…..
ತುಮಕೂರು: ಕಳೆದ ಆರು ದಿನಗಳಿಂದ ಮಂದಾರಗಿರಿ(ಬಸ್ತಿಬೆಟ್ಟ)ದಲ್ಲಿ ನಡೆದ ಶ್ರೀ ದಿವ್ಯಾಕಾಶ ಸಮವಸರಣ ಪಂಚ ಕಲ್ಯಾಣ ಮಹೋತ್ಸವದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಭಾಗವಹಿಸಿದ್ದರು ಎಂದು ದಿಗಂಬರ ಜೈನ ಮುನಿ ಶ್ರೀ ಅಮೋಘ ಕೀರ್ತಿ ಮುನಿ ಮಹಾರಾಜ್ ಹೇಳಿದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ಮಾತನಾಡಿದ ಅವರು, ನಿತ್ಯವೂ ಆರು ದಿನಗಳ ಊಟ ಹಾಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು ಅಲ್ಲದೆ ಮುಂಬೈ, ಮಹಾರಾಷ್ಟ್ರ, ರಾಜಸ್ತಾನದಿಂದ ಭಕ್ತರು ಆಗಮಿಸಿದ್ದರು ಎಂದರು.
ಈ ಮೂಲಕ ಬಸ್ತಿಬೆಟ್ಟ ಒಂದು ರೀತಿ ಭಕ್ತಿಯ ಸಮುಚ್ಚವಾಗಿ ಪರಿವರ್ತನೆ ಯಾಗಿದೆ. ಪ್ರತಿ ದಿನ ಎಲ್ಲಾ ಧರ್ಮದ ಸ್ವಾಮೀಜಿಗಳು ಭಾಗವಹಿಸಿ ತಮ್ಮ ಸಮುದಾಯದಲ್ಲಿನ ಆಚಾರ ಮತ್ತು ವಿಚಾರಗಳನ್ನು ವ್ಯಕ್ತಪಡಿಸಿದ್ದರಲ್ಲದೆ ಜೈನ ಧರ್ಮದ ಮೌಲ್ಯಗಳನ್ನು ಹೇಳುವ ಮೂಲ್ಕ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜೈನ ಧರ್ಮೀಯರು ಇತರ ಧರ್ಮೀಯರೊಂದಿಗೆ ಹೊಂದಿರುವ ಪ್ರೀತಿ ವಿಶ್ವಾಸ ಮತ್ತು ಪರಸ್ಪರ ಸೌಹಾರ್ದ ಯುತ ವಾತಾವರಣ ಕುರಿತು ಹೇಳಿರುವುದು ತೃಪ್ತಿತಂದಿದೆ ಎಂದರು.
ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನಮಂದಿರ ಸಮಿತಿ ಅಧ್ಯಕ್ಷ ಎಸ್ ಜೆ ನಾಗರಾಜ್ ಮಾತನಾಡಿ, ಬೆಟ್ಟದ ಮೇಲೆ ನಿರ್ಮಿಸಲಾಗಿರುವ ದಿವ್ಯಾಕಾಶ ಸಮವಸರಣ ಪ್ರತಿಕೃತಿ ನಿಮಾಣ ಕಾರ್ಯದ ವೇಳೆ ಇದು ಸಾಧ್ಯವೇ ಎಂಬ ಅನುಮಾನ ಮೂಡಿತ್ತು. ಸತತವಾಗಿ 5 ವರ್ಷಗಳಿಂದ ನಿರಂತರವಾಗಿ ನುರಿತ ತಂತ್ರಜ್ಞರೊಂದಿಗೆ ಚರ್ಚೆ ನಡೆಸಿ ಯುಗಲ ಮುನಿಗಳ ಸಲಹೆಯಂತೆಯಂತೆ ಮುಂದೆ ಸಾಗಿದೆವು. ಅಲ್ಲದೆ ಜೈನ ಸಮುದಾಯದಲ್ಲಿನ ಕೆಲ ನ್ಯೂನತೆಗಳನ್ನು ಬದಿಗೊತ್ತಿ ಸಾಮೂಹಿಕವಾಗಿ ಮಹೋತ್ಸವವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜೈನ ಅಸೋಸಿಯೇಷನ್ ನಿರ್ದೇಶಕ ಆರ್ ಜೆ ಸುರೇಶ್ ಸಂಘಪತಿ ಅಜಿತ್, ಶಾಂತಲಾ ಅಜಿತ್, ಆನಂದ್, ಜೈನ ಭವನ್ ನಿರ್ದೇಶಕ ವಿನಯ್ ಮತ್ತಿತರರು ಹಾಜರಿದ್ದರು.