ತುಂಗೋಟಿ ರಾಮಣ್ಣನವರ ಆರೋಪಕ್ಕೆ ಯಾವುದೇ ತಿರುಳಿಲ್ಲ

ಮಧುಗಿರಿ : ವೀರಭದ್ರಯ್ಯ ಸರಳ ವ್ಯಕ್ತಿ ಎಂದು ಇಡೀ ತಾಲೂಕಿಗೆ ತಿಳಿದಿದೆ. ಅಂತವರು ದೇವೇಗೌಡರನ್ನು ಸೋಲಿಸಿದ್ದಾರೆ ಎಂದು ಹೇಳಿಕೆ ನೀಡಿರುವ ತುಂಗೋಟಿ ರಾಮಣ್ಣನವರ ಮಾತಿನಲ್ಲಿ ಹುರುಳಿಲ್ಲ ಎಂದು ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ಕುಂಚಿಟಿಗ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತುಂಗೋಟಿ ರಾಮಣ್ಣನವರು ಪಕ್ಷದಲ್ಲಿದಾಗ ಮಾತನಾಡದವರು 4 ವರ್ಷಗಳ ನಂತರ ಈಗ ಪಕ್ಷ ಬಿಟ್ಟ ನಂತರ ಮಾತನಾಡುವುದು ಯಾವ ನ್ಯಾಯ. ಅವರ ಹೇಳಿಕೆಯನ್ನು ವಾಪಾಸ್ಸು ತೆಗೆದುಕೊಳ್ಳಬೇಕು ಎಂದರು.

ಜಿಡಿಎಸ್ ತಾಲೂಕು ಅಧ್ಯಕ್ಷ ಬಸವರಾಜು ಮಾತನಾಡಿ ತುಂಗೋಟಿ ರಾಮಣ್ಣನವರ ಆರೋಪಕ್ಕೆ ಯಾವುದೇ ತಿರುಳಿಲ್ಲ. ಅವರ ಬಗ್ಗೆ ಗೌರವವಿತ್ತು. ಆದರೆ ಅವರು ಸ್ವಾರ್ಥ ರಾಜಕಾರಣಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅವರು ದೇವೇಗೌಡರ ಪರ ಯಾವ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಇವರು ಸಿದ್ದಾಪುರ ಕೆರೆಯಲ್ಲಿ ಪೆಟ್ರೋಲ್ ಬಂಕ್ ಸ್ಥಾಪಿಸಲು ಎನ್.ಓ.ಸಿ ಸಿಗದೇ ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ಅವರ ನೆರವಿಗೆ ದಾವಿಸಿದ್ದು ಶಾಸಕರು. ನರೇಗಾದಲ್ಲಿ ಬೋಗಸ್ ಬಿಲ್ ಎತ್ತಿದ ಮಹಾನುಭಾವ ರಾಮಣ್ಣ. ಇವರ 4 ಅಂತಸ್ಥಿನ ಶಾಲಾ ಕಟ್ಟಡ ಅಕ್ರಮವಾಗಿ ಕಟ್ಟಿದ್ದು, ಸಾಲಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಪಲಾಯನ ಮಾಡಿದ್ದಾರೆ ಎಂದು ಆರೋಪಿಸಿದರು.

ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ ಎನ್ ರಾಜಶೇಖರ್, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಉಮೇಶ್, ನಿರ್ದೇಶಕರುಗಳಾದ ಮೋಹನ್, ಎಂ.ಎಲ್. ಗಂಗರಾಜು ಮುಖಂಡರುಗಳಾದ ಬಿ.ಎಸ್ ಶ್ರೀನಿವಾಸ್, ಪುರಸಭಾಧ್ಯಕ್ಷ ತಿಮ್ಮರಾಜು, ವೆಂಕಟಾಪುರ ಗೋವಿಂದರಾಜು, ಮುಖಂಡರುಗಳಾದ ದೊಡ್ಡಯ್ಯ, ಮೂಡಪ್ಪ, ಲಕ್ಷ್ಮಿ ನರಸಪ್ಪ, ಶ್ರೀನಿವಾಸ್, ಚೌಡಪ್ಪ ಮತ್ತಿತರರು ಹಾಜರಿದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!