ಹೊಸಕೆರೆ: ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಮಂಚಲದೊರೆ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಠ ಗ್ರಾಮದ ಶಶಿಕಲಾ ಲಿಂಗರಾಜು 8 ಮತಗಳನ್ನು ಪಡೆದು ಅಧ್ಯಕ್ಷರಾಗಿ ಚುನಾಯಿತರಾದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಹರ್ತಿ ಗ್ರಾಮದ ದೇವರಾಜು ಅವಿರೋಧವಾಗಿ ಆಯ್ಕೆಯಾದರು.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರ್ ಬಿ.ಆರತಿ ಅವರು ನಡೆಸಿಕೊಟ್ಟರು.
ಈ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿದ್ದಗಂಗಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಟಿ.ರಾಜು ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಶಶಿಕಲಾ ಲಿಂಗರಾಜು ಹಾಗೂ ಶಾಂತಮ್ಮ ಪುಟ್ಟಸಿದ್ದಪ್ಪ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಒಟ್ಟು 15 ಸದಸ್ಯರ ಮತದಾನ ಪ್ರಕ್ರಿಯೆ ನಡೆದು ಶಶಿಕಲಾ ಲಿಂಗರಾಜು 8 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಪ್ರತಿಸ್ಪರ್ಧಿ ಶಾಂತಮ್ಮ 7 ಮತಗಳನ್ನು ಪಡೆದು ಪರಾಜಿತಗೊಂಡರು. ನಂತರ ಸುದ್ದಿಗಾರರ ಜೊತೆ ನೂತನ ಅಧ್ಯಕ್ಷೆ ಶಶಿಕಲಾ ಲಿಂಗರಾಜು ಮಾತನಾಡಿ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಅಭಿವೃದ್ದಿ ಕೆಲಸ ಮಾಡುತ್ತೇನೆ.
ಎಲ್ಲರ ವಿಶ್ವಾಸ ಗಳಿಸಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ದನಾಗಿರುತ್ತೇನೆ. ಹಳ್ಳಿಗಳಲ್ಲಿ ಯಾವುದೇ ಸಮಸ್ಯೆ ಬರದಂತೆ ನೊಡಿಕೊಳುತ್ತೇನೆ ಈ ನಿಟ್ಟಿನಲ್ಲಿ ಮಾದರಿ ಗ್ರಾಮ ಪಂಚಾಯಿತಿಯಾಗಿ ಗುರುತಿಸಿ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಹಲವು ಕೆಲಸಗಳನ್ನು ಮಾಡುವುದಾಗಿ ಭರವಸೆ ನೀಡಿದರು.
ನಂತರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಇದೇ ಸಂಧರ್ಭದಲ್ಲಿ ತಾಲ್ಲೂಕ್ ಪಂಚಾಯಿತಿ ಸದಸ್ಯ ಕರಿಯಮ್ಮ ರಮೇಶ್ ,
ಗ್ರಾಮ ಪಂಚಾಯಿತಿ ಸದಸ್ಯರಾದ ಆಶಾ , ಮಂಜುಳ , ಶಂಕುತಲಾ , ಸಿದ್ದಗಂಗಮ್ಮ , ಕೆ.ಟಿ.ರಾಜು , ಬಸವರಾಜು , ಜಗಧೀಶ್ , ದೇವರಾಜು , ಲತಾ ಮುಖಂಡರಾದ ವಿ ಎಸ್ ಎಸ್ ಎನ್ ಅಧ್ಯಕ್ಷ ದೇವರಾಜು , ಮಂಜು ಕುಂಟರಾಮನಹಳ್ಳಿ , ತಿಮ್ಮಣ್ಣ ,ಸಂತೋಷ್,ಕರಿಬಸವಣ್ಣ ,ಮೂರ್ತಪ್ಪ , ಶಿವಣ್ಣ , ನಟರಾಜು ,ಬಾಬು ಮಂಚಲದೊರೆ ,ಮರಡಿ ರಂಗನಾಥ್, ಬಳ್ಳಾರಿನಾಗರಾಜು ಪಿಡಿಓ ರಾಜೇಂದ್ರ ಪ್ರಸಾದ್ , ಕಂದಾಯಧಿಕಾರಿ ಗುರುಪ್ರಸಾದ್ ಭಾಗವಹಿಸಿದ್ದರು.