ಗುಬ್ಬಿ: ದಕ್ಷತೆಯ ಕೆಲಸ ಮುಂದಿನ ದೊಡ್ಡ ಅನುಭವಕ್ಕೆ ಕಾರಣ ಎಂಬ ಧ್ಯೇಯದೊಂದಿಗೆ ಒಂದು ಕಟ್ಟಡದ ಕೆಲಸಕ್ಕೆ ಅಗತ್ಯ ಎಲ್ಲಾ ಯಂತ್ರೋಪಕರಣ ವಾಹನ ತಯಾರಿಸುವ ಕೇಸ್ ಕನ್ಸ್ಟ್ರಕ್ಷನ್ ಕಂಪೆನಿ ಭೂಮಿ ಅಗೆಯುವ ವಾಹನವನ್ನು ಗುಬ್ಬಿ ನಾಗರೀಕರ ಸಮ್ಮುಖದಲ್ಲಿ ಲಾಂಚ್ ಮಾಡಿತು.
ಗುಬ್ಬಿ ಚನ್ನಬಸವೇಶ್ವರಸ್ವಾಮಿ ದೇವಾಲಯದ ಹೆಬ್ಬಾಗಿಲು ಬಳಿ ನಡೆದ ಕಾರ್ಯಕ್ರಮದಲ್ಲಿ ಹೊಸ ಯಂತ್ರ ಖರೀದಿಗೆ 32 ಲಕ್ಷದಲ್ಲಿ ಎರಡು ಲಕ್ಷ ರೂಗಳ ರಿಯಾಯಿತಿ ಘೋಷಿಸಿ ಗ್ರಾಹಕರನ್ನು ಸೆಳೆದರು. ಪ್ರಾತ್ಯಕ್ಷಿಕೆ ಮೂಲಕ ಯಂತ್ರ ಬಳಕೆ ತೋರಿಸಿದರು. ಮೊದಲ ಕಂತು ಕಂಪೆನಿ ಭರಿಸುವ ಜೊತೆಗೆ ಎರಡು ವರ್ಷದ ವಾರೆಂಟಿ, ಮೊದಲ ವರ್ಷದ ಎರಡು ಸಾವಿರ ಗಂಟೆ ಉಚಿತ ಸರ್ವಿಸ್ ಹಾಗೂ ಗಂಟೆಗೆ ಕೇವಲ ನಾಲ್ಕು ಲೀಟರ್ ಡೀಸೆಲ್ ಬಳಕೆಯ ಎಲ್ಲಾ ಅಂಶಗಳನ್ನು ಹೇಳಿ ಆಕರ್ಷಿಸಿದರು.
ಕೇಸ್ ಕಂಪೆನಿಯ ದಕ್ಷಿಣ ಕರ್ನಾಟಕದ ಜಿಎಂ ಎನ್. ಲಕ್ಷ್ಮಣ್ ಮಾತನಾಡಿ ಬಲಿಷ್ಠ ಯಂತ್ರಗಳು ನಮ್ಮಲ್ಲಿ ಉತ್ಪಾದನೆಯಾಗುತ್ತಿದೆ. ಭೂಮಿ ಅಗೆಯುವ ಯಂತ್ರ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಲ್ಲಿ ತಯಾರಾಗಿದೆ. ಚಾಲಕನ ಕೈ ಚಳಕಕ್ಕೆ ತಕ್ಕಂತೆ ಬಳಕೆಯಾಗುವ ಯಂತ್ರ ವಾಹನ ಈಗಾಗಲೇ ರಾಜ್ಯದಲ್ಲಿ ಉತ್ತಮ ಎನಿಸಿಕೊಂಡಿದೆ. ಆಧುನಿಕ ಸ್ಪರ್ಶದೊಂದಿಗೆ ವಾಹನ ಗ್ರಾಹಕರ ಕೈ ಸೇರಿಸಿದೆ. ಎಲ್ಲವನ್ನೂ ಕೂಲಂಕುಷ ಪರಿಶೀಲಿಸಿ ಖರೀದಿ ಮಾಡಬಹುದಾಗಿದೆ. ದಕ್ಷತೆಗೆ ಹೆಸರಾದ ಕೇಸ್ ಕಂಪೆನಿ ರೈತರಿಗೆ ಸಾಕಷ್ಟು ಸಹಕಾರಿಯಾಗಿದೆ ಎಂದರು.
ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ಮಾತನಾಡಿ ಭೂಮಿ ಅಗೆಯುವ ಯಂತ್ರ ಕೇಸ್ ಕಂಪೆನಿಯಿಂದ ಗುಬ್ಬಿಯಲ್ಲಿ ಲಾಂಚ್ ಆಗಿರುವುದು ಸಂತಸ ವಿಚಾರ. ಈಗಾಗಲೇ ಗುಬ್ಬಿ ಪಟ್ಟಣದಲ್ಲಿ ಈ ಯಂತ್ರ ಖರೀದಿಗೆ ಗ್ರಾಹಕರು ಮುಂದಾಗಿದ್ದಾರೆ. ಅದರಲ್ಲಿ ಕೃಷಿಕ ವರ್ಗ ಬಂದಿರುವುದು ಮತ್ತೊಂದು ಹೆಮ್ಮೆಯ ವಿಚಾರ. ಈ ಜೊತೆಗೆ ನೂರಾರು ಮಂದಿ ಪ್ರಾತ್ಯಕ್ಷಿಕೆ ಮೂಲಕ ಯಂತ್ರ ಪರಿಚಯ ಮಾಡಿಕೊಂಡು ತೆರಳಿದ್ದಾರೆ. ಕೆಲವರು ತಮ್ಮ ಬಳಿಯ ಹಳೆಯ ಯಂತ್ರ ಬದಲಿಸಿ ಹೊಸ ಯಂತ್ರ ಖರೀದಿಗೆ ಮುಂದಾಗಿದ್ದಾರೆ. ಕಂಪೆನಿಯ ಶ್ರಮಕ್ಕೆ ತಕ್ಕ ಫಲ ಸಿಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಈ ಯಂತ್ರ ಬಳಕೆ ಕೃಷಿ ಜೊತೆ ಪಟ್ಟಣದಲ್ಲಿ ಇನ್ನಿತರ ಕೆಲಸಗಳಿಗೂ ಬಳಕೆಯಾಗಿದೆ. ಹೊಸ ರೂಪ ತಂತ್ರಜ್ಞಾನ ಬಳಕೆ ಆಕರ್ಷಣೀಯವಾಗಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕೇಸ್ ಕಂಪೆನಿಯ ಸೇಲ್ಸ್ ಮುಖ್ಯಸ್ಥ ಅರುಣ್ ಜವಾಲಿ, ವಲಯ ವ್ಯವಸ್ಥಾಪಕ ಜೆ.ಡಿ.ಕಾರ್ತಿಕೇಯನ್, ಪ್ರಾದೇಶಿಕ ವ್ಯವಸ್ಥಾಪಕ ವಿಜಯ್ ಮಾತುರ್, ಡೀಲರ್ ಮ್ಯಾನೇಜರ್ ಸಂದೀಪ್ ಅಗರವಾಲ್, ಮ್ಯಾನೇಜರ್ ಹುಸೇನ್, ಸಂಯೋಜಕ ಸಿದ್ದಲಿಂಗಯ್ಯ, ಮುಖಂಡರಾದ ಪಣಗಾರ್ ನಿಜಲಿಂಗಪ್ಪ, ಹರೀಶ್, ನಾಗಸಂದ್ರ ವಿಜಯ್ ಕುಮಾರ್ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.