ಅದ್ದೂರಿಯಾಗಿ ನಡೆದ ಕೊಲ್ಲಾಪುರದಮ್ಮ‌ದೇವಿಯ ಜಾತ್ರಾ ಮಹೋತ್ಸವ

ಎಂ ಎನ್ ಕೋಟೆ : ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಶ್ರೀ ಕೊಲ್ಲಾಪುರದಮ್ಮ‌ದೇವಿಯ ಜಾತ್ರಾ ಮಹೋತ್ಸವ ಭಾನುವಾರ ಅದ್ದೂರಿಯಾಗಿ ನಡೆಯುತ್ತು.ಬೆಳಿಗ್ಗೆ ದೇವಾಲಯದಲ್ಲಿ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು. ಅಮ್ಮನವರ ಕಳಸ ಉತ್ಸವ ಊರಿನ ರಾಜ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತ್ತು. ಕಳಸ ಉತ್ಸವದಲ್ಲಿ ಸೋಮನಕುಣಿತ , ಅರೇವಾದ್ಯ ,ಬಾಣ ಬಿರುಸುಗಳೊಂದಿಗೆ ವೈಭವದಿಂದ ನಡೆಯಿತ್ತು. ಬೆಳಿಗ್ಗೆ 7ಗಂಟೆಗೆ ಅಮ್ಮನವರ ಕಳಸ ಉತ್ಸವ ಅಗ್ನಿಕೊಂಡ ಪ್ರವೇಶಿಸಿತ್ತು.ಹರಕೆ ಹೊತ್ತ ಭಕ್ತರು ಅಗ್ನಿಕೊಂಡ ತುಳಿದು ಅಮ್ಮನವರ ಹರಕೆ ತೀರಿಸಿದರು. ಭಕ್ತಾಧಿಗಳಿಗೆ ಮಹಾ ದಾಸೋಹ ವ್ಯವಸ್ಥೆ ಮಾಡಲಾಯಿತ್ತು. ಬಾಲಾಜಿ ಸೇವಾ ಟ್ರಸ್ವ್ ಅಧ್ಯಕ್ಷ ಕೆ.ಕುಮಾರು ಹಾಗೂ ಅವರ ಕುಂಟುಂಬ ವರ್ಗದವರು ಭೇಟಿ ನೀಡಿ ಅಮ್ಮನವರ ದರ್ಶನ ಪಡೆದರು. ಪ್ರಧಾನ ಅರ್ಚಕ ಹುಚ್ಚಪ್ಪನ್ನಯ್ಯ ಹಾಗೂ ದೇವಾಲಯದ ಪಧಾದಿಕಾರಿಗಳು ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!