ಮಧುಗಿರಿ : ಅನೇಕ ವರ್ಷಗಳಿಂದ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಗಿಡದಾಗಲಹಳ್ಳಿ, ಕೋಡಿಗೇನಹಳ್ಳಿ ಹೋಬಳಿಯ ತಿಗಳರಹಳ್ಳಿ ಗ್ರಾಮದ ಕೆಲ ಕುಟುಂಬಗಳು ಭೂಮಿ ಮಂಜೂರಿಗಾಗಿ ಜನಪ್ರತಿನಿಧಿಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸೂರು ಕಲ್ಪಿಸಿಕೊಡಲು ಅಲೆದು ಕಂಗಾಲಾಗಿದ್ದಾರೆ.

2023ರ ಮೇ 10 ನೇ ತಾರೀಕಿನಂದು ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಅಥವಾ ಮುಖಂಡರುಗಳು ನಮ್ಮಲ್ಲಿ ಮತ ಕೇಳಲು ಬಂದಾಗ ನಾವುಗಳು ನಮ್ಮ ಮತಗಳನ್ನು ಹಣ ಹೆಂಡಕ್ಕೆ ಮಾರಿಕೊಳ್ಳುವುದಿಲ್ಲ ಜತೆಗೆ ಭೂಮಿ ವಸತಿ ಕೊಡದೆ ನಾವು ನಮ್ಮ ಮತಗಳನ್ನು ನೀಡಬಾರದೆಂದು ತೀರ್ಮಾನಿಸಿದ್ದೇವೆ ಹಾಗಾಗಿ ನಾವುಗಳು ವಾಸವಿರುವ ಜಾಗಗಳಲ್ಲಿ ಪ್ಲಕ್ಸ್ ಮತ್ತು ಮನೆಗಳ ಬಾಗಿಲುಗಳಿಗೆ ಪ್ಲೇ ಕಾರ್ಡ್ ಗಳನ್ನು ಹಾಕಿ ಭೂಮಿ ವಸತಿ ಕೊಡದೆ ನಮ್ಮ ವೋಟು ಕೊಡೆವು ಎಂಬ ಅಭಿಯಾನದೊಂದಿಗೆ ಹೋರಾಟವನ್ನು ಪ್ರಾರಂಭಿಸಿದ್ದೇವೆ.
ನಮ್ಮ ಮತಗಳು ಬೇಕಾದವರು ಚುನಾವಣೆಯ ನಂತರ ಭೂಮಿ ವಸತಿ ನೀಡುತ್ತೇವೆಂದು ಕರಾರಿನೊಂದಿಗೆ ಬಂದಲ್ಲಿ ಹಣ ಹೆಂಡ ಪಡೆಯದೆ ನಾವುಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತೇವೆ ಎಂಬ ಘೋಷ ವಾಕ್ಯಗಳನ್ನು ಗ್ರಾಮಸ್ಥರು ಸಾರಿದ್ದಾರೆ.