ತಿಪಟೂರು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಬೆಂಬಲಿಗರಿಂದ ತಿಪಟೂರಿನ ಕಾರ್ಯನಿರತ ಪತ್ರಕರ್ತರನ್ನು,ಸುಮಾರು ಐದಕ್ಕೂ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿ,ಅವಮಾನಿಸಿ ನಿಂದಿಸಿರುವುದು ಮತ್ತು ತೇಜೋವಧೆ ಮಾಡಿರುವುದು.. ಇತ್ತೀಚೆಗೆ ತಿಪಟೂರಿನಲ್ಲಿ ನಡೆದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆ.ಟಿ ಶಾಂತಕುಮಾರ್ ಅಭಿಮಾನಿಗಳು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಗೆ ಯತ್ನಿಸಿ,ಅವಮಾನಿಸಿರು ಘಟನೆ ಘಟನೆ ಹಚ್ಚ ಹಸಿರಾಗಿರುವ ಸಮಯದಲ್ಲಿ ಮತ್ತೊಂದು ಘಟನೆ ಅದೇ ಬೆಂಬಲಿಗರಿಂದ ತಿಪಟೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾವೇಶದಲ್ಲಿ ವರದಿ ಮಾಡಲು ತೆರಳಿದ ಮಾಧ್ಯಮ ಪ್ರತಿನಿಧಿಗಳನ್ನ ತಳಿ ಹಲ್ಲೆ ನಡೆಸಲು ಯತ್ನಿಸಿದ ಘಟನೆ ನಡೆಯಿತು

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸುವ ವೇಳೆ ವೇದಿಕೆ ಬಳಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಪತ್ರಕರ್ತರನ್ನ ತಡೆದ ಕೆ.ಟಿ ಶಾಂತಕುಮಾರ್ ಬೆಂಬಲಿಗರಾದ ಸುದರ್ಶನ ಇಮ್ರಾನ್ ಮತ್ತು ಮತ್ತೋರ್ವ ಬೆಂಬಲಿಗ ನೀವು ಪತ್ರಕರ್ತರಾದರೇನು ಹೊರನಡೆಯಿರಿ ಎಂದು ತಳಿ ಹಲ್ಲೆಗೆ ಮುಂದಾಗಿದ್ದು,

ಕೆ.ಟಿ.ಶಾಂತಕುಮಾರ್ ಅಭಿಮಾನಿಗಳ ಗುಂಡಾವರ್ತನೆಯಿಂದ ಪತ್ರಕರ್ತರು ಸಮಾವೇಶವನ್ನ ಬಹಿಷ್ಕರಿಸಿ ಹೊರನಡೆದಾಗ ಮಧ್ಯ ಪ್ರವೇಶಿಸಿದ ಜೆಡಿಎಸ್ ಮುಖಂಡರು ಕೆ.ಟಿ ಶಾಂತಕುಮಾರ್ ಅವಿವೇಕದ ವರ್ತನೆಗೆ ಮಾಧ್ಯಮ ಪ್ರತಿನಿಧಿಗಳ ಕ್ಷಮೆಯಾಚಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಈ ಘಟನೆಯನ್ನೇ ನೆಪವಾಗಿಟ್ಟುಕೊಂಡ ಆ ಬೆಂಬಲಿಗರು,ತಿಪಟೂರಿನ ಕೆಲವು ಮೊಬೈಲ್ ವಾಟ್ಸಪ್ (ಸಾಮಾಜಿಕ ಜಾಲತಾಣ)ಗಳಲ್ಲಿ ತಿಪಟೂರಿನ ಪತ್ರಕರ್ತರನ್ನು ಹೀಯಾಳಿಸಿ ನಿಂದಿಸಿರುತ್ತಾರೆ.
ಪತ್ರಕರ್ತರ ಮೇಲೆ ಬೆದರಿಕೆ ಹಾಕಿದವರನ್ನು ಕೂಡಲೇ ಬಂಧಿಸಲು ಪತ್ರಕರ್ತರು ಆಗ್ರಹಿಸುತ್ತಿದ್ದಾರೆ