ಅಂಬೇಡ್ಕರ್ ವಿರೋಧಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ದಲಿತರು ಧಿಕ್ಕರಿಸಿ ಜೆಡಿಎಸ್ ಬೆಂಬಲಿಸಲಿದ್ದಾರೆ : ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಬಸವರಾಜು

ಗುಬ್ಬಿ: ಸಂವಿಧಾನ ತಿದ್ದುವ ಬಿಜೆಪಿ, ದಲಿತರನ್ನು ಓಟ್ ಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡುವ ಕಾಂಗ್ರೆಸ್ ಎರಡೂ ಪಕ್ಷವನ್ನು ಧಿಕ್ಕರಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲಿಸಲು ದಲಿತರು ನಿರ್ಧರಿಸಿದ್ದಾರೆ ಎಂದು ಜೆಡಿಎಸ್ ಎಸ್ಸಿ ಘಟಕದ ಬಸವರಾಜು ತಿಳಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ದಲಿತರನ್ನು ಮುಖ್ಯವಾಹಿನಿಗೆ ತಂದು ಸಾಮಾಜಿಕ ನ್ಯಾಯ ಕಾಪಾಡುವ ಕೆಲಸ ಪ್ರಾದೇಶಿಕ ಪಕ್ಷ ಮಾಡಲಿದೆ. ಕುಮಾರಣ್ಣ ಅವರಿಗೆ ಮಾತ್ರ ದಲಿತರ ಕಷ್ಟ ಕಾರ್ಪಣ್ಯ ತಿಳಿದಿದೆ ಎಂದರು.

ದಲಿತ ಮುಖಂಡ ಮಡೇನಹಳ್ಳಿ ದೊಡ್ಡಯ್ಯ ಮಾತನಾಡಿ ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಮುಗಿಸಿದ ಕಾಂಗ್ರೆಸ್ ಪಕ್ಷ ದಲಿತರ ಮತವನ್ನು ಕೇವಲ ಓಟ್ ಬ್ಯಾಂಕ್ ಮಾಡಿಕೊಂಡಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಳಸಿ ನಂತರ ಅವರನ್ನು ಕೇವಲವಾಗಿ ಕಾಣುತ್ತಾರೆ. ಇನ್ನೂ ಬಿಜೆಪಿ ಚುನಾವಣೆಯ ಸಮಯದಲ್ಲಿ ಮಾತ್ರ ಮೀಸಲಾತಿ ನೀಡುವ ನಾಟಕವಾಡಿದೆ. ಇದು ಮೂಗಿಗೆ ತುಪ್ಪ ಸವರುವ ತಂತ್ರ ಅಷ್ಟೇ. ಇದೆಲ್ಲದಕ್ಕೂ ಉತ್ತರ ಜೆಡಿಎಸ್ ನೀಡಲಿದೆ. ನಮ್ಮ ದಲಿತರು ಬುದ್ದಿವಂತರು ಆಲೋಚಿಸಿ ಮತ ನೀಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಆಟೋ ಮಂಜಣ್ಣ, ಲಕ್ಷಣ, ಅಮ್ಮನಘಟ್ಟ ಶಿವಣ್ಣ, ದೊಡ್ಡಯ್ಯ, ರಾಜಣ್ಣ, ಲಾವಣ್ಯ, ಸದಾಶಿವ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!