ಗ್ರಾಮಾಂತರದಲ್ಲಿ ಗೌರಿ ಶಂಕರ್ ಅವರಿಂದ ಅಭಿವೃದ್ದಿಯ ಪರ್ವ

ತುಮಕೂರು ಗ್ರಾಮಾಂತರದಲ್ಲಿ ಅಭಿವೃದ್ಧಿಯ ಹರಿಕಾರ ಗೌರಿ ಶಂಕರ್ ಅವರಿಂದ ಅಭಿವೃದ್ದಿಯ ಪರ್ವ ಸುಮಾರು 8,00,00,000 (ಎಂಟು ಕೋಟಿ) ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ತುಮಕೂರು ಗ್ರಾಮಾಂತರ ಜನಪ್ರಿಯ ಶಾಸಕ ಡಿಸಿ ಗೌರಿಶಂಕರ್ ಅವರು ಚಿಕ್ಕ ನಾರವಂಗಲ ಗ್ರಾಮದ ಕೆರೆ ಕೋಡಿಯಿಂದ ದೊಡ್ಡ ನಾರವಂಗಲ ಕೆರೆ ಕೋಡಿಯವರೆಗೂ ಸಿಸಿ ರಸ್ತೆ ಸಿಸಿ ಚರಂಡಿ ಅಭಿವೃದ್ಧಿ ಕಾಮಗಾರಿಗೆ,ಹಾಗೂ ಚಿಕ್ಕನಾರವಂಗಲ ಗ್ರಾಮದ ರಸ್ತೆಯಿಂದ ಎಂ ಎಂ ಕಾವಲ್ ಗುಬ್ಬಿ ತಾಲೂಕು ತುಮಕೂರು ಜಿಲ್ಲೆಯ ಮುಖ್ಯ ರಸ್ತೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ,, ದೊಡ್ಡ ನಾರವಂಗಲ ಗ್ರಾಮದ ಸಿಸಿ ರಸ್ತೆ ಸಿಸಿ ಚರಂಡಿ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿ, ಮಲ್ಲಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲಸಂದ್ರ ಸಿರಿವಾರ ಮುಖ್ಯರಸ್ತೆಯ ಹಬ್ಬತ್ತನಹಳ್ಳಿ ಮುಖ್ಯ ದ್ವಾರದಿಂದ ಹಬ್ಬತ್ತನಹಳ್ಳಿ ಹಾಗೂ ಜೋಗ ಹಟ್ಟಿ ಮಾರ್ಗ ರಾಜ್ಯ ಹೆದ್ದಾರಿ 206 ಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ, ಮಲ್ಲಸಂದ್ರ ಸಿರಿವಾರ ಮುಖ್ಯರಸ್ತೆಯ ಹಬ್ಬತ್ತನಹಳ್ಳಿ ಗ್ರಾಮದ ನವಗ್ರಾಮ ಎಸ್‌ಸಿ ಕಾಲೋನಿಯಿಂದ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ನಿರ್ಮಾಣ ಕಾಮಗಾರಿ, ಹಬ್ಬತ್ತನಹಳ್ಳಿ ಗ್ರಾಮದಲ್ಲಿ ಮನೆಮನೆಗೆ ನಲ್ಲಿ ಸಂಪರ್ಕ ಕಾಮಗಾರಿ,ಕೊಟ್ಟನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿ, ನರಗನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಿ, ವಿದ್ಯಾಭ್ಯಾಸ, ಆರೋಗ್ಯ, ಮದುವೆ ಹಾಗೂ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಶೀಟ್ ಸಿಮೆಂಟ್ ಸೇರಿದಂತೆ ಇನ್ನಿತರ ಸಮಸ್ಯೆ ಉಳ್ಳವರಿಗೆ ಸುಮಾರು 3,00,000 ಮೂರು ಲಕ್ಷಕ್ಕೂ ಹೆಚ್ಚಿನ ಧನಸಹಾಯ ಮಾಡಿದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!