ಮಧುಗಿರಿ : ಆಹಾರ ಆರಿಸಿ ಬಂದಿದ್ದ ಯ್ಯಾಂಟಿಲೋಪ್ ತಳಿಯ ಕೃಷ್ಣಾ ಮೃಗಾವನ್ನು ಕೆಪಿಟಿಸಿಲ್ ಹಾಗೂ ಅರಣ್ಯಾಧಿಕಾರಿಗಳು ಸಂರಕ್ಷಿಸಿ ಮತ್ತೆ ಅರಣ್ಯಾಧಾಮಕ್ಕೆ ಬಿಟ್ಟಿದ್ದಾರೆ.
ತಾಲೂಕಿನ ಮಿಡಗೇಶಿ ಹೋಬಳಿಯ ಹೊಸಕೆರೆ ಗ್ರಾಮದಲ್ಲಿ ಕೆಪಿಟಿಸಿಎಲ್ ಗೆ ಸೇರಿದ ವಿದ್ಯುತ್ ಸ್ಥಾವರದ ಅವರಣಕ್ಕೆ ರಾತ್ರಿ ಸುಮಾರು 8:30ರ ಸಮಯದಲ್ಲಿ ಅಸಕಸ್ಮಿಕವಾಗಿ ಸುಮಾರು ಎರಡೂ ವರೆ ವರ್ಷ ಪ್ರಾಯದ ಹೆಣ್ಣು ಕೃಷ್ಣಾ ಮೃಗವೊಂದು ಆವರಣದಲ್ಲಿ ಕಾಣಿಸಿ ಕೊಂಡಿತ್ತು.
ನಂತರ ವಿಷಯ ತಿಳಿದ ಗಸ್ತು ಅರಣ್ಯಾ ಪಾಲಕ ಪ್ರದೀಪ್ ಪಾಟೀಲ್ , ಹರೀಶ್ , ಶ್ರೀನಿವಾಸ್ , ಮುಖಂಡ ಹೊಸಕೆರೆ ಗೋವಿಂದರಾಜ ಹಾಗೂ ಮತ್ತಿತರರ ಸಹಕಾರದೊಂದಿಗೆ ಆವರಣದಲ್ಲಿ ಗಡಿಬಿಡಿಯಾಗಿ ಓಡುತ್ತಿದ್ದ ಕೃಷ್ಣ ಮೃಗಾವನ್ನು ಹಿಡಿದುಕೊಂಡಿದ್ದಾರೆ. ಸಣ್ಣ ಪುಟ್ಟ ಘಾಯಗಳಾಗಿದ್ದ ಕೃಷ್ಣಮೃಗಕ್ಕೆ ಪ್ರಥಮ ಚಿಕಿತ್ಸೆ ನೀಡಿದ ನಂತರ ಕೊಡಿಗೇನಹಳ್ಳಿ ಹೋಬಳಿಯಲ್ಲಿರುವ ಕೃಷ್ಣಾ ಮೃಗ ಸಂರಕ್ಷಿತ ಪ್ರದೇಶವಾದ ಮೈದನಹಳ್ಳಿಯ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.