ತುಮಕೂರು: ಮಂದಾರ ಗಿರಿಯಲ್ಲಿ ಒಂದು ರೀತಿ ಭಕ್ತಿ ಸಂಚಲನ ಉಂಟುಮಾಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ಮಂದಾರಗಿರಿ (ಬಸ್ತಿಬೆಟ್ಟ)ಯಲ್ಲಿ ನಡೆಯುತ್ತಿರುವ ಶ್ರೀ ದಿವ್ಯಾಕಾಶ ಸಮವಸರಣ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮ ಕ್ಷೇತ್ರಕ್ಕೂ ಪುಣ್ಯಕ್ಷೇತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಯಾವ ಕ್ಷೇತ್ರದಲ್ಲಿ ಸಂತರು, ಮುನಿಗಳು, ಯೋಗಿಗಳು ನೆಲೆ ನಿಲ್ಲು ತ್ತಾರೆಯೋ ಅದು ಪುಣ್ಯ ಕ್ಷೇತ್ರವಾಗಿ ರೂಪಾಂತರ ಗೊಳ್ಳುತ್ತದೆ. ಎಲ್ಲಿ ವಿಪರೀತ ಮನೋಭಾವದ ಜನರು ಇರುತ್ತಾರೆಯೇ ಅದು ಕುರುಕ್ಷೇತ್ರ ವಾಗೀ ಪರಿವರ್ತನೆಯಾಗುತ್ತದೆ ಎಂದು ತಿಳಿಸಿದರು.
ಅದೇ ರೀತಿ ಯುಗಲ ಮುನಿಗಳ ನೇತೃತ್ವದಲ್ಲಿ ಮಂದಾರ ಗಿರಿಯಲ್ಲಿ ನಡೆಯುತ್ತಿರುವ ಈ ಸಮೋಸರಣ ಕಾರ್ಯಕ್ರಮವು ಈ ಭಾಗದ ಪುಣ್ಯವಾಗಿದೆ ಎಂದು ಹೇಳಿದರು
ಈ ದೇಶಕ್ಕೆ ತನ್ನದೇ ಆದಂತಹ ಹಿರಿಮೆ ಹಾಗೂ ಗೌರವ ಇದೆ. ಭಾರತವು ಧರ್ಮ ಪ್ರಧಾನವಾದ ಮತ್ತು ಆಧ್ಯಾತ್ಮಿಕತೆಯಿಂದ ಕೂಡಿದಂತಹ ದೇಶವಾಗಿದೆ. ಲೌಕಿಕಕ್ಕಿಂತ ಅಲೌಕಿಕರನ್ನು ಹೆಚ್ಚು ಹೆಚ್ಚು ಕಂಡಂತಹ ದೇಶವಾಗಿದೆ. ಇಹಕ್ಕಿಂತಲೂ ಪರರನ್ನು ಪ್ರೀತಿಸಿದ ದೇಶವಾಗಿದೆ. ಅಂತಹ ಪವಿತ್ರವಾದ ದೇಶದಲ್ಲಿ ಅನೇಕ ಮಹಾನುಭಾವರು ಜನ್ಮತಾಳಿದ್ದಾರೆ. ಈ ನೆಲದ ಜಲದ ಪುಣ್ಯವನ್ನು ಹೆಚ್ಚಿಸಿದ್ದಾರೆ. ಅಂತಹ ಮಾನುಭಾವರಲ್ಲಿ ಮಹಾವೀರರು ಕೂಡ ಒಬ್ಬರಾಗಿದ್ದಾರೆ ಎಂದರು.
ಮಹಾವೀರರು ರಾಜ ಮನೆತನದಲ್ಲಿ ವೈಭೋಗದಿಂದ ಬದುಕಿ ಬಾಳಿದರು ನಂತರ ಅದೆಲ್ಲವನ್ನು ತ್ಯಾಗ ಮಾಡಿ ಆಲೋಕಿಕ ಬದುಕಿನ ಸಾಗಿದ ಪುಣ್ಯ ಪುರುಷರಾಗಿದ್ದಾರೆ ಎಂದು ಹೇಳಿದರು.
ಅವ್ರ ಆಶೀರ್ವಾದದಿಂದ ಬೆಳೆದ ಜೈನ ಧರ್ಮ ಇಂದು ಜಗತ್ತಿನೆಲ್ಲೆಡೆ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ ಎಂದರು.
ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.
ಜೈನ ಸಮುದಾಯದವರು ಪರಮ ಸಾತ್ವಿಕರಾಗಿದ್ದಾರೆ.
ಶುದ್ಧ ಶಾಖಾಹಾರಿಗಳು ಇದ್ದರೆ ಅವರು ಜೈನ ಧರ್ಮದವರು ಎಂದು ನಾವು ಹೆಮ್ಮೆಯಿಂದ ಹೇಳಬೇಕಾಗುತ್ತದೆ ಎಂದರು.
