:
ಬಾದಾಮಿ: ಚಾಲುಕ್ಯರ ನಾಡಿನಿಂದ ಗಣಿ ಧನಿ ಗಾಲಿ ಜನಾರ್ಧನ ರೆಡ್ಡಿ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ( KRPP) ಬಾದಾಮಿ ಮತಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಯುವ ಚೇತನ ಹೋರಾಟಗಾರ ಪ್ರಬಲ ಚುನಾವಣಾ ಸ್ಪರ್ಧಿ ಬಾದಾಮಿ ಮತಕ್ಷೇತ್ರದಲ್ಲಿ ಧ್ಯುಳೆಬ್ಬಿಸಲು ಸಜ್ಜಾದ ಗಣಿ ಧಣಿ ಜನಾರ್ಧನ ರೆಡ್ಡಿ ಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ.#
2023 ರ ವಿಧಾನಸಭಾ ಚುನಾವಣೆಗೆ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಯವರ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಭಸ ರಾಜ್ಯದಲ್ಲಿ ಧುಳೆಬ್ಬಿಸುತ್ತಿದೆ..ಜನಾರ್ಧನ ರೆಡ್ಡಿ ಹೋದ ಕಡೆಯಲ್ಲೆಲ್ಲ ಅಪಾರ ಜನಸ್ತೋಮ ಬೆಂಬಲ ನೀಡಿ ಪಕ್ಷ ಸೇರ್ಪಡೆ ಯಾಗುತ್ತಿರುವ ಬೆನ್ನಲ್ಲೇ ರಾಜ್ಯದ ಗಮನ ಸೆಳೆದ ಬಾದಾಮಿ ಮತಕ್ಷೇತ್ರದ ಕಲ್ಯಾಣ ಪ್ರಗತಿ ಪಕ್ಷದಿಂದ ಎರಡು ಸಾರಿ ವಿಧಾನಸಭೆಗೆ ಬಾದಾಮಿ ಮತಕ್ಷೇತ್ರದ ದಿಂದ ಸ್ಪರ್ಧೆ ಮಾಡಿರುವ,ಹಾಗೂ ಮತಕ್ಷೇತ್ರ ದ ದೊಡ್ಡ ಸಮುದಾಯದಲ್ಲಿ ಒಂದಾಗಿರುವ ವಾಲ್ಮೀಕಿ ನಾಯಕ ಸಮುದಾಯಗಳ ಹಾಗೂ ಅಹಿಂದ ಮುಖಂಡರು ಆಗಿರುವ ಹೋರಾಟಗಾರ ಯುವ ಚೇತನ ಲಕ್ಷಣ ಮರಡಿತೋಟ ಸುಮಾರು 200 ಜನ ಬೆಂಬಲಿಗರೊಂದಿಗೆ ಜನಾರ್ಧನ ರೆಡ್ಡಿ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡು ಬಾದಾಮಿ ಮತಕ್ಷೇತ್ರದ ಅಧಿಕೃತ ಅಭ್ಯರ್ಥಿ ಎಂದು ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಪಕ್ಷದ ಸಂಸ್ಥಾಪಕ ಜನಾರ್ಧನ ರೆಡ್ಡಿ ಘೋಷಣೆ ಮಾಡಿ ಈ ಯುವಚೆತನವನ್ನು ಗೆದ್ದೇ ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.
ಒಟ್ಟಾರೆಯಾಗಿ ಚಾಲುಕ್ಯರ ನಾಡು ಬಾದಾಮಿ ಮತಕ್ಷೇತ್ರದಲ್ಲಿ ಧುಳೆಬ್ಬಿಸಲು ಗಣಿ ಧಣಿ ಜನಾರ್ಧನ ರೆಡ್ಡಿ ಯವರ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ.
ಸದ್ಯದ ರಲ್ಲೇ ಬಾದಾಮಿ ಮತಕ್ಷೇತ್ರದಲ್ಲಿ ಪಕ್ಷದ ಸಂಸ್ಥಾಪಕ ಜನಾರ್ಧನ ರೆಡ್ಡಿ ಅವರ ಸಮ್ಮುಖದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ಪಕ್ಷದ ಅಧಿಕೃತ ಸ್ಪರ್ಧಿ ಯುವ ಚೇತನ ಲಕ್ಷ್ಮಣ ಮರಡಿ ತೋಟ ಮಾದ್ಯಮಕ್ಕೆ ತಿಳಿಸಿದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