ಗುಬ್ಬಿ: ಸರ್ಕಾರ ಸ್ವಾಮ್ಯದ ಭಾರತ್ ಗ್ಯಾಸ್ ಸಂಸ್ಥೆಯ ನೂತನ ಘಟಕವನ್ನು ತಾಲ್ಲೂಕಿನ ನಿಟ್ಟೂರು ಹೋಬಳಿ ಅದಲಗೆರೆ ಗ್ರಾಮದಲ್ಲಿ ಎಸ್.ಆರ್.ಎಸ್.ಇ ವಿತರಣಾ ಘಟಕವನ್ನು ತಾಲ್ಲೂಕಿನ ಗ್ರಾಹಕರಿಗೆ ಪ್ರಾರಂಭಿಸಿ ವಿಶೇಷ ಕೊಡುಗೆಯಾಗಿ ಕೇವಲ 3700 ರೂಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ಬಳಕೆದಾರರಿಗೆ ನೀಡಲಾಯಿತು.
ಘಟಕದ ಮಾಲೀಕರಾದ ಹೇಮ ಕುಮಾರ್ ಮತ್ತು ರವಿಕಿರಣ್ ಮಾತನಾಡಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವಲ್ಲಿ ಗಮನ ಹರಿಸಿರುವ ಭಾರತ್ ಗ್ಯಾಸ್ ಸಂಸ್ಥೆ ತಾಲ್ಲೂಕಿನಲ್ಲಿ ಆರಂಭಿಸಲು ಅನುಮತಿ ಪಡೆದು ಸುಸಜ್ಜಿತ ದಾಸ್ತಾನು ಮಳಿಗೆಯನ್ನು ಎಚ್ ಎ ಎಲ್ ಘಟಕದ ಸಮೀಪದಲ್ಲಿ ನಿರ್ಮಿಸಿ ಗ್ರಾಹಕರಿಗೆ ಸೇವೆ ಆರಂಭಿಸಿದೆ. ಬುಕ್ ಮಾಡಿದ 24 ಗಂಟೆಗಳಲ್ಲಿ ಸೇವೆ ಒದಗಿಸುವ ಕೆಲಸ ಸಂಸ್ಥೆಯ ಪರವಾಗಿ ಎಸ್ ಆರ್ ಎಸ್ ಇ ಟೀಂ ಕೆಲಸ ಮಾಡಲಿದೆ. ಇಂಡೇನ್ ಹಾಗೂ ಎಚ್ ಪಿ ಸಂಪರ್ಕ ಇರುವವರು ಭಾರತ್ ಗ್ಯಾಸ್ ಸಂಪರ್ಕಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಎಲ್ಪಿಜಿ ಗ್ಯಾಸ್ ಟೆರಿಟರಿ ಮ್ಯಾನೇಜರ್ ಜಾವೀದ್ ಎಚ್ ದೇಸಾಯಿ ಹಾಗೂ ಎಲ್ಪಿಜಿ ಗ್ಯಾಸ್ ಸೇಲ್ಸ್ ಮ್ಯಾನೇಜರ್ ಆಶಿಶ್ ರಂಜನ್ ಈ ಘಟಕ ಉದ್ಘಾಟಿಸಿ ಶುಭ ಹಾರೈಸಿ ಉತ್ತಮ ಸೇವೆ ಸಲ್ಲಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಲು ತಿಳಿಸಿದರು. ಗ್ರಾಮೀಣ ಗ್ರಾಹಕರಿಗೆ ಗ್ಯಾಸ್ ಬಳಕೆ ಬಗ್ಗೆ ವಿಶೇಷ ಸಲಹೆಗಳನ್ನು ನೀಡಬೇಕು. ಜೊತೆಗೆ ಗ್ಯಾಸ್ ಬಳಕೆ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಬೇಕು. ಉಪಕಾರಿ ಎನಿಸಿದ ಗ್ಯಾಸ್ ಬಳಕೆ ಸರಿಯಾಗಿ ಬಳಸಬೇಕು. ಇಲ್ಲವಾದಲ್ಲಿ ಅಪಾಯಕಾರಿ ಕೂಡಾ ಆಗಿರುತ್ತದೆ. ಈ ಬಗ್ಗೆ ಘಟಕ ಸಿಬ್ಬಂದಿ ಗ್ರಾಹಕರಿಗೆ ವಿವರಣೆ ನೀಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್ ಸದಸ್ಯ ಎಂ.ಎಸ್.ಮಧುಸೂದನ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ವಿದ್ಯಾಧರ, ನಕುಲಯ್ಯ, ಶ್ರೀಕಂಠಯ್ಯ, ರವಿಕಿರಣ್, ಶೇಖರ್, ತಿಮ್ಮಪ್ಪ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.