ಕೊರಟಗೆರೆ : ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಬಸ್ ಮತ್ತು ಲಾರಿ ನಡುವೆ ಅಪಘಾತವಾಗಿದ್ದು, ೭೫ ಕ್ಕೂ ಅಧಿಕ ಮಹಿಳಾ ಕಾರ್ಮಿಕರು ಯಾವುದೇ ಪ್ರಾಣಹಾನಿ ಇಲ್ಲದೇ ಬಚಾವ್ ಆಗಿದ್ದಾರೆ.
ಅಪಘಾತ ಸಂಭವಿಸಿದ ವೇಳೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಮಾಜಿ ಜೆಡಿಎಸ್ ಶಾಸಕ ಡಾ.ಪಿ ಸುಧಾಕರಲಾಲ್ ಗಾಯಾಳುಗಳ ನೆರವಿಗೆ ದಾವಿಸಿ ಮಾನವೀಯತೆ ಮೆರೆದಿದ್ದಾರೆ.
ಅಪಘಾತದಲ್ಲಿ ರಸ್ತೆ ಪಕ್ಕ ಬಿದ್ದವರನ್ನು ಸುಧಾಕರಲಾಲ್ ರವರು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿ ಮಹಿಳಾ ಕಾರ್ಮಿಕರನ್ನು ಸುರಕ್ಷವಾಗಿ ಮನೆಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಅಲ್ಲದೇ ಸಣ್ಣ ಪುಟ್ಟ ಗಾಯ ಆಗಿದ್ದವರನ್ನು ತಮ್ಮದೇ ವಾಹನವನ್ನು ನೀಡಿ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ.

ಗಾರ್ಮೆಂಟ್ಸ್ ಬಸ್ ನಲ್ಲಿದ್ದ ೭೫ಕ್ಕೂ ಅಧಿಕ ಮಹಿಳಾ ಕಾರ್ಮಿಕರು ಅಪಾಯದಿಂದ ಪಾರಾಗಿದ್ದು, ಜಲ್ಲಿ ತುಂಬಿದ ಟಿಪ್ಪರ್ ಲಾರಿಗೆ ಹಿಂಬದಿಯಿAದ ಬಂದ ಗೌರ್ಮೆಂಟ್ಸ್ ಬಸ್ ಡಿಕ್ಕಿ ಹೊಡೆದು ಅಪಘಾತವಾಗಿದೆ ಎನ್ನಲಾಗಿದೆ.
ತುಮಕೂರಿನ ಗೋಕುಲ್ ದಾಸ್ ಗಾರ್ಮೆಂಟ್ಸ್ ನಿಂದ ಬರುತ್ತಿದ್ದ ಬಸ್ ಗಾರ್ಮೆಂಟ್ಸ್ ಬಸ್ ಚಾಲಕನ ಓವರ್ ಸ್ಪೀಡ್ ಈ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಟಿಪ್ಪರ್ ಕಂಟ್ರೋಲ್ ಮಾಡಲು ಸಾಧ್ಯವಾಗದೆ ಬೈಪಾಸ್ ರಸ್ತೆಯಿಂದ ಚಾಲಕನ ಸಮೇತ ಕೆಳಗೆ ಬಿದ್ದ ಟಿಪ್ಪರ್, ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮಾಜಿ ಶಾಸಕ ಸುಧಾಕರ್ ಲಾಲ್ ಸ್ಥಳಕ್ಕೆ ಭೇಟಿ ನೀಡಿ ಗಾರ್ಮೆಂಟ್ಸ್ ನೌಕರರಿಗೆ ಗಾಬರಿಯಾಗದಂತೆ ತಿಳಿಸಿ, ಸ್ಥಳಕ್ಕೆ ನೀರಿನ ಬಾಟಲ್ ಗಳನ್ನ ನೌಕರರಿಗೆ ನೀಡಿ ಪ್ರತೇಕ ವಾಹನಗಳ ವ್ಯವಸ್ಥೆ ಮಾಡಿ ಅವರವರ ಮನೆಗೆ ಕಳಿಸಿಕೊಟ್ಟು ಮಾನವಿಯತೆ ಮೆರೆದಿದ್ದಾರೆ.
ವರದಿ-ಹರೀಶ್ ಬಾಬು ಬಿ.ಹೆಚ್.