ಒಂದು ಧರ್ಮ ಅಹಿಂಸೆಯೊಂದಿಗೆ ಗುರುತಿಸಿಕೊಳ್ಳುವಂತದ್ದು ಅದು ಅತಿ ಮಹತ್ವದ್ದಾಗಿದೆ ಎಂದು ಹೇಳಿದರು.
ಒಂದು ಚಿಕ್ಕ ಕ್ರಿಮಿ ಕೀಟಕ್ಕೂ ಕೂಡ ಹಿಂಸೆ ಆಗಬಾರದು ಎಂಬ ಮಾನವಭಾವ ಅವರದ್ದು,
ಇಂದ್ರನನ್ನು ಗೆದ್ದವರಿಗೆ ವೀರ ಎನ್ನುತ್ತಾರೆ, ಇಂದ್ರಿಯಗಳನ್ನು ಗೆದ್ದವರಿಗೆ ಮಹಾವೀರ ಎನ್ನುತ್ತಾರೆ. ಇಂದ್ರನನ್ನು ಗೆಲ್ಲಬಹುದು ಆದರೆ ಇಂದ್ರಿಯಗಳನ್ನು ಗೆಲ್ಲುವುದು ಸಾಕಷ್ಟು ಕಷ್ಟ ಎಂದು ಹೇಳಿದರು.
ಇಂದ್ರಿಯಗಳಿಗೆ ಗುರುತ್ವಾಕರ್ಷಣ ಶಕ್ತಿ ಹೆಚ್ಚು ಹಾಗಾಗಿ ಇಂದ್ರಿಯಗಳನ್ನು ಗೆಲ್ಲುವುದು ಸಾಕಷ್ಟು ಕಷ್ಟವಾಗಿರುತ್ತದೆ ಅದನ್ನು ಮಹಾವೀರ ಗೆದ್ದಿದ್ದಾನೆ ಎಂದು ಹೇಳಿದರು.
ಅದೇ ರೀತಿ ಮುನಿಗಳು ಸಹ ಇಂದ್ರಿಯಗಳನ್ನು ಗೆದ್ದವರಾಗಿದ್ದಾರೆ ಅವರ ಆಶೀರ್ವಾದ ಪಡೆಯುವುದು ನಮ್ಮ ಸೌಭಾಗ್ಯವಾಗಿರುತ್ತದೆ ಎಂದು ತಿಳಿಸಿದರು.
ಋತುಮಾನಕ್ಕೆ ತಕ್ಕಂತೆ ನಾವು ಬಟ್ಟೆಗಳನ್ನು ಬದಲಾಯಿಸುತ್ತೇವೆ, ಆದರೆ ಪ್ರಕೃತಿಗೆ ವಿರುದ್ಧವಾಗಿ ಹೋಗುವುದು ಹಾಗೂ ಧರ್ಮೋಪದೇಶ ಮಾಡುವುದು ಸಾಕಷ್ಟು ಮಹತ್ವದ್ದಾಗಿರುತ್ತದೆ. ಮುನಿಗಳು ಅಂತಹ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ಭಗವಂತ ಅವರ ರೂಪದಲ್ಲಿ ಇರುತಾನೆ ಎಂದೇ ನಾವು ಭಾವಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಅಮೋಘ ಕೀರ್ತಿ ಮಹಾರಾಜ್ ಮತ್ತು ಶ್ರೀ ಅಮರ ಕೀರ್ತಿ ಮಹಾರಾಜ್ ಸಾನಿಧ್ಯ ವಹಿಸಿದ್ದರು. ಧರ್ಮ ಸ್ಥಳದ ಸುರೇಂದ್ರ ಕುಮಾರ್, ಗೊಮ್ಮಟವಾಣಿ ಧಾರ್ಮಿಕ ಪತ್ರಿಕೆಯ ಸಂಪಾದಕ ಎಸ್ಎನ್ ಅಶೋಕ್ ಕುಮಾರ್ , ಕರ್ನಾಟಕ ಜೈನ್ ಅಸೋಸಿಯೇಶನ್ ಅಧ್ಯಕ್ಷ ಪ್ರಸನ್ನ ಆಯ್ಯ , ಎಂಪಿ ಸನ್ಮತಿ ಕುಮಾರ್, ಶ್ರೀ ದಿಗಂಬರ ಜೈನ್ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ್ ಮಂದಿರ ಸಮಿತಿ ಅಧ್ಯಕ್ಷ ಎಸ್ ಜೇ ನಾಗರಾಜ್ ಸ್ವಾಗತಿಸಿದರು. ಪೂಜ್ಯ ಮೋಹನ್ ಪ್ರಾರ್ಥಿಸಿದರು. ಕುಮುದ ನಿರೂಪಿಸಿದರು. ಆರ್ ಜೇ ಸುರೇಶ್ ವಂದಿಸಿದರು.