ಪಾವಗಡ :ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಶಸ್ತ್ರಸಜ್ಜಿತ ಅರಸೇನಾ ಮಿಲಿಟರಿ ಪಡೆಗಳಿಂದ ಪಥ ಸಂಚಲನವು ಶುಕ್ರವಾರ ನಡೆಯಿತು. ವಿಧಾನ ಸಭಾ ಚುನಾವಣೆಯಲ್ಲಿ ಮತದಾರರು ನಿರ್ಬಯವಾಗಿ ಮತ ಚಲಾವಣೆಗಾಗಿ ಶಾಂತಿಯುತ ವಾತಾವರಣ ನಿರ್ಮಿಸುವ ಸಲುವಾಗಿ ಅರಸೇನಾ ಮಿಲಿಟರಿ ಪಡೆಗಳಿಂದ ಪಟ್ಟಣದ ಪ್ರಮುಖ ರಸ್ತೆ ಹಾಗೂ ಶಾಂತಿನಗರ, ನಾಗರಕಟ್ಟೆ, ಕುಮಾರಸ್ವಾಮಿ ಬಡಾವಣೆ, ರಾಜ ಬೀದಿ, ದಳವಾಯಿ ಬೀದಿ ಆದರ್ಶ ನಗರ,ರೈನ್ ಗೇಜ್, ಬಡಾವಣೆಗಳಲ್ಲಿ ಶಸ್ತ್ರ ಸಜ್ಜಿತ ಪಥ ಸಂಚಲನ ನಡೆಸಲಾಯಿತು.
80 ಅರಸೇನಾ ಪಡೆ ಸಿಬ್ಬಂದಿ,30 ಪೊಲೀಸ್ ಸಿಬ್ಬಂದಿಯೊಂದಿಗೆ ಹಾಗೂ ಆಟೋದಲ್ಲಿ ಧ್ವನಿವರ್ಧಕ ಮೂಲಕ ತಪ್ಪದೆ ಮತದಾನ ಮಾಡಿ, ಶಾಂತಿಯುತ ಮತದಾನಕ್ಕೆ ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಾ ಪಾವಗಡ ಪೊಲೀಸ್ ವೃತ್ತ ನಿರೀಕ್ಷಕರಾದ ಅಜಯ್ ಸಾರಥಿ ನೇತೃತ್ವದಲ್ಲಿ ಪಥ ಸಂಚಲನ ನಡೆಸಲಾಯಿತು.
ಮುಖ್ತ ಮತದಾನಕ್ಕೆ ಅವಕಾಶ :ಸಿ ಐ. ಅಜಯ್ ಸಾರಥಿ
ಶಾಂತಿಯುತ ಹಾಗೂ ನ್ಯಾಯ ಸಮ್ಮತ, ನಿಷ್ಠ ಪಕ್ಷಪಾತ ಚುನಾವಣೆಗೆ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ, ಹಾಗಾಗಿ ನಾಗರಿಕರು ಯಾವುದೇ ಭಯವಿಲ್ಲದೆ ಹಾಗೂ ಆಮಿಷಗಳಿಗೆ ಒಳಗಾಗದೆ, ದೈರ್ಯದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಲು ವಾತಾವರಣ ಸೃಷ್ಟಿ ಮಾಡಲಾಗಿದೆ,ಹೀಗಾಗಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಮನವಿ ಮಾಡಿದರು. ಈ ದಿಸೆಯಲ್ಲಿ ಸಾರ್ವಜನಿಕರಲ್ಲಿ ಆತ್ಮ ಸ್ಟೈರ್ಯ ತುಂಬಲು ಇಂದು ಪಥ ಸಂಚಲನ ನಡೆಸಲಾಯಿತು ಎಂದು ಸಿ ಐ, ಅಜಯ್ ಸಾರಥಿ ತಿಳಿಸಿದರು.
ಯೋಧರಿಗೆ ಹೆಲ್ಪ್ ಸೊಸೈಟಿ, ಆಟೋ ಚಾಲಕರ ಸಂಘ, ಸಾರ್ವಜನಿಕರು ಹಾರ ಹಾಕಿ ಭವ್ಯ ಸ್ವಾಗತ
ಮೇ 10 ರಂದು ನಡೆಯುವ ವಿಧಾನ ಸಭೆ ಚುನಾವಣೆಯ ಕರ್ತವ್ಯಕ್ಕೆ ಆಗಮಿಸಿದ ಬಿ,ಎಸ್,ಎಫ್.ಯೋಧರನ್ನು ಹೆಲ್ಪ್ ಸೊಸೈಟಿ, ಆಟೋ ಚಾಲಕರ ಸಂಘ, ವಿದ್ವತ್ ಕಂಪ್ಯೂಟರ್ ವಿದ್ಯಾರ್ಥಿಗಳು, ನಾಗರಿಕರು ಪುಷ್ಪಾರ್ಚನೆ ಮಾಡಿ, ಹೂ ಮಾಲೆ ಹಾಕಿ, ಆರತಿ ಬೆಳಗಿ ಭವ್ಯವಾಗಿ ಸ್ವಾಗತಿಸಿ ದೇಶ ಭಕ್ತಿಯನ್ನು ಸಾರಿದರು.
ರಸ್ತೆಯುದ್ಧಗಳಕ್ಕೂ ಯೋಧರ ಜೊತೆ ಧ್ವಜಗಳನ್ನು ಹಿಡಿದು ಯೋಧರಿಗೆ ಜೈ ಖಾರ ಹಾಕುತ್ತ, ಅಲ್ಲಲ್ಲಿ ಮಜ್ಜಿಗೆ, ತಂಪು ಪಾನೀಯ ನೀಡಿ ಪಥ ಸಂಚಲನಕ್ಕೆ ಸಾಥ್ ನೀಡಿದರು.