ಗುಬ್ಬಿ: ವಿದ್ಯುತ್ ಸರಬರಾಜು ಮಾಡದಿದ್ದಕ್ಕೆ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪೋಲೀಸ್ ದೂರು!

ಗುಬ್ಬಿ: ರೈತರು ಭಾರತದ ಬೆನ್ನೆಲುಬು ಎನ್ನುತ್ತಾರೆ ಆದರೆ ಪ್ರತಿದಿನ ರೈತರಿಗೆ ಸಮಸ್ಯೆಗಳು ನೂರಾರು ಅಂಥದರಲ್ಲಿ ಬೆಸ್ಕಾಂ ಇಲಾಖೆ ಒಂದು ಸರ್ಕಾರ ರಾತ್ರಿ ಪಾಳಿ ಮತ್ತು ಹಗಲು ಮಳೆಯಿಂದ ನಿರಂತರ ಗುಣಮಟ್ಟದ 7 ಗಂಟೆಗಳ ಕಾಲ ವಿದ್ಯುತ್‌ ಸರಬರಾಜು ಮಾಡಲು ಆದೇಶ ಮಾಡಿದ್ದು, ಆದರೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ನೌಕರರು ಸರ್ಕಾರದ ಆದೇಶವನ್ನು ಪಾಲಿಸದೇ ರಾತ್ರಿ ಮತ್ತು ಹಗಲು ಪಾಳಿಯ ಪಟ್ಟಿಯಂತರ ವಿದ್ಯುತ್‌ ಸರಬರಾಜು ಮಾಡದೇ ರೈತರಿಗೆ ತೊಂದರೆ ನೀಡುತ್ತಾರೆ,

ಪ್ರತಿ ದಿನ ಬೆಸ್ಕಾಂ ಇಲಾಖೆಯ ಕಿರುಕುಳ ತಾಳಲಾರದೆ ಬೆಸ್ಕಾಂ ಇಲಾಖೆ ವಿರುದ್ದ ಗುಬ್ಬಿ ತಾಲ್ಲೂಕಿನ ಅದಲಗೆರೆ ಯುವ ಮುಖಂಡ ಶ್ರೀನಿವಾಸ್ ಪೋಲಿಸ್ ಕಂಪ್ಲೆಟ್ ನೀಡಿದ್ದಾರೆ. ವಿಭಾಗಾಧಿಕಾರಿ ನಿಟ್ಟೂರು, ಸೂಪರಿಂಡೆಂಟ್ ಇಂಜಿನಿಯರ್ ತುಮಕೂರು, ಕಾರ್ಯನಿರ್ವಾಹಕ ಇಂಜಿನಿಯರ್ ತುಮಕೂರು, ಮುಖ್ಯ ಇಂಜಿನಿಯರ್ ಚಿತ್ರದುರ್ಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಿಟ್ಟೂರು ಗುಬ್ಬಿತಾಲ್ಲೂಕು, ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಯುವ ಮುಖಂಡ ಶ್ರೀನಿವಾಸ್ ಅದಲಗೆರೆ ಒತ್ತಾಯಿಸಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!