ಹೆಲ್ಪ್ ಸೊಸೈಟಿ ವತಿಯಿಂದ ನೃತ್ಯ ಪ್ರದರ್ಶನದಲ್ಲಿ ಜಯಶೀಲರಾದವರಿಗೆ ಬಹುಮಾನ

ಮಹಾ ಶಿವರಾತ್ರಿ ಅಂಗವಾಗಿ ಹೆಲ್ಪ್ ಸೊಸೈಟಿ ವತಿಯಿಂದ ಎಸ್ ಎಸ್ ಕೆ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪ್ರೀತಿ ಪಾತ್ರರಾಗಿ ನೃತ್ಯ ಪ್ರದರ್ಶನದಲ್ಲಿ ಜಯಶೀಲರಾಗಿ ಬಹುಮಾನ ಗಳಿಸಿದ ಪ್ರಮುಖರಲ್ಲಿ ಮೊದಲನೇ ಬಹುಮಾನ ಗುರುಕುಲ ಶಾಲೆ,ದ್ವಿತೀಯ ಬಹುಮಾನ ಶಾರದಾ ವಿದ್ಯಾ ಪೀಠ, ತೃತೀಯ ಬಹುಮಾನ ವಿ. ಎಸ್, ಕಾನ್ವೆಂಟ್ ಶಾಲೆ ಬಹುಮಾನ ಲಭಿಸಿದ್ದು ಪ್ರೇಕ್ಷಕರ ವಿಶೇಷ ಬಹುಮಾನವಾಗಿ ನಮ್ಮ ಪಾವಗಡ ನಮ್ಮ ಹೆಮ್ಮೆ ಕುರಿತಾದ ನೃತ್ಯಕ್ಕೆ ಪಾವಗಡ ಪಟ್ಟಣದ ಎಸ್ ಎಂ ಬಿ ಆರ್ ಶಾಲೆಗೆ ದೊರೆತಿದೆ.

ಬಹುಮಾನ ವಿಜೇತ ಶಾಲಾ ಮಕ್ಕಳಿಗೆ ಹೆಲ್ಪ್ ಸೊಸೈಟಿ ವತಿಯಿಂದ ಪ್ರಶಸ್ತಿ ಪತ್ರಗಳನ್ನು ಹಾಗೂ ನೆನಪಿನ ಕಾಣಿಕೆಗಳನ್ನು ಇಂದು ಎಲ್ಲಾ ಶಾಲೆಗಳಿಗೆ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ವಿತರಿಸಿದರು. ಕಾರ್ಯಕ್ರಮ ಅಯೋಜಿಸಲು ಪಾವಗಡ ಜನಪ್ರಿಯ ಶಾಸಕ ವೆಂಕಟರವಣಪ್ಪ ರವರ ಸುಪುತ್ರರಾದ ಶ್ರೀ ಎಚ್ ವಿ ವೆಂಕಟೇಶ್ ರವರು, ಶಾಂತಿ ಮೆಡಿಕಲ್ ದೇವರಾಜ್, ತಿರುಮಣಿ ಗ್ಯಾಸ್ ಏಜನ್ಸಿ ಸುರೇಂದ್ರ, ಗುತ್ತಿಗೆದಾರರಾದ ಪರಮೇಶ್, ರೋಟರಿ ಕ್ಲಬ್ ಅಧ್ಯಕ್ಷ ಪುರುಷೋತ್ತಮ್ ರೆಡ್ಡಿ ರವರು ಸಂಪೂರ್ಣ ಸಹಕಾರ ನೀಡಿದ್ದಾರೆ ,ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್, ಅರುಣಾ ಹಾಗೂ ಶಾಲೆಯ ಮುಕ್ಯೋಪಾಧ್ಯಾರು ಹಾಗೂ ಶಿಕ್ಷಕರು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!