ಹೊಸಕೆರೆ : ನನ್ನ ಕೊನೆಯ ಉಸಿರು ಇರುವರೆಗೂ ಕುಂಚುಟಿಗ ಸಮುದಾಯಕ್ಕೆ ಕೇಂದ್ರ ಸರಕಾರದಿಂದ ಓಬಿಸಿ ಮೀಸಲಾತಿಗಾಗಿ ಹೋರಾಟ ಮಾಡುತ್ತೇನೆ ಎಂದು ಎಲೆ ರಾಂಪುರ ಮಠದ ಡಾ ಹನುಮಂತ ಸ್ವಾಮೀಜಿ ತಿಳಿಸಿದರು.
ಗ್ರಾಮದ ಪಟೇಲ್ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿದ್ದ ಕುಂಚಟಿಗ ಸಮುದಾಯದ ಸಮಾವೇಶ ಮತ್ತು ಕೇಂದ್ರ ಸರ್ಕಾರದ ಒಬಿಸಿ ಗೆ ಸೇರಿಸಲು ಹಕೋತ್ತಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸಮಾದಾಯದ ಮಕ್ಕಳಿಗೆ ಶಿಕ್ಷಣ ಉದ್ಯೋಗ ಸೇರಿದಂತೆ ವಿವಿಧ ರೀತಿಯ ಅನುಕೂಲವನ್ನು ಪಡೆಯಲು ಕೇಂದ್ರದಿಂದ ಮೀಸಲಾತಿ ನಮ್ಮ ಸಮುದಾಯಕ್ಕೆ ಸಿಗಲೇಬೇಕಿದೆ, ಅದಕ್ಕಾಗಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು ಇದಕ್ಕೆ ತಮ್ಮೆಲ್ಲರ ಬಾಹ್ಯ ಶಕ್ತಿ ನನಗೆ ನೀಡಿ ಎಲ್ಲರೂ ಜೊತೆ ಸಾಗಿ ಹೋರಾಡೋಣ ಎಂದು ತಿಳಿಸಿದರು.
ಮಾಜಿ ಸಚಿವ ಟಿಬಿ ಜಯಚಂದ್ರ ಮಾತನಾಡಿ 2004 ರಿಂದ ಇದರ ಹೋರಾಟ ನಿರಂತರವಾಗಿ ನಡೆಯುತ್ತಿದೆ ಈಗಾಗಲೇ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು ಕೇಂದ್ರ ಸರ್ಕಾರದ ಒಪ್ಪಿಗೆ ಅವಶ್ಯಕತೆ ಇದೆ ನಾವೆಲ್ಲರೂ ಸಹ ಒಗ್ಗಟ್ಟಿನಿಂದ ಹೋರಾಟ ಮಾಡಿದಾಗ ಮಾತ್ರ ಮೀಸಲಾತಿ ಪಡೆಯಲು ಸಹಾಯವಾಗುತ್ತದೆ ಹಾಗಾಗಿ ನಮ್ಮ ಒಗ್ಗಟ್ಟಿನ ಶಕ್ತಿ ಪ್ರದರ್ಶನ ಇಡೀ ರಾಜ್ಯದಲ್ಲಿ ಮಾಡಬೇಕಾಗಿದ್ದು ಇಂತಹ ಕಾರ್ಯಕ್ರಮಗಳು ಮೂಲಕ ಸಮುದಾಯದ ಒಗ್ಗಟ್ಟು ಇರಲಿ ಎಂದು ತಿಳಿಸಿದರು.
ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ
ಸಮಾಜವನ್ನು ಜಾಗೃತಿ ಮೂಡಿಸುವ ಕೆಲಸ ವನ್ನು ಕಳೆದ ಮೂರು ವರ್ಷದಿಂದ ಮಾಡುತ್ತ ಬಂದಿದ್ದಾರೆ ಒಂದು ಸಮುದಾಯಕ್ಕೆ ಶಕ್ತಿ ಬರಬೇಕು ಅಂದ್ರೆ ನಿರ್ದಿಷ್ಟವಾದ ಗುರಿ ಇರಬೇಕು ಹಾಗಾಗಿ ರಾಜಕೀಯವನ್ನು ಬಿಟ್ಟು ಎಲ್ಲರೂ ಸಹಕಾರ ಮಾಡಬೇಕಿದೆ ಆಗ ಮಾತ್ರ ಸರ್ಕಾರ ಜನ ಪ್ರತಿ ನಿಧಿಗಳು ನಮ್ಮ ಕಡೆ ಮುಖ ಮಾಡುತ್ತಾರೆ ಎಂದು ತಿಳಿಸಿದರು.
ಮುಖಂಡರಾದ ಮುರುಳಿಧರ್ ಹಾಲಪ್ಪ, ಜಿಎನ್ ಬೆಟ್ಟಸ್ವಾಮಿ, ಬಿ ಎಸ್ ನಾಗರಾಜು, ಎಸ್ ಡಿ ದಿಲೀಪ್ ಕುಮಾರ್, ಹೊನ್ನಗಿರಿ ಗೌಡ,ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮಮತಾ ಶಿವಲಿಂಗೇಗೌಡ, ಜಿಲ್ಲಾ ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಾಮರಾಜ್, ತಾಲೂಕು ಅಧ್ಯಕ್ಷ ಎಮ್ಮೆ ಹಟ್ಟಿ ಜಯಣ್ಣ, ಪಾತರಾಜು ದಯಾನಂದ ರುದ್ರಪ್ಪ ಕುಸುವನಹಳ್ಳಿ ರಮೇಶ್ ಯೋಗಾನಂದ ಎಂಜಿರಪ್ಪ ತುಂಬಾಡಿ ರಾಮಣ್ಣ ಶ್ರೀನಿವಾಸ್ ಲಿಂಗರಾಜು, ಇತರರಿದ್ದರು.