ಕೊರಟಗೆರೆ ;- ಶಿವರಾತ್ರಿ ಹಬ್ಬದ ಜಾಗರಣೆ ಅಂಗವಾಗಿ ಕೊರಟಗೆರೆ ಗಂಗಾಧರೇಶ್ವರಸ್ವಾಮಿ ಬೆಟ್ಟದಲ್ಲಿ ಶ್ರೀ ನಾಢಪ್ರಭು ರಣಬೈರೇಗೌಡ ಯುವ ಸೇವ ಸಂಘದ ಮತ್ತು ಕೊರಟಗೆರೆ ಪ್ರೇಂಡ್ಸ್ ಗ್ರೂಪ್ ಸೇವಾ ಸಮಿತಿ ಸಹಯೋಗದಲ್ಲಿ ಫೆ.18 ರಂದು ವೈಭವದ ಲಕ್ಷದೀಪೋತ್ಸವ ಕಾರ್ಯಕ್ರಮ ಏರ್ಪಡಿಸಿರುವುದಾಗಿ ದೇವಾಲಯ ಅಭಿವೃಧ್ದಿ ಸಮಿತಿ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ತಿಳಿಸಿದ್ದಾರೆ.
ಅವರು ಪತ್ರಿಕಾ ಪ್ರಕಟಣೆ ನೀಡಿ ಕೊರಟಗೆರೆ ಪಟ್ಟಣದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಪಟ್ಟಣದ ಶ್ರೀ ನಾಢಪ್ರಭು ರಣಬೈರೇಗೌಡಯುವ ಸೇವ ಸಂಘದ ಮತ್ತು ಕೊರಟಗೆರೆ ಪ್ರೇಂಡ್ಸ್ ಗ್ರೂಪ್ ಸೇವಾ ಸಮಿತಿ ಸಹಯೋಗದಲ್ಲಿ ಗಂಗಾಧರೇಶ್ವನಿಗೆ ವಿಶೇಷ ಪೊಜೆ ಕಾರ್ಯಕ್ರಮದೊಂದಿಗೆ ವೈಭವದ ಲಕ್ಷದೀಪೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಫೆ.18 ರಂದು ಶನಿವಾರ ಸಂಜೆ ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾಮಠದ ಪೀಠಾಧ್ಯಕ್ಷ ಶ್ರೀ
ವೀರಭದ್ರಶಿವಾಚಾರ್ಯಸ್ವಾಮೀಜಿಗಳ ದಿವ್ಯಸಾನಿ ದ್ಯದಲ್ಲಿ
ಕ್ಷೇತ್ರದ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಲಕ್ಷದೀಪೋತ್ಸವವನ್ನು ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಎಂ.ರುದ್ರಪ್ರಸಾದ್, ಪ.ಪಂ.ಅಧ್ಯಕ್ಷ ಕಾವ್ಯಶ್ರೀ ರಮೇಶ್, ಉಪಧ್ಯಕ್ಷೆ ಬಾರತಿಸಿದ್ದಮಲ್ಲಯ್ಯ,
ತಹಶೀಲ್ದಾರ್ ಮುನಿಶಾಮರೆಡ್ಡಿ, ಸಿಪಿಐ ಕೆ.ಸುರೇಶ್, ಪ.ಪಂ.ಮುಖ್ಯಾಧಿಕಾರಿ ಭಾಗ್ಯಮ್ಮ, ಪ.ಪಂ.ಸದಸ್ಯರಾದ ಎ.ಡಿ.ಬಲರಾಮಯ್ಯ, ಕೆ.ಎನ್.ಲಕ್ಷಿö್ಮನಾರಾಯಣ್,
ಕೆ.ಆರ್.ಓಬಳರಾಜು, ಗೊರವನಹಳ್ಳಿ ಶ್ರೀಮಹಾಲಕ್ಷಿö್ಮ
ದೇವಾಲಯ ಟ್ರಸ್ಟ್ ಅಧ್ಯಕ್ಷ ವಾಸುದೇವ್, ಬಿಜೆಪಿ ತಾಲೂಕು
ಅಧ್ಯಕ್ಷ ಪವನ್ ಕುಮಾರ್, ನಗರಸಭಾ ಮಾಜಿ ಉಪಾಧ್ಯಕ್ಷ ವಾಲೆಚಂದ್ರಯ್ಯ, ಕೆ.ಪಿ.ಸಿ.ಸಿ ಕಾರ್ಯದರ್ಶಿ ದಿನೇಶ್, ರಣಬೈರೇಗೌಡ ಯುವ ಸೇವಾ ಸಂಘದ ಅಧ್ಯಕ್ಷ ಕೆ.ವಿ.ಮಂಜುನಾಥ್, ಪ್ರೇಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‌ಕುಮಾರ್, ಸ್ಪೋಟ್ಸ್ಕ್ಲಬ್‌ನ ಕೆ.ಮಂಜುನಾಥ್, ಕೆ.ಬಿ.ಲೋಕೇಶ್, ಕೆ.ಎಂ. ಸುರೇಶ್, ಪ್ರದೀಪ್, ಶಿವಶಂಕರ್, ನಾಗರಾಜು ಸೇರಿದಂತೆ ಇನ್ನಿತರರ ಮುಖಂಡರು ಭಾಗವಹಿಸುವರು.