ಬೆಳ್ಳಾವಿ ಹೋಬಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಚಾಲನೆ ನೀಡಿದ ಜನಪ್ರಿಯ ಶಾಸಕ ಡಿ.ಸಿ. ಗೌರಿಶಂಕರ್

ತುಮಕೂರು ತಾಲೂಕು ಬೆಳ್ಳಾವಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಗುರುವಾರ ಶಾಸಕ ಡಿ.ಸಿ. ಗೌರಿಶಂಕರ್ ಸುಮಾರು 3.85 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ 14 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರು ವಿವಿಧ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗಳಿಗೆ ಚಾಲನೆ ನೀಡಿದರು.

ತಾಲೂಕಿನ ಬೆಳ್ಳಾವಿ ಹೋಬಳಿ, ಬೆಳ್ಳಾವಿ ಕ್ರಾಸ್’ನಿಂದ ಕೆಸ್ತೂರು ಮಾರ್ಗದ ರಸ್ತೆ ಅಭಿವೃದ್ಧಿಗಾಗಿ ಹಾಗೂ ಡಾಂಬರೀಕರಣಕ್ಕಾಗಿ ಶಾಸಕ ಡಿ.ಸಿ. ಗೌರಿಶಂಕರ್ ತಮ್ಮ ಅನುದಾನದ ಅಡಿಯಲ್ಲಿ 10 ಕೋಟಿ ರೂಗಳನ್ನು ಮಂಜೂರು ಮಾಡಿದ್ದು, ಗುರುವಾರ ಮಧ್ಯಾಹ್ನ ಬುಲ್ಡೋಜರ್ ಚಾಲನೆ ಮಾಡುವುದರ ಮೂಲಕ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.

ಇದೇ ವೇಳೆ ಶಾಸಕರು ಬೆಳ್ಳಾವಿ ಗ್ರಾಮದಿಂದ ದೊಡ್ಡೇರಿ ಮಾರ್ಗವಾಗಿ ದೊಡ್ಡವೀರನಹಳ್ಳಿ ತಲುಪುವ ರಸ್ತೆಗೆ 4 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ರಸ್ತೆ ಡಾಂಬರೀಕರಣ ಕಾಮಗಾರಿ ಹಾಗೂ ಬುಗುಡನಹಳ್ಳಿಯಿಂದ ಬೆಳ್ಳಾವಿಯ ವರೆಗೆ ರಸ್ತೆ ರೀ-ಸರ್ಫೇಸಿಂಗ್ ಕಾಮಗಾರಿಗೆ ಚಾಲನೆ ನೀಡಿದರು.

ತಾಲ್ಲೋಕಿನ ಬೆಳ್ಳಾವಿ ಗ್ರಾಮದಲ್ಲಿ ಶಾಸಕರ ಅನುದಾನದ 2.5 ಕೋಟಿ ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲೆ(ಕೆ.ಪಿ.ಎಸ್)ಯ 9 ಕೊಠಡಿಗಳು ಹಾಗೂ ಕು.ವೆಂ.ಪು. ಸರ್ಕಾರಿ‌ಮಾದರೀ ಪ್ರಾಥಮಿಕ ಶಾಲೆಯ 10 ಕೊಠಡಿಗಳನ್ನು ಉದ್ಘಾಟಸಿದರು. ಗ್ರಾಮದ ರಾಜಬೀದಿಯ ರಸ್ತೆಯನ್ನು ಸುಮಾರು 50 ಲಕ್ಷ ರೂ ವ್ಯಚ್ಚದಲ್ಲಿ ಸಿ.ಸಿ‌.ರಸ್ತೆಯಾಗಿ ಅಭಿವೃದ್ಧಿಪಡಿಸಿದ್ದು, ಅದನ್ನು ಲೋಕಾರ್ಪಣೆಗೊಳಿಸಲಾಯಿತು. ಇನ್ನು 85ಲಕ್ಷ ರೂಗಳಲ್ಲಿ ಗ್ರಾಮದ ಮನೆಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮನೆ-ಮನೆಗೆ ನಳ ಸಂಪರ್ಕ ಕಾಮಗಾರಿಯನ್ನೂ ಸಹ ಶಾಸಕರು ಉದ್ಘಾಟಸಿದರು.

ಈ ವೇಳೆ ಕಾಮಗಾರಿಗಳನ್ನು ಉದ್ಘಾಟಿಸಿ ಹಾಗೂ ಚಾಲನೆ ನೀಡಿ ಮಾತನಾಡಿದ ಶಾಸಕರು ತಮ್ಮ ಕಾಲಾವಧಿಯಲ್ಲಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮಕ್ಕೂ ಮೂಲಭೂತ ಸೌಕರ್ಯಗಳನ್ನು ಉತ್ಕೃಷ್ಟ ಮಟ್ಟದಲ್ಲಿ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಕ್ಷೇತ್ರದಾದ್ಯಂತ ಸಿ.ಸಿ.ರಸ್ತೆ, ಚರಂಡಿ ಕಾಮಗಾರಿ, ಶುದ್ದ ಕುಡಿಯುವ ನೀರಿನ ಘಟಕ ಮನೆಮನೆಗಳಿಗೆ ನಳ ಸಂಪರ್ಕ,
ರಸ್ತೆ ಡಾಂಬರೀಕರಣ, ಶಾಲೆಗಳ ಅಭಿವೃದ್ಧಿ ಆಸ್ಪತ್ರೆಗಳ ಅಭಿವೃದ್ಧಿ, ದೇವಾಲಯಗಳ ನಿರ್ಮಾಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಉತ್ತಮವಾಗಿ ಕೆಲಸ ನಿರ್ವಹಿಸಿದ್ದು ಗ್ರಾಮಾಂತರ ವಿಧನಸಭಾ ಕ್ಷೇತ್ರವನ್ನು ಮಾದರೀ ಕ್ಷೇತ್ರವನ್ನಾಗಿ ಮಾಡುವುದು ತಮ್ಮ ಗುರಿ ಮತ್ತು ಕನಸಾಗಿದೆ ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಹಾಲನೂರು ಅನಂತ್ ಕುಮಾರ್, ಹಿರೇಹಳ್ಳಿ ಮಹೇಶ್, ಸೇರಿದಂತೆ ಸ್ಥಳೀಯ ಮುಖಂಡರು, ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!