ಫೆಬ್ರವರಿ 26 ಕ್ಕೆ ಆಂಜನೇಯಸ್ವಾಮಿ ರಥೋತ್ಸವ


ಹೊಸಕೆರೆ: ಹಾಗಲವಾಡಿ ಹೋಬಳಿಯ ಯಕ್ಕಲಕಟ್ಟೆ ಆಂಜನೇಯಸ್ವಾಮಿ ಬ್ರಹ್ಮ ರಥೋತ್ಸವ ಫೆಬ್ರವರಿ 26 ಕ್ಕೆ ನೆಡೆಯಲಿದೆ.
ಫೆಬ್ರವರಿ 25 ಶನಿವಾರದಿಂದ ಆರಂಭವಾಗಿ ಮಾರ್ಚ್ 1 ಕ್ಕೆ ಕೊನೆಗೊಳ್ಳಲಿದ್ದು, ಜಾತ್ರಾ ಪ್ರಯುಕ್ತ ಅಂಕುರಾರ್ಪಣೆ. ಮಂಡೆ ಮತ್ತು ಧೂಪದಸೇವೆ. ಮುತ್ತಿನಹಾರ ಸೇವೆ. ಗಂಗಾಸ್ನಾನ ಮತ್ತು ಗ್ರಾಮದಲ್ಲಿ ಉತ್ಸವಾದಿ ಕಾರ್ಯಕ್ರಮ ನಡೆಯಲಿವೆ.
ರಥೋತ್ಸವದಂದು ಬ್ರಾಹ್ಮಣಸೇವೆ, ವೈಷ್ಣವ ಅನ್ನಸಂತರ್ಪಣೆ, ದಾಸೋಹ, ರಾತ್ರಿ ಅನ್ನಸಂತರ್ಪಣೆ, ರಥಕ್ಕೆ ಹೂವಿನ ಅಲಂಕಾರ, ಗ್ರಾಮಕ್ಕೆ ವಿದ್ಯುತ್ ಅಲಂಕಾರ ಮಾಡಲಾಗುತ್ತದೆ. ರಥೋತ್ಸವದ ರಾತ್ರಿ ಗ್ರಾಮಸ್ಥರಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನವಿರುತ್ತದೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!