ಲೋಕಾಯುಕ್ತರ ಸಾರ್ವಜನಿಕ ಕುಂದು ಕೊರತೆ ಸಭೆ : ಪ್ರಚಾರದ ಕೊರತೆ ಬಗ್ಗೆ ರೈತ ಸಂಘ ಕಿಡಿ.

ಗುಬ್ಬಿ: ಸಾರ್ವಜನಿಕರ ಕುಂದು ಕೊರತೆ ಸಭೆಯನ್ನು ಆಯೋಜಿಸಿದ್ದ ಲೋಕಾಯುಕ್ತರ ಮುಂದೆ ತಮ್ಮ ಅಳಲು ತೋಡಿಕೊಳ್ಳಲು ಬಯಸುವ ಗ್ರಾಮೀಣ ಜನರಿಗೆ ಇಂದಿನ ಸಭೆಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲೋಕಾಯುಕ್ತ ಸಭೆ ನಡೆಸಬೇಕು ಎಂದು ತಾಲ್ಲೂಕು ರೈತ ಸಂಘ ಒತ್ತಾಯಿಸಿತು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಜಿಲ್ಲಾ ಅಧೀಕ್ಷಕ ವಾಲಿಬಾಷ ಅವರ ನೇತೃತ್ವದಲ್ಲಿ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರ ಸಂಖ್ಯೆ ಕಡಿಮೆ ಇರುವ ಬಗ್ಗೆ ಗಮನ ಸೆಳೆದು ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಹಳ್ಳಿಗಳಲ್ಲಿ ಡಂಗುರ ಸಾರುವ ಬಗ್ಗೆ ಮನವಿ ಮಾಡಿದರು.

ಸಭೆಯ ಆರಂಭದಲ್ಲಿ ಕೇವಲ ಅಧಿಕಾರಿಗಳಷ್ಟೇ ಕಂಡು ಬಂದಿದ್ದರು. ಸಾರ್ವಜನಿಕರ ಕೊರತೆ ಕಂಡಿತು. ನಂತರ ಒಬ್ಬೊಬ್ಬರೇ ಅರ್ಜಿ ನೀಡ ತೊಡಗಿದರು. ಆದರೂ ಬೆರಳೇಣಿಕೆ ಜನ ಬಂದಿದ್ದು , ಎರಡುಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಬಂದು ಖರಾಬು ರಸ್ತೆ ಒತ್ತುವರಿ ತೆರವು ಹಾಗೂ ರಾಷ್ಟ್ರ ಧ್ವಜ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ಹೊರತು ಪಡಿಸಿ ವೈಯಕ್ತಿಕ ವ್ಯಾಜ್ಯಗಳ ಹಾಗೂ ಅಧಿಕಾರಿಗಳ ವಿಳಂಬ ಬಗ್ಗೆ ಅರ್ಜಿ ಮಾತ್ರ ಬಂದಿದ್ದವು. ಸಂಬಂಧಿಸಿದ ಅಧಿಕಾರಿಗಳಿಗೆ ಬಗೆಹರಿಸಲು ಸೂಚಿಸಿದ ಅಧಿಕಾರಿಗಳು ತಾಲ್ಲೂಕು ಮಟ್ಟದ ಕಚೇರಿಯಲ್ಲಿ ಯಾವುದೇ ಅರ್ಜಿ ವಿಲೇವಾರಿ ಮಾಡಬೇಕು. ಸೂಕ್ತ ಉತ್ತರ ಇಲ್ಲವಾದರೆ ಅಥವಾ ತಾಂತ್ರಿಕ ಸಮಸ್ಯೆ ಇದ್ದಲ್ಲಿ ಹಿಂಬರಹ ನೀಡಬೇಕು ಎಂದು ಸೂಚಿಸಿದರು.

