ಕ್ಷೇತ್ರದ ಅಭಿವೃದ್ಧಿ ಮಾಡುವ ವ್ಯಕ್ತಿ ಬೇಕಾ..!  ಅಥವಾ ಯಾವುದೇ ಅಭಿವೃದ್ದಿ ಕೆಲಸ ಮಾಡದ ವ್ಯಕ್ತಿ ಬೇಕಾ: ಕೆ.ಎನ್. ರಾಜಣ್ಣ

ಮಧುಗಿರಿ/ದೊಡ್ಡೇರಿ  : ಕ್ಷೇತ್ರದ ಅಭಿವೃದ್ಧಿ ಮಾಡುವ ವ್ಯಕ್ತಿ ಬೇಕಾ..!  ಅಥವಾ ಯಾವುದೇ ಅಭಿವೃದ್ದಿ ಕೆಲಸ ಮಾಡದ ವ್ಯಕ್ತಿ ಬೇಕಾ ಎಂಬುದನ್ನು ಮತದಾರರೇ ತೀರ್ಮಾನಿಸಬೇಕು ಎಂದು ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್. ರಾಜಣ್ಣ ತಿಳಿಸಿದರು. 

ತಾಲೂಕಿನ ದೊಡ್ಡೇರಿ ಹೋಬಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನ ಅವಧಿಯಲ್ಲಿ  ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದೇನೆ.  

ಶಾಲೆಯಲ್ಲೇ ಎಲ್ಲಾ ಮಕ್ಕಳಿಗೂ ಜಾತಿ ಆದಾಯ ಪ್ರಮಾಣ ಪತ್ರ ಕೊಡಿಸಿದ್ದು, ನನ್ನ ಅವಧಿಯಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಮಾಡಿದ ತೃಪ್ತಿ ನನಗಿದ್ದು, ಪ್ರತಿಯೊಬ್ಬರಿಗೂ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಈ ಬಾರಿ ನನ್ನದು ಕೊನೆಯ ಚುನಾವಣೆಯಾಗಿದ್ದು,  ಮಧುಗಿರಿ ಜೆಲ್ಲೆಯನ್ನಾಗಿಸಲು,  ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು, ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ಹರಿಸಲು,  ಮಧುಗಿರಿ ಬೆಟ್ಟಕ್ಕೆ ರೋಪ್ ವೇ ಅಳವಡಿಸಲು  ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದ ಅವರು ನನ್ನ ಅವಧಿಯಲ್ಲಿ ತಾಲೂಕಿಗೆ 16500 ಮನೆ ಮಂಜೂರು ಮಾಡಿಸಿಕೊಟ್ಟಿದ್ದು,  ತಳ ಸಮುದಾಯಗಳ ಹಿತ ಕಾಯಲು ಬದ್ದವಾಗಿದ್ದೇನೆ. ನಿಮಗೆ ಮನೆ ತಂದು ಕೊಡುವ ಶಾಸಕರು ಬೇಕಾ…! ಅಥವಾ ಯಾವುದೇ ಅಭಿವೃದ್ದಿ ಮಾಡದ  ಶಾಸಕರು ಬೇಕಾ ಎಂದು ನೀವೇ ಯೋಚಿಸಿ ಎಂದು ಮನವಿ ಮಾಡಿದರು. 

ದೊಡ್ಡೇರಿ ಹೋಬಳಿಯ ಯಾವ ರೈಯರು ಬಗರ್ ಹುಕುಂ ಅಡಿಯಲ್ಲಿ ಜಮೀನು ಮಾಡಿಕೊಂಡಿದ್ದೀರೋ ಅವರ್ಯಾರೂ ಜಮೀನುಗಳನ್ನು ಬಿಡಬೇಡಿ.  ನನ್ನನ್ನು ಶಾಸಕನನ್ನಾಗಿ ಮಾಡಿ ಯಾರೂ ಸಹ ಪದೇ ಪದೇ ನಿಮ್ಮ ಜನೀನುಗಳಿಗೆ ಬಂದು ನಿಮಗೆ ತೋದರೆ ಕೊಡದ ರೀತಿಯಲ್ಲಿ ನಿಮ್ಮ ಹಿತ ಕಾಯುತ್ತೇನೆ. ಎಲ್ಲಾ ತೊದರೆಗಳನ್ನು ನಿವಾರಣೆ ಮಾಡಿ

ಎಎಂ ಕಾವಲ್ ನ ಎಲ್ಲಾ ರೈತರಿಗೂ ನ್ಯಾಯ ದೊರಕಿಸಿಕೊಡುತ್ತೇನೆ.  ಸಾಗುವಳಿ ಚೀಟಿ ಕೊಡದವರಿಗೂ ಖಾತೆ ಮಾಡಿಸಿಕೊಡುತ್ತೇನೆ. ಕ್ಷೇತ್ರದ ಜನತೆ ಅವರ ಅವಧಿಯ ಅಭಿವೃದ್ದಿ ಕಾಮಗಾರಿಗಳು ಮತ್ತು ನನ್ನ ಅವಧಿಯ ಅಭಿವೃದ್ದಿ ಕಾಮಗಾರಿಗಳನ್ನು ತುಲನೆ ಮಾಡಿ ಮತ ಚಲಾಯಿಸಿ ಎಂದು ಮನವಿ ಮಾಡಿದರು.

ಬೆಳಗ್ಗೆ 8 ಗಂಟೆಗೆ ಹನುಮಂತರಾಯನ ಪಾಳ್ಯದಿಂದ ಆರಂಭವಾಗಿ ಕೆ.ಟಿ. ಹಳ್ಳಿ,ಗೊದ್ದನಪಾಳ್ಯ, ಮುದ್ದಪ್ಪನ ಪಾಳ್ಯ, ಮಾದೇನಹಳ್ಳಿ, ಜವನಯ್ಯನಪಾಳ್ಯ, ಲಿಂಗಸಂದ್ರ, ಸಿಡದರಗಲ್ಲು, ಕನಪನಾಯಕನಪಾಳ್ಯ, ಬಡವನಹಳ್ಳಿ, ತಿಪ್ಪನಹಳ್ಳಿ, ಬಳೇಹಳ್ಳಿ, ಜಕ್ಕೇನಹಳ್ಳಿ, ಶಿವನಗೆರೆ, ಸಜ್ಜೇಹೊಸಹಳ್ಳಿ, ಕಿತ್ತಗಳಿಸಿಗರಾವುತನಹಳ್ಳಿ,  ಭಸ್ಮಂಗಿಕಾವಲ್, ಬಸವನಹಳ್ಳಿ ಮೂಲಕ ಸಾಗಿ ಕಾರ್ಪೇನಹಳ್ಳಿಯಲ್ಲಿ ಮುಕ್ತಾಯವಾಯಿತು.

ಜಿ ಪಂ ಮಾಜಿ ಸದಸ್ಯರಾದ ಚೌಡಪ್ಪ, ಚಿನ್ನಪ್ಪ,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ,  ಮುಖಂಡರಾದ ತುಂಗೋಟಿ ರಾಮಣ್ಣ,  ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾ ಇತರರಿದ್ದರು.

ಪೋಟೋ 24 ಎಂಡಿಜಿ  01 : ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಮಾದೇನಹಳ್ಳಿಯಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಕೆ ಎನ್ ರಾಜಣ್ಣ ಚುನಾವಣಾ ಪ್ರಚಾರ ನಡೆಸಿದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!