ಫೆ14 ಮತ್ತು 15 ರಂದು ಪ್ರಸಿದ್ದ ಹೊದಲೂರು ಜಾತ್ರೆ.

ಗುಬ್ಬಿ : ತಾಲೂಕಿನ ಹೊದಲೂರು ಗ್ರಾಮದ ಆರಾಧ್ಯ ದೈವ ಶ್ರೀ ಕೆಂಪಮ್ಮ ದೇವಿ ಮತ್ತು ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ಜಾತ್ರಾ ಮಹೋತ್ಸವ ಇದೇ ತಿಂಗಳ 14 ಮಂಗಳವಾರ ಮತ್ತು 15 ಬುಧವಾರ ನಡೆಯಲಿದೆ.

ಅಗ್ನಿಕೊಂಡ ಮತ್ತು ಸೋಮನ ಕುಣಿತ ಜೊತೆಗೆ ಇಡೀ ರಾತ್ರಿ ಎಲ್ಲಾ ದೇವರ ಉತ್ಸವ ಮತ್ತು ಬುಧವಾರ ಬೆಳಗಿನ ಜಾವ ಅಗ್ನಿಕೊಂಡ ಮುಗಿದ ಮೇಲೆ ಆರತಿ ಮೆರವಣಿಗೆ ಮತ್ತು ಮನೆ ಮನೆಗೆ ದೇವರ ಮೆರವಣಿಗೆ ನಡೆಯಲಿದೆ. ನಾನಾ ಭಾಗದಿಂದ ಸಾವಿರಾರು ಭಕ್ತರು ಆಗಮಿಸಿ ಹರಕೆ ತೀರಿಸಿ ಪೂಜೆ ಸಲ್ಲಿಸುತ್ತಾರೆ. ಗ್ರಾಮದ ಈ ಹಬ್ಬ ಇತಿಹಾಸ ಪ್ರಸಿದ್ದವಾಗಿದೆ. ಹೊದಲೂರಮ್ಮನ ಜಾತ್ರೆ ಎಂದೇ ಖ್ಯಾತಿ ಪಡೆದ ಈ ಜಾತ್ರೆಗೆ ಭಕ್ತಾದಿಗಳು ಆಗಮಿಸಲು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!