ಪಾವಗಡ: ಪ್ರತಿಯೊಬ್ಬರೂ ತಮ್ಮ ಅರೋಗ್ಯ ಜೊತೆಗೆ ಕಣ್ಣಿನ ದೃಷ್ಟಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕ್ರೀಯಾಶೀಲವಾದ ಅರೋಗ್ಯ ಜೀವನ ನಡೆಸುವಂತೆ ಹೆಲ್ಪ್ ಸೊಸೈಟಿ ಅಧ್ಯಕ್ಷ ರಾದ ಮಾನಂ ಶಶಿಕಿರಣ್ ಕರೆ ನೀಡಿದರು. ಇಂದು ತಿರುಮಣಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಹೆಲ್ಪ್ ಸೊಸೈಟಿ ಮತ್ತು ಬೆಂಗಳೂರು ಶಂಕರ ಕಣ್ಣಿನ ಆಸ್ಪತ್ರೆ, ಟಾಟಾ ಪವರ್ ರಿನುವಬಲ್ ಎಜರ್ನಿ ಲಿಮಿಟೆಡ್ ರವರ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ಗಡಿ ಭಾಗದ ಜನತೆಗೆ ಕಣ್ಣಿನ ಪರೀಕ್ಷೆ ನಡೆಸಿ ಚಿಕೆತ್ಸೆಗೆ ಅರ್ಹರದವರನ್ನು ಶಸ್ತ್ರ ಚಿಕೆತ್ಸೇ ಮಾಡಿಸುವಂತ ಕಾರ್ಯಕ್ರಮಗಳು ತಾಲ್ಲೂಕಿನ ಎಲ್ಲಾ ಗಡಿ ಗ್ರಾಮಗಳಲ್ಲಿ ಹೆಲ್ಪ್ ಸೊಸೈಟಿ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಶಂಕರ್ ಕಣ್ಣಿನ ಆಸ್ಪತ್ರೆ ವ್ಯವಸ್ಥಾಪಕರಾದ ಶ್ರೀಕಾಂತ್ ಮಾತನಾಡುತ್ತ ಬಡ ಜನತೆಗೆ ನಾಗರಿಕರಿಗೆ, ದಿನ ನಿತ್ಯದ ವೃತ್ತಿ ಪರರಿಗೆ ಅನುಕೂಲವಾಗುವಂತ ಕಾರ್ಯಕ್ರಮವನ್ನು ಸಾರ್ವಜನಿಕರು ಹೆಚ್ಚು ಹೆಚ್ಚು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಶಿಬಿರದಲ್ಲಿ 150 ಕ್ಕೂ ಹೆಚ್ಚು ಜನ ನೇತ್ರ ಪರೀಕ್ಷೆಗೆ ಹೊಳಪಟ್ಟಿದ್ದು 65 ಜನ ನೇತ್ರ ಶಸ್ತ್ರ ಚಿಕೆತ್ಸೆಗೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳಾದ ತಿರುಪತಿಯ, ಶಂಕರ್ ಆಸ್ಪತ್ರೆ ವೈದ್ಯರಾದ ತೇಜ , ತಿರುಮಣಿ ವೈದ್ಯಾಧಿಕಾರಿಯಾದ ಧನುಷ್, ತಿರುಮಣಿ ನೇತ್ರಾಧಿಕಾರಿ ಪವಿತ್ರ, ತಿರುಮಣಿ ಆರೋಗ್ಯ ನಿರೀಕ್ಷಣ ಅಧಿಕಾರಿಗಳು ರಮೇಶ್, ಶ್ರೀಕಾಂತ್ ಮೂರ್ತಿ, ಶ್ರೀನಿವಾಸ, ನರಸಿಂಹ, ಜೀವನ್, ಹಾಜರಿದ್ದರು,