ಗುಬ್ಬಿ: ಶಾಸಕ ಶ್ರೀನಿವಾಸ್ ಅವರು ದಲಿತರನ್ನು ತಮ್ಮ ಜೊತೆ ಕರೆದುಕೊಂಡು ಸಾಗಿದ್ದಾರೆ. ರಾಜಕೀಯ ಶಕ್ತಿ ನೀಡಿ ಅಭಿವೃದ್ದಿ ಕೆಲಸಗಳನ್ನು ಮಾಡಿಕೊಟ್ಟು ಯಾವುದೇ ಜಾತಿ ಜನಾಂಗ ಬೇದವಿಲ್ಲದೆ ನಡೆಯುವ ಅವರ ಸರಳ ವ್ಯಕ್ತಿತ್ವಕ್ಕೆ ನಮ್ಮ ಛಲವಾದಿ ಸಮುದಾಯ ವಾಸಣ್ಣ ಪರ ನಿಲ್ಲಲಿದೆ ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖಂಡ ಈರಣ್ಣ ಮಾತನಾಡಿ ಗುಬ್ಬಿ ಕ್ಷೇತ್ರದಲ್ಲಿ 13 ಸಾವಿರಕ್ಕೂ ಅಧಿಕ ಮತವಿರುವ ಛಲವಾದಿ ಜನಾಂಗ ಶೇಕಡಾ 95 ರಷ್ಟು ಕಾಂಗ್ರೆಸ್ ಪರ ನಿಲ್ಲಲಿದೆ ಎಂದರು.
ತಾಪಂ ಮಾಜಿ ಸದಸ್ಯ ಕರೇತಿಮ್ಮಯ್ಯ ಮಾತನಾಡಿ ವಾಸಣ್ಣ ಸರ್ವ ಜನಾಂಗಕ್ಕೂ ಬೇಕಾದವರು. ಯಾರೇ ಅವರನ್ನು ಹುಡುಕಿ ಹೋದರು. ಅವರ ಕೆಲಸ ಮಾಡುತ್ತಾರೆ. ಸಮಸ್ಯೆಗಳನ್ನು ಬಗೆಹರಿಸಿ ನೂರಾರು ಕುಟುಂಬಕ್ಕೆ ಬೆಳಕು ನೀಡಿದ್ದಾರೆ. ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ ಮನೆಯಲ್ಲೇ ಕುಳಿತು ರಾಜಿ ಸಂಧಾನ ಮಾಡುತ್ತಾರೆ. ಎಂದೂ ಜಾತಿ ಜಾತಿಗೆ ಕಂದಕ ಸೃಷ್ಟಿಸಿಲ್ಲ. ಎಲ್ಲಾ ದಲಿತ ಕಾಲೋನಿಗೆ ಕೆಲಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರ ಪರ ನಿಲ್ಲುವುದು ಛಲವಾದಿ ಸಮುದಾಯದ ನಿಲುವು ಎಂದರು.
ಮುಖಂಡರಾದ ನಾಗರಾಜು, ರಮೇಶ್ ಸಾತೇನಹಳ್ಳಿ, ಜಗದೀಶ್ ಗುಬ್ಬಿ, ಮಂಜುನಾಥ್, ವೆಂಕಟೇಶ್, ಶ್ರೀನಿವಾಎಸ್, ಮುನಿರಾಜ್, ಮಧು, ಚಿಕ್ಕಣ್ಣ, ನರಸಿಂಹಮೂರ್ತಿ ಇತರರು ಇದ್ದರು.