ಗುಬ್ಬಿ: ಚಿಕ್ಕಹಡಿಗೇಹಳ್ಳಿ ಬಳಿ ರಾಷ್ಟ್ರೀಯ ಪ್ರಾಣಿ ಹುಲಿಯ ಶವ ಪತ್ತೆ…!!

ಗುಬ್ಬಿ: ಸೇತುವೆಯಡಿ ಮಲಗಿರುವ ರೀತಿಯಲ್ಲಿ ಪತ್ತೆಯಾದ ಹುಲಿ ಕಳೇಬರ ಸುತ್ತಲ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ರಾಷ್ಟ್ರೀಯ ಪ್ರಾಣಿ ಹುಲಿಯ ಮಾಹಿತಿ ಇಲ್ಲದ ತುಮಕೂರು ಜಿಲ್ಲೆಯಲ್ಲಿ ಹುಲಿ ಶವ ಅರಣ್ಯ ಇಲಾಖೆಗೂ ಸಹ ಅಚ್ಚರಿ ಮತ್ತೇ ಅನುಮಾನ ತಂದ ಘಟನೆ ತಾಲ್ಲೂಕಿನ ಹಾಗಲವಾಡಿ ಹೋಬಳಿ ಚಿಕ್ಕಹಡಿಗೇಹಳ್ಳಿ ಬಳಿಯಲ್ಲಿ ನಡೆದಿದೆ.

ಬೆಳಿಗ್ಗೆ ನಾಯಿಗಳ ಗಲಾಟೆ ಮಾಡುತ್ತಿದ್ದ ಹಿನ್ನಲೆ ಸ್ಥಳೀಯರು ಗಮನಿಸಿದಾಗ ಮಲಗಿರುವ ಹುಲಿ ಕಂಡಿದೆ. ಗಾಬರಿಯಾದ ಜನ ಅರಣ್ಯ ಇಲಾಖೆಗೆ ಮಾಹಿತಿ ಹಾಕಿದರು. ಬಹಳ ಸಮಯ ಹಾಗೆಯೇ ಇದ್ದ ಹುಲಿ ಸತ್ತಿರುವ ಶಂಕೆ ವ್ಯಕ್ತ ಪಡಿಸಿ ಆ ಸ್ಥಳವನ್ನು ಸುತ್ತವರಿದ ಅರಣ್ಯ ಇಲಾಖೆ ಸಿಬ್ಬಂದಿ ಮೇಲಾಧಿಕಾರಿಗಳ ಬರುವಿಕೆಗೆ ಕಾದಿದ್ದಾರೆ. ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಹುಲಿಯ ಶವ ಪತ್ತೆ ನಮಗೂ ಅಚ್ಚರಿ ತಂದಿದೆ. ಹುಲಿಯೇ ಇಲ್ಲದ ನಮ್ಮ ಪ್ರದೇಶದಲ್ಲಿ ಹುಲಿ ಕಳೇಬರ ಅನುಮಾನಕ್ಕೂ ದೂಡಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ ಮೇಲಾಧಿಕಾರಿಗಳ ಬಂದ ಬಳಿಕ ಸೂಕ್ತ ತನಿಖೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಸುಮಾರು 700 ಎಕರೆ ಅರಣ್ಯ ಪ್ರದೇಶದ ಇಲ್ಲಿ ಚಿರತೆ ಕರಡಿ ಕಂಡ ಬಗ್ಗೆ ಸ್ಥಳೀಯರು ಹೇಳುತ್ತಾರೆ. ಹುಲಿ ಪ್ರತ್ಯಕ್ಷ ಬಗ್ಗೆ ಗ್ರಾಮಸ್ಥರಿಗೆ ಆತಂಕ ಅಚ್ಚರಿ ಎರಡೂ ಒಟ್ಟಿಗೆ ಕಂಡಿದೆ. ಈ ಅರಣ್ಯದಲ್ಲಿ ಮೊದಲಿನಿಂದ ಓಡಾಡುವ ಜನರ ಪ್ರಕಾರ ಹುಲಿಯ ಗುರುತು ಎಂದೂ ಕಂಡಿಲ್ಲ. ಕೆಲವರು ಹೇಳುವ ಪ್ರಕಾರ ಅರಣ್ಯದಲ್ಲಿ ಕೆಲ ರಿಮೂಟ್ ಏರಿಯಾ ಕೂಡಾ ಇದ್ದು, ಕೃಷ್ಣ ಕಲ್ಲು ಗುಡ್ಡ ಎಂಬ ಸ್ಥಳ ಗುಹೆಗಳು ಹೆಚ್ಚಿವೆ. ಯಾರೂ ಸುಳಿಯದ ಈ ಜಾಗದಲ್ಲಿ ಹುಲಿ ಇತ್ತೇ ಎಂಬ ಅನುಮಾನ ಕೂಡಾ ವ್ಯಕ್ತವಾಯಿತು. ಈ ಮಿಶ್ರ ಪ್ರತಿಕ್ರಿಯೆಯ ನಡುವೆ ಅರಣ್ಯ ಇಲಾಖೆ ಹುಲಿಯು ನಮ್ಮ ಜಿಲ್ಲೆಯಲ್ಲಿಲ್ಲ. ದಟ್ಟ ಅಡವಿಯ ಸ್ಥಳ ಹೊರತಾಗಿ ಇಂತಹ ಗುಡ್ಡಗಳು ಕುರುಚಲು ಅರಣ್ಯದಲ್ಲಿ ಹುಲಿ ಪತ್ತೆ ಅನುಮಾನ ಮೂಡಿಸಿದೆ. ಸ್ಥಳಕ್ಕೆ ಉನ್ನತ ಅಧಿಕಾರಿಗಳ ಭೇಟಿಯ ನಂತರ ಮುಂದಿನ ತನಿಖೆಯಿಂದ ಹುಲಿ ಸಾವಿಗೆ ಕಾರಣ ತಿಳಿಯಲಿದೆ.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ..

You May Also Like

error: Content is protected !!