ಗುಬ್ಬಿ: ತಾಲ್ಲೂಕಿನ 28 ಸಾವಿರಕ್ಕೂ ಅಧಿಕ ಕುಂಚಿಟಿಗ ಮತದಾರರು ಪ್ರತಿ ಬಾರಿ ಶ್ರೀನಿವಾಸ್ ಪರ ನಿಲ್ಲುತ್ತಿದೆ. ಅದೇ ರೀತಿ ಈ ಬಾರಿ ಕೂಡಾ ಶೇಕಡಾ 90 ರಷ್ಟು ಮತಗಳು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಅವರಿಗೆ ಬೀಳಲಿದೆ ಎಂದು ಕುಂಚಿಟಿಗ ಸಮಾಜದ ಮುಖಂಡರು ಸುದ್ದಿಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಮುಖಂಡ ತಿಮ್ಲಿಪಾಳ್ಯ ಶಶಿ, ನಮ್ಮ ಸಮುದಾಯ ಮೊದಲಿನಿಂದ ವಾಸಣ್ಣ ಅವರನ್ನು ಬೆಂಬಲಿಸಿದೆ. ಅದೇ ರೀತಿ ಈ ಬಾರಿ ಕೂಡ ನಡೆಯಲಿದೆ. ಎಂದರು.
ಕುಂಚಿಟಿಗ ಸಮಾಜದ ಎಮ್ಮೆದೊಡ್ಡಿ ಜಯಣ್ಣ ಮಾತನಾಡಿ ಒಕ್ಕಲಿಗ ಸಮುದಾಯದ ಒಬ್ಬರು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ಹಂಚಿ ಹೋಗುತ್ತದೆ. ಜೆಡಿಎಸ್ ಪರ ತೊಂಬತ್ತರಷ್ಟು ಬೆಂಬಲ ಇದೆ ಎಂದು ಶಿವಲಿಂಗಯ್ಯ ಅವರ ಹೇಳಿಕೆ ಸತ್ಯಕ್ಕೆ ದೂರ. ನಮ್ಮ ಕುಂಚಿಟಿಗ ಸಮಾಜ ಶ್ರೀನಿವಾಸ್ ಪರ ನಿಲ್ಲಲಿದೆ ಎಂದರು.
ಎಪಿಎಂಸಿ ಮಾಜಿ ಸದಸ್ಯ ಲೋಕೇಶ್ವರ್ ಮಾತನಾಡಿ ಪ್ರತಿ ಬಾರಿ ಒಕ್ಕಲಿಗ ಅಭ್ಯರ್ಥಿಗಳನ್ನು ಸೃಷ್ಟಿಸಿ ವಾಸಣ್ಣ ಅವರನ್ನು ಸೋಲಿಸುವ ಪ್ರಯತ್ನ ನಡೆದಿದೆ. ಆದರೆ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ ಶ್ರೀನಿವಾಸ್ ಅವರನ್ನು ಸೋಲಿಸಲು ಕುಂಚಿಟಿಗ ಸಮಾಜ ದೂರವಿದೆ ಎಂಬ ಅಪಪ್ರಚಾರ ನಡೆದಿದೆ. ಅದೆಲ್ಲಾ ಸುಳ್ಳು ಎಂದು ಬಿಂಬಿಸಿದ ಸಮಾಜದ ಮುಖಂಡರು ಒಗ್ಗೂಡಿ ಹೇಳಿಕೆ ನೀಡಿ ಕಾಂಗ್ರೆಸ್ ಗೆಲ್ಲಿಸುವ ಬಗ್ಗೆ ತಿಳಿಸಿದ್ದಾರೆ ಎಂದರು.
ಹಂಡನಹಳ್ಳಿ ನಾಗರಾಜು, ಕಲ್ಲೇನಹಳ್ಳಿ ರೇವಣ್ಣ, ನೆರಲೇಕೆರೆ ಶಿವಾನಂದ್, ಅಂಕಸಂದ್ರ ಕೆ.ಆರ್.ಗೌಡ, ಜಿ.ಎಲ್.ಗೌಡ ಇತರರು ಇದ್ದರು.