ಹೆಲ್ಪ್ ಸೊಸೈಟಿ ವತಿಯಿಂದ ಶಿವರಾತ್ರಿ ಸಾಂಸ್ಕೃತಿಕ ಉತ್ಸವ

ಪಾವಗಡ. ಪಟ್ಟಣದ ಎಸ್. ಎಸ್. ಕೆ .ಬಯಲು ರಂಗ ಮಂದಿರದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಹೆಲ್ಪ್ ಸೊಸೈಟಿ ವತಿಯಿಂದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹೆಚ್. ವಿ. ವೆಂಕಟೇಶ್ ರವರು ಹೆಲ್ಪ್ ಸೊಸೈಟಿ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಕೊಂಡಾಡಿದರು ಹೆಲ್ಪ್ ಸೊಸೈಟಿಯ ನೀಡಿದ ಮನವಿ ಸ್ವೀಕರಿಸಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಬಡ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿಗೆ ಸಹಾಯ ಸಹಕಾರ ನೀಡಲಾಗುವುದೆಂದು ತಿಳಿಸಿದರು

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕಟ್ಟಾ ನರಸಿಂಹಮೂರ್ತಿ ಅವರು ಮಾತನಾಡಿ ಶಿವರಾತ್ರಿ ಹಬ್ಬದ ದಿನ ತಾಲೂಕಿನ ಜನತೆಗೆ ದೈವ ಭಕ್ತಿಯ ಭಕ್ತಿ ಗೀತೆಗಳು ಜೊತೆ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ನೀಡಿರುವುದಕ್ಕೆ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು

ಯುವ ಮುಖಂಡ ಪಾಳೇಗಾರ ಲೋಕೇಶ್ ಮಾತನಾಡಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಹೆಲ್ಪ್ ಸೊಸೈಟಿ ಬಡವರ ದೀನದಲಿತರ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುತ್ತಿರುವ ಸಂಸ್ಥೆ ಇನ್ನೂ ಉತ್ತಮ ಮಟ್ಟಕ್ಕೆ ಬೆಳೆಯಲಿ ಎಂದು ತಿಳಿಸಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾನಂ ವೆಂಕಟಸ್ವಾಮಿ ಮಾತನಾಡಿ ಸಂಸ್ಥೆಯು ಶಿವರಾತ್ರಿ ಹಬ್ಬದ ದಿನ ಭಕ್ತಿಯ ಲೋಕಕ್ಕೆ ಭಕ್ತರನ್ನು ಹಾಗೂ ಶಾಲಾ ಮಕ್ಕಳನ್ನು ಕರೆದೊಯ್ಯುವಂತಹ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇನ್ನು ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ತಿಳಿಸಿದರು

ಕಾರ್ಯಕ್ರಮವನ್ನು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್. ಸ್ವಾಗತಿಸಿದರು . ನಿರೂಪಣೆಸತ್ಯ ಲೋಕೇಶ್. ವಂದನಾರ್ಪಣೆ ಬೇಕರಿ ನಾಗರಾಜ್ ಇವರು ಉತ್ತಮವಾಗಿ ನಡೆಸಿಕೊಟ್ಟರು

ಕಾರ್ಯಕ್ರಮದಲ್ಲಿ
ವೃತ್ತ ನಿರೀಕ್ಷಕರಾದ ಅಜಯ್ ಸಾರಥಿ. ಖ್ಯಾತ ವೈದ್ಯರಾದ ಶಶಿಕಿರಣ್. ರೋಟರಿ ಅಧ್ಯಕ್ಷ ಪುರುಷೋತ್ತಮ್ ರೆಡ್ಡಿ. ಶಾಂತಿ ಮೆಡಿಕಲ್ಸ್ ದೇವರಾಜ್. ಪುರಸಭೆ ಸದಸ್ಯ ಗೋರ್ತಿ ನಾಗರಾಜ್. ಪರಮೇಶ್. ನವೀನ್ ಕುಮಾರ್. ಭಾಸ್ಕರ್ ನಾಯ್ಡು. ಸುರೇಂದ್ರ ಮುಂತಾದವರು ಭಾಗವಹಿಸಿದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!