ಶ್ರೀ ಚಿದಂಬರ ಪ್ರತಿಭಾನ್ವೇಷಣೆ : ಉಚಿತ ಶಿಕ್ಷಣ ನೀಡಲು ಮುಂದಾದ ಗುಬ್ಬಿಯ ಚಿದಂಬರ ಪಬ್ಲಿಕ್ ಸ್ಕೂಲ್.

ಗುಬ್ಬಿ: ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಭಾರತೀಯ ಸಂಸ್ಕೃತಿ ಮತ್ತು ಆಧುನಿಕ ಪರಂಪರೆಯ ಶಿಕ್ಷಣವನ್ನು ಉಚಿತ ಹಾಗೂ ರಿಯಾಯತಿಯಲ್ಲಿ ನೀಡುವ ವಿನೂತನ ಯೋಜನೆಯನ್ನು 2023-24 ನೇ ಸಾಲಿನಲ್ಲಿ 9 ಮತ್ತು 10 ನೇ ತರಗತಿ ಸೇರಬಯಸುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಚಿದಂಬರ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಶ್ರೀರಾಮ ಶಂಕರ್ ತಿಳಿಸಿದರು.

ಪಟ್ಟಣದ ಶ್ರೀ ಚಿದಂಬರಾಶ್ರಮದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಎಂಭತ್ತು ವರ್ಷದ ಇತಿಹಾಸ ಹೊಂದಿರುವ ಆಶ್ರಮ ಶಾಲೆ ಸನಾತನ ಧರ್ಮದ ಜೊತೆ ಅತ್ಯಾಧುನಿಕ ಕಂಪ್ಯೂಟರ್ ಶಿಕ್ಷಣ ನೀಡುವಲ್ಲಿ ಸೈ ಎನಿಸಿಕೊಂಡಿದೆ. ಉತ್ತಮ ಪರಿಸರದ ಶಾಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಹೊಸ ಯೋಜನೆ ರೂಪಿಸಿ ಪ್ರತಿ ವರ್ಷ ಮಕ್ಕಳಿಗೆ ಪ್ರತಿಭಾ ಪರೀಕ್ಷೆ ನಡೆಸಿ ನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದರು.

ಉಚಿತ ಶಿಕ್ಷಣ ಬಯಸಿದ ವಿದ್ಯಾರ್ಥಿಗಳು ಮಾರ್ಚ್ 10 ರಿಂದ ಏಪ್ರಿಲ್ 30 ರೊಳಗೆ ಭಾನುವಾರ ಹೊರತಾದ ಯಾವುದಾದರೂ ಒಂದು ದಿನ ಪರೀಕ್ಷೆ ನಡೆಸಲಾಗುವುದು. ಬೆಳಿಗ್ಗೆ 10.30 ರಿಂದ 3.30 ರೊಳಗೆ ನಡೆಯುವ ಪರೀಕ್ಷೆಯಲ್ಲಿ ಅರ್ಹರಾದವರನ್ನು ಮೌಖಿಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9481092117, 9663506601 ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಶಶಿಕಲಾ ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!