ಮಾರ್ಚ್ 1 ನೌಕರರ ಮುಷಕರಕ್ಕೆ ಅನುದಾನಿತ ಪದವಿ ಪೂರ್ವ ನೌಕರರ ಸಂಘದ ಬೆಂಬಲ


ತುಮಕೂರು
ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಮತ್ತು 7 ನೇ ವೇತನ ಆಯೋಗ ಜಾರಿಯ ಜೊತೆಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ನೌಕರ ಸಂಘದ ಅನಿರ್ದಿಷ್ಟಾಧಿ ಮುಷ್ಕರಕ್ಕೆ ಜಿಲ್ಲಾ ಅನುದಾನಿತ ಪದವಿ ಪೂರ್ವ ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಬೆಂಬಲ ಸೂಚಿಸಿದ್ದಾರೆ.
ರಾಜ್ಯಾದ್ಯಂತ ನಡೆಯಲಿರುವ ಮುಷ್ಕರಕ್ಕೆ ಜಿಲ್ಲೆಯ ಎಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ನೌಕರರು ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು. ಅಲ್ಲದೆ ಎಲ್ಲಾ ಕಾಲೇಜುಗಳಿಗೆ ಗೈರುಹಾಜರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ತಕ್ಷಣವೇ 7 ನೇ ವೇತನ ಆಯೋಗಜಾರಿಗೆ ಬರಬೇಕು, ಹಾಗೂ 2006 ನಂತರ ನೇಮಕಾತಿ ಹೊಂದಿದ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವುದರ ಮೂಲಕ ನೌಕರರ ಕೊನೆಗಾಲದ ಜೀವನಕ್ಕೆ ಸಹಕಾರಿಯಾಬೇಕು ಎಂದು ಎಚ್ಚರಿಕೆ ನೀಡಿದರು.

ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಕಾರ್ಯದರ್ಶಿ ತಿಪ್ಪೇಶ್, ನಿರ್ದೇಶಕರಾದ ಮಲ್ಲಿಕಾರ್ಜುನ್, ಮಂಜುನಾಥ, ಶಿವಣ್ಣ, ಪುಟ್ಟಸ್ವಾಮಿ, ಆರಾಧ್ಯ, ಗಾಂಗಾಧರ್ ಸ್ವಾಮಿ, ಸುರೇಶ್, ವಿಮಲಾ, ಸುನೀತಾ, ಕಮಲಾಕ್ಷಮ್ಮ,ಇದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!