ಜೆಡಿಎಸ್ ಕಾರ್ಯಕರ್ತರ ಸಭೆ

ಪಾವಗಡ: ಪಟ್ಟಣದ ಎಸ್.ಎಸ್.ಕೆ ರಂಗಮಂದಿರದಲ್ಲಿ ಶುಕ್ರವಾರ ಜೆಡಿಎಸ್ ವತಿಯಿಂದ ಎಸ್ಟಿ ಕಾರ್ಯಕರ್ತರ ಸಭೆ ಸಭೆ ಏರ್ಪಡಿಸಲಾಗಿತ್ತು.

ಈ ಮೂಲಕ ಹಲವಾರು ಮಂದಿ ಕಾಂಗ್ರೆಸ್ ಬಿಜೆಪಿಯಿಂದ ಹೊರ ಬಂದು ಜೆಡಿಎಸ್ ಸೇರ್ಪಡೆಗೊಳಿಸಿಕೊಳ್ಳಲಾಯಿ

ಆನಂತರ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್ ಸಿ ಅಂಜಿನಪ್ಪ ಮಾತನಾಡಿ ನಾಯಕ ಸಮಾಜದ ಸಂಘಟನೆಯನ್ನ ಕಂಡು ಹರ್ಷ ವ್ಯಕ್ತಪಡಿಸಿದರು. ನಿಮ್ಮೆಲ್ಲರ ಸಹಕಾರದಿಂದ 25 ಸಾವಿರ ಮತಗಳ ಅಂತರದಲ್ಲಿ ತಿಮ್ಮರಾಯಪ್ಪ ಗೆಲ್ತಾರೆ ಎಂದು ತಿಳಿಸಿದರು. ಹಾಗೂ ತಾಲ್ಲೂಕಿನ ಅಭಿವೃದ್ಧಿಯೇ ನಮ್ಮ ಗುರಿಯಾಗುವ ನಿಟ್ಟಿನಲ್ಲಿ ಜೆಡಿಎಸ್ ಹೆಜ್ಜೆ ಇಡುತ್ತಿದೆ ಶಾಸಕ ವೆಂಕಟರವಣಪ್ಪ ನಾನು ನೀರು ಹರಿಸುತ್ತಿದ್ದೇನೆ ಎನ್ನುತ್ತಾರೆ ಇದನ್ನ ನಂಬಲು ಸಾಧ್ಯವಿಲ್ಲ ಎಲ್ಲರ ಸಹಕಾರದೊಂದಿಗೆ ತಿಮ್ಮರಾಯಪ್ಪ ರ ಪ್ರತಿಭಟನಾ ಹೋರಾಟ ಶ್ರಮದ ಫಲವಿದು ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿ, ತಿಮ್ಮರಾಯಪ್ಪ ಎಂಎಲ್ ಎ ಆದರೆ ರೈತರಿಗೆ ಬಡವರಿಗೆ ಹಲವು ಯೋಜನೆಗಳನ್ನು ತರಲಿದ್ದಾರೆ. ಇದನ್ನ ಕಾಂಗ್ರೆಸ್ ಬಿಜೆಪಿಯವರು ತರುತ್ತಾರ ಎಂದರು.
45 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದರು.
ಹಿರಿಯ ಮುಖಂಡ ಚೆನ್ನಮಲ್ಲಪ್ಪ ಮಾತನಾಡಿ ಶಾಸಕ ವೆಂಕಟರವಣಪ್ಪ ಕುಟುಂಬಕ್ಕೆ ಹೋರಾಟ ಮಾಡಿದ್ದೇನೆ ಆದರೆ ನನ್ನನ್ನೇ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದು ಮಾತನಾಡುತ್ತಿದ್ದಾರೆ ನಾನು ಅವರಿಂದ ಸಾಲಗಾರನಾದೆ ಎಂದು ಗುಡುಗಿದರು.

ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯಗಳನ್ನು ಸಮುದಾಯಗಳನ್ನು ನಿರ್ವಹಣೆಗೊಳಿಸಬೇಕು, ಗಂಗಾ ಕಲ್ಯಾಣ ಯೋಜನೆಯಂತ ಅಭಿವೃದ್ದಿ ಯೋಜನೆಗಳನ್ನು ಶಾಸಕರಾದ ಕೂಡಲೆ ಜಾರಿಗೆ ತರಬೇಕು ಎಂದು ಮಾಜಿ ಶಾಸಕರಿಗೆ ಪಾಳೆಗಾರ್ ಲೋಕೇಶ್ ಮನವಿ ಮಾಡುತ್ತ, ನಾಯಕ ಸಮಾಜವನ್ನು ಎಸ್ಟಿಗೆ ಸೇರಿಸುವಲ್ಲಿ ದೇವೆಗೌಡ ಸಹಕಾರ ಪ್ರಾಮುಖ್ಯವಾಗಿದೆ.ಹಾಗಾಗಿ ತಿಮ್ಮರಾಯಪ್ಪ ಅವರಿಗೆ ಮತ ಹಾಕಿ ಋಣ ತೀರಿಸಬೇಕು ಎಂದು ಲೋಕೇಶ್ ಪಾಳೆಗಾರ್ ಮನವಿ ಮಾಡಿದರು.

ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ ತಮ್ಮ ಅಭಿವೃದ್ಡಿ ಕಾರ್ಯದ ಬಗ್ಗೆ ಹೇಳಿದರು ಹಾಗೆ ನನಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.
ಯುವ ಮುಖಂಡ ಪಾಳೇಗಾರ್ ಲೋಕೇಶ್ ಹಾಗೂ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ವಿ.ಎಸ್.ಎಸ್ಸೆನ್ ಸಿ.ಇ.ಒ ನಾರಾಯಣ ಮೂರ್ತಿ,ಸುಬ್ಬರಾಯಪ್ಪ ಪುತ್ರ ಕೃಷ್ಣ ,ಕರವೇ ಅಧ್ಯಕ್ಷ ಲಕ್ಷ್ಮಿ ನಾರಾಯಣ ಮತ್ತು ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಅನ್ಯ ಪಕ್ಷಗಳಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ತಿಮ್ಮಾರೆಡ್ಡಿ, ಮುಖಂಡರಾದ ಎಸ್.ಕೆ.ರೆಡ್ಡಿ, ವಳ್ಳೂರು ಚೆನ್ನಕೇಶವ ರೆಡ್ಡಿ,ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ,ಸಾಯಿ ಸುಮನಾ ಹನುಮಂತರಾಯಪ್ಪ, ಅಂಜನ್ ನಾಯಕ, ರಾಜಶೇಖರಪ್ಪ,ಡಿಐಜಿ ಲಕ್ಷ್ಮಿ ನಾರಾಯಣಪ್ಪ,ಸೊಗಡು ವೆಂಕಟೇಶ್, ಟಿ.ಪಿ ನರಸಿಂಹ, ಗಿರಿರಾಜು,ರಾಜ ಗೋಪಾಲ್, ಎನ್.ಎ ಈರಣ್ಣ,ಸಣ್ಣರೆಡ್ಡಿ, ಗೋವಿಂದರಾಜು ,ಅಕ್ಲಪ್ಪ ನಾಯ್ಡು, ದೊಡ್ಡೇನಹಳ್ಳಿ ಶಿವಪ್ಪ,ಶಿವಪ್ಪ ನಾಯಕ,ನಿವೃತ್ತ ಜೈಲ್ ಸೂಪರ್ ಡೆಂಟ್ ತಿಮ್ಮಯ್ಯ, ಎಂ.ಕೆ ನಾರಾಯಣಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕಾ, ರಂಗಮ್ಮ, ಶಕುಂತಲಾ ಬಾಯಿ, ಮಂಜುನಾಥ ಚೌಧರಿ, ಭಾಸ್ಕರ್ ನಾಯಕ, ಸೇರಿದಂತೆ ಹಲವರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!