ಪಾವಗಡ .ಮಹಿಳೆಯರ ರಕ್ಷಣೆ ಕೇವಲ ಪೊಲೀಸ್ ಇಲಾಖೆ ಅಲ್ಲದೆ ಸಮಾಜದ ಪ್ರತಿಯೊಬ್ಬ ನಾಗರಿಕರು ಸಹ ಮಹಿಳೆಯರ ರಕ್ಷಣೆಗೆ ನಿಂತಾಗ ಮಹಿಳಾ ದಿನಾಚರಣೆಗೆ ಅರ್ಥ ಕಲ್ಪಿಸುವಂತಾಗುತ್ತದೆ ಎಂದು ಪಾವಗಡ ಪೊಲೀಸ್ ಠಾಣೆ ಮಹಿಳಾ ಪೇದೆ ಕುಮಾರಿ ಪವಿತ್ರ ಗೌಡ ತಿಳಿಸಿದರು.
ಪಾವಗಡ ಹೆಲ್ಪ್ ಸೊಸೈಟಿ ವತಿಯಿಂದ ಪಟ್ಟಣದ ವಿಧ್ವತ್ ಕಂಪ್ಯೂಟರ್ ಸೆಂಟರ್ ನ ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನುಉದ್ದೇಶಿಷಿ ಮಾತನಾಡಿದರು.
ನಿವೃತ್ತ ಮಹಿಳಾ ದೈಹಿಕ ಶಿಕ್ಷಕಿ ಶ್ರೀಮತಿ ಶೋಭಾಮಾತನಾಡಿ ಮಹಿಳೆಯರು ಇಂದಿನ ಯುಗದಲ್ಲಿ ಪುರುಷರಷ್ಟೇ ಮಹಿಳೆಯರು ಕೂಡ ಸರಿ ಸಮಾನರಾಗಿ ದುಡಿಯುತ್ತಿರುವುದು ಸಂತೋಷಕರ ಸಂಗತಿ ಎಂದರು.
ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಶ್ರೀಮತಿ ಶೋಭಾ ಮಾತನಾಡುತ್ತ ಸಮಾಜದಲ್ಲಿ ಸಾಮಾನ್ಯ ಮಹಿಳೆಯರಿಗೂ ಕೂಡ ಗೌರವ ಸಿಗುವಂತಾಗಲಿ, ಸರ್ಕಾರಿ ಕಚೇರಿಗಳಲ್ಲಿ, ಸರ್ಕಾರದ ಸೌಲಭ್ಯಗಳು ಮಹಿಳೆಯರಿಗೆ ತಲುಪುವಂತ ಕಾರ್ಯಕ್ಕೆ ಮಹಿಳಾ ಅಧಿಕಾರಿಗಳು ಸ್ಪಂದಿಸುವಂತ ಕೆಲಸವಾಗಬೇಕು ಎಂದರು.
