರಬೇಕಿದೆ. ನೀರು , ಬ್ಯಾಗ್ ಪ್ಲಾಸ್ವಿಕ್ ಯಾವುದೇ ವಸ್ತುಗಳನ್ನು ತರುವಂತಿಲ್ಲ ಎಲ್ಲರಿಗೂ ಕೂಡ ನೀರು, ಊಟದ ವ್ಯವಸ್ಥೆ ಮಾಡಲಾಗಿದೆ.

ತಾಲ್ಲೂಕು ಜನತೆಯ ಪರವಾಗಿ ವಿಶೇಷ ಆತಿಥ್ಯ ಸಿದ್ದ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾಲ್ಲೂಕಿನ ಜನತೆ ಹಾಗೂ ಕೃಷಿಕ ವರ್ಗದ ಪರವಾಗಿ ಅಡಕೆ ಪೇಟ ಹಾಗೂ ಅಡಕೆ ಹಾರ ನೀಡಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಅಡಕೆಯನ್ನು ಅಂಟಿಸಿ ಪೇಟ ಸಿದ್ದ ಮಾಡಿದ್ದು, ಹಾರ ತಯಾರಿಕೆಗೆ ಉಂಡೆ ಅಡಕೆ ಬಳಸಲಾಗಿ ಸುಂದರವಾಗಿ ಸಿದ್ದಗೊಳಿಸಿದ್ದಾರೆ. ಹಾಗೆಯೇ ಊಟದ ವ್ಯವಸ್ಥೆ ಕೂಡಾ ನೂರಾರು ಬಾಣಸಿಗರ ತಂಡ ಸಿಹಿ ಖಾದ್ಯ ಅಡುಗೆ ತಯಾರಿ ನಡೆಸಿದ್ದಾರೆ.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!