ತುಮಕೂರು ಗ್ರಾಮಾಂತರ ಮಸ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಸಲು ಗ್ರಾಮದ ಶ್ರೀ ತಿರುಮಲ ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರು, ಬಡವರ ಬಂಧು, ಯುವಕರ ಆಶಾಕಿರಣ, ಅಭಿವೃದ್ಧಿಯ ಹರಿಕಾರ, ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಡಿಸಿ ಗೌರಿಶಂಕರ್ ಅವರು ಭಾಗವಹಿಸಿ, ಭಗವಂತನಿಗೆ ವಿಶೇಷ ಪೂಜೆ ಸಲ್ಲಿಸಿ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿ, ರೈತರು ನೆಮ್ಮದಿಯಿಂದ ಇರಲಿ, ಸರ್ವರಿಗೂ ಒಳಿತಾಗಲೆಂದು ಪ್ರಾರ್ಥಿಸಿ, ಸಾವಿರಾರು ಭಕ್ತಾದಿಗಳ ಜೊತೆಗೂಡಿ ತೇರನ್ನು ಎಳೆಯುವ ಮೂಲಕ ಭಗವಂತನ ಕೃಪೆಗೆ ಪಾತ್ರರಾದರು,
ಶ್ರೀ ತಿರುಮಲ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯದ ನೂತನ ತೇರು ನಿರ್ಮಾಣ ಕಾರ್ಯಕ್ಕೆ ಜನಪ್ರಿಯ ಶಾಸಕರಾದ ಡಿಸಿ ಗೌರಿಶಂಕರ್ ರವರ ಕುಟುಂಬದ ವತಿಯಿಂದ ವೈಯಕ್ತಿಕವಾಗಿ 1,00,000 (ಒಂದು ಲಕ್ಷ) ರೂಗಳ ದೇಣಿಗೆ ನೀಡಿರುತ್ತಾರೆ.
