ಹೊಸಕೆರೆ : ಯಾವುದೇ ಬೆಳಗಳಿಗೂ ಸಹ ಸರ್ಕಾರ ವೈಜ್ಞಾನಿಕ ಬೆಲೆಯನ್ನು ನೀಡದೆ ರೈತರ ರಕ್ತ ಹೀರುತಿದೆ, ಕೊಬ್ಬರಿಗೆ ಬೆಂಬಲ ಬೆಲೆ ಸಾಲುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಹೇಳಿದರು.
ಗುಬ್ಬಿ ತಾಲೂಕಿನ ಹಾಗಲವಾಡಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೂತನ ರೈತ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಸರಕಾರಗಳು ಬಂದರೂ ಸಹ ರೈತರ ಸಮಸ್ಯೆಗಳನ್ನು ಮಾತ್ರ ಬಗೆಹರಿಸುತ್ತಿಲ್ಲ, ನಾವೆಲ್ಲರೂ ಸಹ ಒಗ್ಗಟ್ಟಿನಿಂದ ಹೋರಾಟ ಮಾಡಿದಾಗ ಮಾತ್ರ ನಮ್ಮ ಸಮಸ್ಯೆಗಳು ಬಗೆಹರಿಸಿ ಕೊಳಲು ಸಾಧ್ಯವಾಗುತ್ತದೆ ಈಗಿನ ಸರಕಾರ ರೈತರ ಬದಲಿಗೆ ದೊಡ್ಡ ದೊಡ್ಡ ಕೈಗಾರಿಕಾ ಉದ್ಯಮಿಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ಮಾಡುತ್ತಿದ್ದು ಅದಾನಿ ಅಂಬಾನಿಯಂತಹ ವ್ಯಕ್ತಿಗಳು ಕೋಟಿಗಟ್ಟಲೆ ಹಣವನ್ನು ಮಾಡುತ್ತಿದ್ದಾರೆ ವಿಶ್ವದ ಶ್ರೀಮಂತರು ಆಗುತ್ತಿದ್ದಾರೆ ಆದರೆ ಕಷ್ಟಪಟ್ಟು ದುಡಿಯುವಂತಹ ರೈತರಿಗೆ ಯಾವುದೇ ರೀತಿಯ ಶಾಶ್ವತವಾದ ಯೋಜನೆಗಳನ್ನು ನೀಡುತ್ತಿಲ್ಲ ಎಂದು ದೂರಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ ತಾಲೂಕಿನ ಗಡಿಭಾಗವಾದ ಹಾಗಲವಾಡಿಯಲ್ಲಿ ಯಾವುದೇ ಅಭಿವೃದ್ಧಿ ಕಂಡಿಲ್ಲ ಇಲ್ಲಿನ ಕೆರೆಗೆ ನೀರು ಹರಿಸವಲ್ಲಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ವಿಫಲವಾಗಿದ್ದಾರೆ ರೈತರನ್ನು ಎದುರು ಹಾಕಿಕೊಂಡು ಇದುವರೆಗೂ ಯಾವ ಸರ್ಕಾರ ಗಳು ಕೆಲಸ ಮಾಡಲು ಸಾಧ್ಯವಾಗಿಲ್ಲ ಆಡಳಿತ ಮಾಡಿರುವ ಗುಂಡೂರಾವ್ ಸರ್ಕಾರದಿಂದ ಹಿಡಿದು ಬೊಮ್ಮಾಯಿ ಸರ್ಕಾರದ ವರೆಗೆ ಯಾವುದೇ ಸರ್ಕಾರ ಬಂದರು ಸಹ ರೈತರ ಪರವಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಹೋಬಳಿ ಘಟಕದ ಅಧ್ಯಕ್ಷ ಕೃಷ್ಣ ಜೆಟ್ಟಿ ಮಾತನಾಡಿ ನಮ್ಮ ಹೋಬಳಿಗೆ ಯಾವುದೇ ಜನ ಪ್ರತಿನಿದಿಗಳಿಂದ ಅಭಿವೃದ್ಧಿಯಾಗಿಲ್ಲ ಈ ಭಾರಿ ಚುನಾವಣೆಗೆ ಮತ ಕೇಳಲು ಬಂದರೆ ಸರಿಯಾದ ಶಾಸ್ತಿ ಮಾಡುತ್ತೇವೆ ಹಾಗೂ ಮತದಾನ ಬಾಹಿಷ್ಕರ ಮಾಡಲು ಸಹ ನಾವು ಸಿದ್ದರಿದ್ದೇವೆ ಎಂದು ತಿಳಿಸಿದರು.
ರೈತ ಮುಖಂಡ ಶಂಕರ್ ಮಾತನಾಡಿ ಹೋಬಳಿ ಮಟ್ಟದಲ್ಲಿ ರೈತ ಕಚೇರಿ ತೆರೆದಿದ್ದು ಇಲ್ಲಿನ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ರೈತ ಸಂಘದ ವತಿಯಿಂದ ರಕ್ತದಾನ ಶಿಬಿರ ಮಾಡಲಾಯಿತು ಮತ್ತು ಸಾಮಾಜಿಕ ಸೇವೆ ಮಾಡುತ್ತಿರುವಂತಹ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೋಬಳಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಿಂಗರಾಜು ರೈತ ಮುಖಂಡರಾದ ಚೆನ್ನಬಸವಣ್ಣ.ಮಹಾಲಿಂಗಪ್ಪ. ಶಿವರಾಜ್ ಕುಮಾರ್. ಬಾಣೇಶ್. ಚಿದಾನಂದ. ಚಿಕ್ಕಣ್ಣ. ಕೆಂಪಣ್ಣ.ರಂಗಸ್ವಾಮಯ್ಯ ಇದ್ದರು.