ಹೊಯ್ಸಳಕಟ್ಟೆ
ಚಿಕ್ಕನಾಯಕನಹಳ್ಳಿ ತಾಲೂಕು ಬೆಳ್ಳಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಜೆಡಿಎಸ್ ಪಕ್ಷದ ಬೆಂಬಲಿತ ಸದಸ್ಯ ಎಸ್.ಮಲ್ಲಿಕಾರ್ಜುನ್ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷ ರಾಗಿದ್ದ ಪುಟ್ಟಯ್ಯನವರು ಅಧಿಕಾರ ಒಪ್ಪಂದ ಮಾಡಿಕೊಂಡ ಪ್ರಕಾರ ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ಆ ಸ್ಥಾನಕ್ಕೆ ಚುನಾವಣೆ ನಡೆದು ಅವಿರೋಧವಾಗಿ ಅಧ್ಯಕ್ಷ ರಾಗಿ ಮಲ್ಲಿಕಾರ್ಜುನ್ ಆಯ್ಕೆಯಾದರು.
ನೂತನ ಅಧ್ಯಕ್ಷ ಎಸ್.ಮಲ್ಲಿಕಾರ್ಜುನ್ ಮಾತನಾಡಿ ಸುಮಾರು ವರ್ಷಗಳ ನಂತರ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 4 ಲಕ್ಷ ರೂ ಆದಾಯಗಳಿಸಿದೆ.ಇನ್ನು ಹೆಚ್ಚಿನ ಅಭಿವೃದ್ಧಿ ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಇದೆ ಸಂಧರ್ಭದಲ್ಲಿ ನಿರ್ದೆಶಕರು ಅಧ್ಯಕ್ಷ ರನ್ನು ಅಭಿನಂದಿಸಿದರು.
ಮುಖಂಡರಾದ ದಸೂಡಿ ಮಾಜಿ ಗ್ರಾಪಂ ಅಧ್ಯಕ್ಷ ದಬ್ಬಗುಂಟೆ ಡಿ.ಬಿ.ರವಿಕುಮಾರ್,ಹೊಯ್ಸಳಕಟ್ಟೆ ಗ್ರಾಪಂ ಮಾಜಿ ಅಧ್ಯಕ್ಷ ಬೆಳ್ಳಾರ ಗೊಲ್ಲರಹಟ್ಟಿ ನಾಗರಾಜು,ಮಾಜಿ ತಾಪಂ ಸದಸ್ಯ ಪ್ರಸನ್ನ ಕುಮಾರ್,ಬೆಳ್ಳಾರ ಗಿರೀಶ್, ಕಾರ್ಯದರ್ಶಿ ಪ್ರಕಾಶ್.ಬೆಳ್ಳಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಎಲ್. ವಿ. ಗೋಪಿನಾಥ್, ಮೀನಾಕ್ಷಮ್ಮ, ಎಲ್. ಕೆ. ಈರಣ್ಣ, ಪುಟ್ಟಯ್ಯ, ರಂಗನಾಥಪ್ಪ, ಎಚ್. ಟಿ. ಗಿರೀಶ್, ಎಂ ಮದಕರಿ ನಾಯಕ, ಕ್ಯಾತಯ್ಯ ಪೂಜಾರಿ, ಲಕ್ಷ್ಮಿ ದೇವಮ್ಮ, ಕುಮಾರಸ್ವಾಮಿ ಹಾಗು ಚುನಾವಣಾ ಅಧಿಕಾರಿಯಾಗಿ ಶ್ರೀನಿವಾಸ್ ಕರ್ತವ್ಯ ನಿರ್ವಹಿಸಿದರು.