ಕೃಷಿ ಇಲಾಖೆಯಲ್ಲಿನ ಯಂತ್ರಧಾರೆ ಯೋಜನೆ ಬಗ್ಗೆ, ಮಹಿಳಾ ಅಭಿವೃದ್ದಿ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ ವಿಚಾರಿಸಿದ ಅಧೀಕ್ಷಕರು ಅಂಗನವಾಡಿ ಕಟ್ಟಡಗಳ ದುರಸ್ಥಿ ಕಾರ್ಯ ಹಾಗೂ ಬಿಸಿಯೂಟ ಯೋಜನೆ ಅಚ್ಚುಕಟ್ಟಾಗಿ ನಡೆಯಬೇಕು. ದಿಢೀರ್ ಭೇಟಿ ನೀಡಿ ನಾವೇ ಖುದ್ದು ಊಟ ಮಾಡಿ ಪರಿಶೀಲನೆ ಮಾಡುವುದಾಗಿ ಎಚ್ಚರಿಸಿದರು.

ಗೊಳೆನಹಳ್ಳಿ ಗ್ರಾಮದ ಖರಾಬು ರಸ್ತೆ ಒತ್ತುವರಿ ತೆರವು ವಿಚಾರದಲ್ಲಿ ತಹಶೀಲ್ದಾರ್ ಅವರು ಸ್ಥಳ ಪರಿಶೀಲನೆ ಮಾಡಿ ಇತ್ಯರ್ಥ ಮಾಡಲು ಸೂಚಿಸಿ ರಾಷ್ಟ್ರ ಧ್ವಜ ಅಪಮಾನ ಪ್ರಕರಣ ಅರ್ಜಿ ಪರಿಶೀಲಿಸಿದ ಅಧೀಕ್ಷಕರು ಪಟ್ಟಣ ಪಂಚಾಯಿತಿಯಲ್ಲಿ ನಡೆದ ಈ ಘಟನೆ ಉದ್ದೇಶ ಪೂರ್ವಕವಾಗಿ ನಡೆದಿಲ್ಲ. ಇಳಿಸುವ ಕಾರ್ಯ ನಡೆದಿದೆ. ತಹಶೀಲ್ದಾರ್ ಈ ಬಗ್ಗೆ ನೋಟಿಸ್ ಜಾರಿ ಮಾಡಿದ್ದು ಆರೋಗ್ಯ ಏರುಪೇರು ವಿಚಾರ ಇಲ್ಲಿದೆ. ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳು ಪರಿಶೀಲನೆ ಮುಂದುವರಿದೆ. ಈ ಅಚಾತುರ್ಯ ಬಗ್ಗೆ ತಹಶೀಲ್ದಾರ್ ಕ್ರಮ ಕೈಗೊಂಡು ಜಿಲ್ಲಾಧಿಕಾರಿಗಳ ಬಳಿ ಈ ಇರುವ ಪ್ರಕರಣ ತನಿಖೆ ನಡೆಯಲಿದೆ ಎಂದರು.

ಸಭೆಯಲ್ಲಿ ಎಲ್ಲಾ ಇಲಾಖೆಯ ಸಮಸ್ಯೆ ಆಲಿಸಿದ ಲೋಕಾಯುಕ್ತರು ಅಲ್ಲಿನ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಅದರ ಪ್ರಗತಿ ಕೂಡಾ ಪರಿಶೀಲಿಸಿದರು.

ಸಭೆಯಲ್ಲಿ ಲೋಕಾಯುಕ್ತ ಉಪ ಅಧೀಕ್ಷಕ ಮಂಜುನಾಥ್, ನಿರೀಕ್ಷಕ ರಾಮರೆಡ್ಡಿ, ತಹಸೀಲ್ದಾರ್ ಬಿ.ಆರತಿ, ತಾಪಂ ಇಓ ವಿ.ಪರಮೇಶ್ ಕುಮಾರ್, ಪ್ರೊಬೇಷನರಿ ತಹಶೀಲ್ದಾರ್ ಜೂಗಲ ಮಂಜುನಾಯಕ ಸೇರಿದಂತೆ ಎಲ್ಲಾ ಇಲಾಖಾಧಿಕಾರಿಗಳು ಹಾಜರಿದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!