ಪಾವಗಡ:: ರಾಜವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣೀವೇನಹಳ್ಳಿ ಗ್ರಾಮದಲ್ಲಿ ಗಂಗಮ್ಮ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮಸ್ಥರ ಕೋರಿಕೆ ಮೇರೆಗೆ ಇಂದು ಹೆಲ್ಪ್ ಸೊಸೈಟಿ ಸಂಸ್ಥೆ ಅಧ್ಯಕ್ಷರಾದ ಶ್ರೀ ಮಾನಂ ಶಶಿಕಿರಣ್ ರವರು ಭಕ್ತಿ ಪೂರಕವಾಗಿ ದೇವಸ್ಥಾನ ನಿರ್ಮಾಣಕ್ಕೆ ಆರ್ಥಿಕ ನೆರವನ್ನು ನೀಡಿ ದೈವ ಸಂಕಲ್ಪಕ್ಕೆ ಕೈ ಜೋಡಿಸಿದ್ದಾರೆ.
ದೇವಸ್ಥಾನ ನಿರ್ಮಾಣಕ್ಕೆ ಗ್ರಾಮಸ್ಥರು ದೇಣಿಗೆ ಸ್ವೀಕರಿಸಿ ಮಾತನಾಡಿದ ಗ್ರಾಮಸ್ಥರು ತಾಲ್ಲೂಕಿನ ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿರುವ ಸಹಾಯ ಹಸ್ತದ ಕರುಣಾಮಯಿ ಎಂದರೆ ಶ್ರೀ ಮಾನಂ ಶಶಿಕಿರಣ್ ರವರು,ಕೇವಲ ದೂರವಾಣಿ ಮೂಲಕ ದೇವಸ್ಥಾನಕ್ಕೆ ದೇಣಿಗೆ ಕೇಳಿದಾಕ್ಷಣ ಗ್ರಾಮಕ್ಕೆ ಆಗಮಿಸಿ ತಮ್ಮ ಕೈಲಾದ ಮಟ್ಟಿಗೆ ದೇಣಿಗೆ ನೀಡಿ ಕೈ ಜೋಡಿಸಿರುವುದಕ್ಕೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸಿ ಗಂಗಮ್ಮ ತಾಯಿ ಕೃಪಾ ಕಟಾಕ್ಷ ಅವರ ಮೇಲಿರಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ವೀರಮ್ಮನಹಳ್ಳಿ ಡಾ :ಲೋಕೇಶ್, ದೇವಸ್ಥಾನ ಅರ್ಚಕರಾದ ಹನುಮಂತ್ ರಾಯಪ್ಪ, ಗ್ರಾಮಸ್ಥರಾದ ಸುಧಾಕರ್, ನಾಗರಾಜು, ಹರೀಶ್, ನವೀನ್ ಕುಮಾರ್, ಗಂಗಪ್ಪ, ಮಹೇಶ್, ರಾಜು, ಪ್ರತಾಪ್, ಇನ್ನು ಮುಂತಾದವರಿದ್ದರು