ಎಂ ಎನ್ ಕೋಟೆ : ಭಕ್ತಿ ಮತ್ತು ಜ್ಞಾನ ಎರಡನ್ನು ಒಟ್ಟಿಗೆ ತೆಗೆದುಕೊಂಡು ಹೋದಾಗ ಮಾತ್ರ ದೇವಾಲಯಗಳು ಹಾಗೂ ವಿದ್ಯಾಲಯಗಳು ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಹೊಸದುರ್ಗ ಕಾಗಿನಲೆ ಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಸೋಮಲಾಪುರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಶನೇಶ್ವರಸ್ವಾಮಿಯ ನೂತನ ದೇವಾಲಯ ಸ್ಥಿರಬಿಂಬ ಪ್ರತಿಷ್ಠಾಪನೆಯ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಯಾವುದೇ ಜಾತಿ ಮತ ಭೇಧವಿಲ್ಲದೆ ಎಲ್ಲರೂ ಒಗ್ಗಟು ಆದಾಗ ಮಾತ್ರ ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ ಎಂದರು.
ಈ ಗ್ರಾಮದಲ್ಲಿ ವಾಸ ಮಾಡುವ ಎಲ್ಲ ಜಾತಿ ಜನಾಂಗದ ವರ್ಗದವರು ನೀವು ಒಂದಾಗಬಿಟ್ಟರೇ ಅದಕ್ಕಿನ್ನ ದೊಡ್ಡ ಶಕ್ತಿ ಬೇರೊಂದು ಇಲ್ಲ ಆದ್ದರಿಂದ ಶರಣರ ಸಂಗಮ , ಜನರ ಸಂಗಮ ,ಸಂತರ ಸಂಗಮ ಒಂದಾಗಬೇಕಿದೆ.ಇತ್ತೀಚಿನ ದಿನಗಳಲ್ಲಿ ಜಾತಿ ಜಾತಿಯೇ ನಡುವೆ ವೈಶಮ್ಯವಿದೆ ನಾನು ಮೇಲು ಜಾತಿ ನೀನು ಕೇಳ ಜಾತಿ ಎಂಬ ಭಾವನೆಗಳನ್ನು ಕಳೆದು ನಾವೆರಲ್ಲರೂ ಒಂದೇ ಎಂಬ ಭಾವನೆ ಬಂದಾಗ ಮಾತ್ರ ಗ್ರಾಮಗಳಲ್ಲಿ ಇನ್ನೂ ಹತ್ತಾರು ದೇವಾಲಯಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಎಲೆರಾಂಪುರ ಮಠದ ಶ್ರೀ ಹನುಮಂಥನಾಥ ಸ್ವಾಮಿಗಳು ಮಾತನಾಡಿ ಜಾತಿ ಮತ ಬೇಧ ಮರೆತು ಎಲ್ಲರೂ ಒಂದಾಗಿ ಎಲ್ಲರು ಒಂದೇ ಭಾವನೆ ಕಾಣಬೇಕು ಎಲ್ಲರು ಸಮನಾಗಿ ಬದಕುಬೇಕು ನಾವೆಲ್ಲರೂ ಒಂದೇ ಎಂಬ ಭಾವನೆಯನ್ನ ಭಗವಂತನ ಕೃಪೆ ನಮ್ಮಗೆ ಇರಲಿ ಎಂದ ಅವರು ಸನಾತನ ಧರ್ಮದಲ್ಲಿ ದೇವಾಲಯಕ್ಕೆ ತನ್ನದೇ ಆದ ಮಹತ್ವ ಇದೆ ಗುಡಿ ಗೋಪುರಗಳನ್ನು ಕಟ್ಟುವುದು ಮುಖ್ಯವಲ್ಲ ಅದನ್ನ ಮುನ್ನೆಡಸಿಕೊಂಡು ಹೋಗುವುದು ಅಷ್ಠೇ ಮುಖ್ಯವಾಗಿರುತ್ತದೆ.ಹಣ ಇದಷ್ಠಕ್ಕೆ ಮಾತ್ರ ದೇವಾಲಯಗಳನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ ಊರಿನ ಗ್ರಾಮದವರು ಎಲ್ಲರೂ ಸಹಕಾರ ಮುಖ್ಯವಾಗಿರುತ್ತದೆ ಎಂದರು.
ಬೆಟ್ಟದಹಳ್ಳಿ ಗವಿಮಠಧ್ಯಕ್ಷರಾದ ಶ್ರೀ ಚಂದ್ರಶೇಖರಸ್ವಾಮಿಗಳು ಮಾತನಾಡಿ ಗ್ರಾಮಗಳಲ್ಲಿ ದೇವಾಲಯಗಳು ನಿರ್ಮಾಣವಾಗುವುದರಿಂದ ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ಇರುತ್ತದೆ.ಊರಿಗೊಂದು ದೇವಾಲಯಗಳ ಅವಶ್ಯಕತೆ ಇದೇ ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ಹೆಚ್ಚು ಮಹತ್ವ ನೀಡಲಾಗಿದೆ.ಜೂತೆಗೆ ಪೋಷಕರು ಮಕ್ಕಳಿಗೆ ಶಿಕ್ಷಣವಂತರಾಗಿ ಮಾಡಬೇಕು ಸಂಸ್ಕಾರ ಗುರು ಹಿರಿಯರನ್ನು ಗೌರವಿಸಬೇಕು ತಂದೆ ತಾಯಿಗಳಿಗೆ ಸಮಾಜದಲ್ಲಿ ಗುರುತಿಸುವ ಕೆಲಸವನ್ನು ಮಕ್ಕಳು ಮಾಡಿದರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗುತ್ತಾರೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಶಾಸಕ ಎಸ್ ಆರ್ ಶ್ರೀನಿವಾಸ್ , ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭದೇಶಕೇಂದ್ರ ಸ್ವಾಮಿಗಳು , ತೇವಡೇಹಳ್ಳಿ ಮಠದ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಗಳು , ಗೊಲ್ಲಹಳ್ಳಿ ಸಿದ್ದಲಿಂಗೇಶ್ವರ ಮಠದ ಶ್ರೀ ವಿಭವ ವಿದ್ಯಾ ಶಂಕರದೇಶೀಕೇಂದ್ರ ಸ್ವಾಮಿಗಳು ,
ಕೊಡಿಹಳ್ಳಿ ಮಠದ ಶ್ರೀ ಷಡಾಕ್ಷರಿ ಮುನಿದೇಶಿಕೇಂದ್ರ ಸ್ವಾಮಿಗಳು , ನೀಲಕಂಠ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮಿಗಳು , ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಯೋಗೀಶ್ , ಸದಸ್ಯರಾದ ನರಸಯ್ಯ , ಯಶೋಧ ಲೋಕೇಶ್ , ರುಕ್ಷ್ಮೀಣಿ , ತಾಲ್ಲೂಕ್ ಪಂಚಾಯಿತಿ ಸದಸ್ಯ ಅ.ನ.ಲಿಂಗಪ್ಪ ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ ,ಎಸ್.ಡಿ.ದೀಲೀಪ್ ಕುಮಾರು , ಪಿ.ಬಿ.ಚಂದ್ರಶೇಖರಬಾಬು ಗುತ್ತಿಗೆದಾರ ಮಹೇಶ್ , ಪ್ರಭಾಕರ್ , ಬಲರಾಮ್ ಹಾಗೂ ದೇವಾಲಯದ ಪದಾಧಿಕಾರಿಗಳು ಭಾಗವಹಿಸಿದ್ದರು.