ಸೇವಾ ಮನೋಭಾವ ರೂಡಿಸಿಕೊಳ್ಳಲು ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಕರೆ

ಪಾವಗಡ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ನಿಡಗಲ್ ಮತ್ತು ದೇವರಾಯನರೋಪ್ಪ ಗ್ರಾಮದಲ್ಲಿ ಶ್ರೀ ವೈ .ಇ.ಆರ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಏಳು ದಿನಗಳ ಎನ್.ಎಸ್.ಎಸ್. ಕ್ಯಾಂಪ್ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಅವರು ಮಾತನಾಡಿ ಕಾಲೇಜು ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ರೂಡಿಸಿಕೊಳ್ಳಬೇಕು ಈ ದೇಶ ಕಟ್ಟುವ ಭದ್ರಬುನಾದಿ ವಿದ್ಯಾರ್ಥಿಗಳ ಮೇಲೆ ನಿಂತಿದೆ. ನಾಡು ನುಡಿ ಐತಿಹಾಸಿಕ ಸ್ಮಾರಕಗಳ ರಕ್ಷಣೆಯಲ್ಲಿ ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದು ತಿಳಿಸಿದರು

ಗ್ರಾಮದಲ್ಲಿ ವಿದ್ಯಾರ್ಥಿಗಳು ಐತಿಹಾಸಿಕ ದೇವಸ್ಥಾನಗಳು ಕಲ್ಯಾಣಿಗಳು .ಶಾಲೆ, ಚರಂಡಿಗಳನ್ನು ಸ್ವಚ್ಛತೆಯನ್ನು ಗೊಳಿಸಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊಫೆಸರ್. ಪಿ ಲಿಂಗರಾಜುರವರು ವಹಿಸಿದ್ದರು

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಗಳಾದ ರಾಘವೇಂದ್ರ ರಾಮಾಂಜನಿ . ಮುಖಂಡರುಗಳಾದ ಎನ್. ಎ. ಈರಣ್ಣ. ಪಾಳೇಗಾರ ಲೋಕೇಶ್. ರಾಧಿಕಾ ಶಿವಕುಮಾರ್. ಗಿರಿಜಮ್ಮ ಶಿವಣ್ಣ. ಪರಮೇಶ್ವರ್. ರಾಮಪ್ಪ. ರಾಜು. ತಿಪ್ಪೇಸ್ವಾಮಿ. ಮಂಜುನಾಥ್. ಶ್ರೀನಿವಾಸ್. ಹನುಮಂತ್ ರಾಯ. ಮುಂತಾದವರು ಭಾಗವಹಿಸಿದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!