ಸೊಪ್ಪುಗಳು ಅಂಗನವಾಡಿ ಶಿಕ್ಷಕಿ ಸುಶೀಲಮ್ಮ
ಮಾತನಾಡುತ್ತ ಸರ್ಕಾರ ಮಾಡುವಂತ
ಮಹಿಳಾ ದಿನಾಚರಣೆ ಇಂದು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಮ್ಮಿಕೊಂಡು ಮಹಿಳಾ ಸಾಧಕಿಯರಿಗೆ ಸನ್ಮಾನ ಮಾಡುತ್ತಿರುವುದು ಮಹಿಳೆಯರಿಗೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ ಎಂದು ತಿಳುಸುತ್ತ ಹೆಲ್ಪ್ ಸೊಸೈಟಿ ಸಮಾಜ ಸೇವಾ ಜೊತೆಗೆ ರಾಷ್ಟ್ರೀಯ ಹಬ್ಬಗಳು ಹಾಗೂ ಸಾಂದರ್ಭಿಕ ತಕ್ಕಂತೆ ದಿನಾಚರಣೆಗಳು ಆಚರಿಸಿ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅಭಿನಂದನರ್ಹ, ಹೆಲ್ಪ್ ಸೊಸೈಟಿ ಸಂಸ್ಥೆ ಮತ್ತಷ್ಟು ಕೆಲಸಗಳು ನಡೆಸಲು ಭಗವಂತ ಶಕ್ತಿ ನೀಡಲಿ ಎಂದು ಆಶೀಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹೆಲ್ಪ್ ಸೊಸೈಟಿ ವತಿಯಿಂದ ಮಹಿಳಾ ಸಾಧಕಿಯರಾದ ಪೊಲೀಸ್ ಇಲಾಖೆಯ ಮಹಿಳಾ ಸಿಬ್ಬಂದಿ ಕುಮಾರಿ ಪವಿತ್ರ ಗೌಡ,ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಮೇಘನಾ,ದೈಹಿಕ ಶಿಕ್ಷಕಿ ಶೋಭಾ, ಶಿಕ್ಷಕಿ ಶೋಭಾ, ತಹಸೀಲ್ದಾರ್ ಕಚೇರಿ ಲಕ್ಷ್ಮಿ,ಅಂಗನವಾಡಿ ಶಿಕ್ಷಕಿ ಸುಶೀಲಮ್ಮ, ರತ್ನಮ್ಮ, ಸರೋಜಮ್ಮ, ಮಂಜುಳಾ, ಹನುಮಕ್ಕ, ನಾಗಮಣಿ, ಖಾಸಗಿ ಆಸ್ಪತ್ರೆ ಸಸ್ರುಷಕಿ ಲಕ್ಷ್ಮಿ,ಖಾಸಗಿ ಮಹಿಳಾ ವಿದ್ಯಾರ್ಥಿನಿಲಯ ವಾರ್ಡನ್ ಸುದಮ್ಮ,ಮೆಹರ್ ಬಾಬಾ ಸಂಘದ ಮಂಜುಳಾ, ಗೃಹಿಣಿ ನಾಗಮಣಿ ನಾಗರಾಜ್, ಪುರಸಭೆ ಇಲಾಖೆ ಪೌರಾಕಾರ್ಮಿಕೆ ನಾಗಲಕ್ಷ್ಮಮ್ಮ,ಬೀದಿ ಬದಿ ವ್ಯಾಪಾರಿಗಳ ಬ್ಲಡ್ ಶಶಿಕಲಾ, ಬ್ಯಾಡನೂರ್ ಭವಾನಿ ರವರನ್ನು ಶಾಲು ಹೊದಿಸಿ, ಹುಮಾಲೆ ಹಾಕಿ ನೆನಪಿನ ಕಾಣಿಕೆ ನೀಡಿ ಗೌರವತವಾಗಿ ಸನ್ಮಾನಿಸಿ ಅಭಿನಂದಿಸಿದರು.
ಈ ಅದ್ದೂರಿಯಾಗಿ ಮಹಿಳಾ ಸಾಧಕಿಯರ ಸನ್ಮಾನ ಸಮಾರಂಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್,ಶ್ರೀಮತಿ ಸಂದ್ಯಾಶಶಿಕಿರಣ್, ಪುರಸಭೆ ಸದಸ್ಯ ಗೊರ್ತಿ ನಾಗರಾಜ್, ಬ್ಯಾಡನೂರು ಶಿವು, ಆಟೋ ಚಾಲಕರ ಸಂಘದ ಬೇಕರಿ ನಾಗರಾಜ್, ಯುವ ಮುಖಂಡ ರಿಜ್ವಾನ್, ವೀರಮ್ಮನಹಳ್ಳಿ ಲೋಕೇಶ್, ಮಲ್ಲಿಕಾರ್ಜುನ್,ಹೆಲ್ಪ್ ಸೊಸೈಟಿ ಪದಾಧಿಕಾರಿಗಳಾದ ಅರುಣಾ, ಸಾಗರ್,ರಾಕೇಶ್, ಉಪಸ್ಥಿತರಿದ್ದರು.