ಹೊಸಕೆರೆ : ಸರ್ಕಾರ ಈಗ ನೀಡಿರುವ ಆರು ಮನೆಗಳ ಆಯ್ಕೆಮಾಡುವ ಮಾನದಂಡ ಸರಿಯಿಲ್ಲ ಎಂದು ಶಿವಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ರಾಘವೇಂದ್ರ ಹೇಳಿದರು.
ಶಿವಪುರ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಾತನಾಡಿದರು.
ನಾನು ಶಿವಪುರ ಗ್ರಾಮ ಪಂಚಾಯಿತಿಗೆ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ, ಹಿಂದೆ ಸಾಕಷ್ಟು ಮನೆಗಳು ಬರುತ್ತಿದ್ದವು, ಫಲಾನುಭವಿ ಆಯ್ಕೆ ಸುಲಭವಾಗಿ ಆಗುತ್ತಿತ್ತು, ಇಷ್ಟೊಂದು ಮಾನದಂಡಗಳಿರುತ್ತಿರಲಿಲ್ಲ, ಆದರೆ ಇಪ್ಪತ್ತು ತಿಂಗಳಿಂದ ಕೇವಲ ಮೂವತ್ತು ಮನೆಗಳನ್ನು ನೀಡಿದ ಸರ್ಕಾರ ವಿವಧ ಮಾನದಂಡ ಪ್ರಯೋಗಿಸಿ, ಫಲಾನುಭವಿ ಆಯ್ಕೆ ಕಷ್ಟವಾಗುತ್ತಿದೆ. ಹಿಂದೆಂದೊ ಮಾಡಿರುವ ಪಟ್ಟಿಯಲ್ಲಿರುವ ಫಲಾನುಭವಿ ಆಗಿರಬೇಕಂತೆ ನಿಜವಾಗಿ ಮನೆ ಅವಶ್ಯಕತೆ ಇರುವವರ ಹೆಸರು ಆ ಪಟ್ಟಿಯಲ್ಲಿಲ್ಲದ ಪರದಾಡುವಂತಾಗಿದೆ ಎಂದರು.
ನೂತನ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಉಪಾಧ್ಯಕ್ಷೆ ನವೀನಮ್ಮ ಮಾತನಾಡಿ ಗ್ರಾಮ ಪಂಚಾಯಿತಿ ಸದಸ್ಯರೊಡಗೂಡಿ ಗ್ರಾಮ ನೈರ್ಮಲ್ಯ, ಕುಡಿಯುವ ನೀರಿನ ಪೂರೈಕೆ ಹಾಗೂ ಇನ್ನಿತರ ಮೂಲಸೌಕರ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕದರಯ್ಯ. ಬಸವರಾಜು. ಜಗನ್ನಾಥ್. ಮಂಜುನಾಥ್. ಭೂಮಿರಾಜು. ರತ್ನಮ್ಮ. ಗಂಗಮ. ಭಾರತಿ. ಜಯಲಕ್ಷ್ಮಮ್ಮ ಮುಖಂಡರಾದ ಎಪಿಎಂಸಿ ಮಾಜಿ ಉಪಾಧ್ಯಕ್ಷ ಮುದ್ದಣ್ಣ. ಪ್ರಸನ್ನಕುಮಾರ್. ಸಿದ್ಧರಾಜು ಪಿಡಿಒ ತಿಪ್ಪೇಸ್ವಾಮಿ ಕಾರ್ಯದರ್ಶಿ ಸಿದ್ದಯ್ಯ ಚುನಾವಣೆ ಪ್ರಕ್ರಿಯೆಯನ್ನು ನಾಡತಹಸೀಲ್ದಾರ್ ವೆಂಕಟರಂಗನ್ ಕಂದಾಯ ತನಿಖಾಧಿಕಾರಿ ಗುರುಪ್ರಸಾದ್ ನೆಡೆಸಿಕೊಟ್ಟರು.