ಕೆ.ಎನ್ ರಾಜಣ್ಣ ಸಚಿವರಾದರೆ ನಾನು ಕಾಲಿಗೆ ಚಪ್ಪಲಿ ಹಾಕಿಕೊಳ್ಳುವೆ: ಗ್ರಾ.ಪಂ ಸದಸ್ಯ ವೀರಸಿಂಹ

ಮಧುಗಿರಿ : ಜಿಲ್ಲೆಯಲ್ಲಿ ಎಲ್ಲಾ ಸಮುದಾಯದಗಳ ಬಡವರ ಜನಪರವಾಗಿರುವ ಶಾಸಕ ಕೆ.ಎನ್ ರಾಜಣ್ಣ ನವರು ಈ ಬಾರಿ ಸಚಿವರಾದರೆ ನಾನು ಕಾಲಿಗೆ ಚಪ್ಪಲಿ ಹಾಕಿಕೊಳ್ಳುತ್ತೇನೆ ಎಂದು ಗ್ರಾ.ಪಂ ಸದಸ್ಯ ವೀರಸಿಂಹ ತಿಳಿಸಿದ್ದಾರೆ.

ಈ ಹಿಂದೆ ದೊಡ್ಡೇರಿ ಹೋಬಳಿಯ ಬುಳ್ಳಾಸಂದ್ರ ಗ್ರಾಮವು ಬೆಳ್ಳಾವಿ ಕ್ಷೇತ್ರಕ್ಕೆ ಸೇರಿತ್ತು ಅಂದೂ ಆ ಕ್ಷೇತ್ರದ ಶಾಸಕರಾಗಿ ಕೆ.ಎನ್ ರಾಜಣ್ಣನವರು ಆಯ್ಕೆಯಾಗಿದ್ದರು ಅಂದಿನ ದಿನಗಳಲ್ಲಿಯೇ ನಾನು ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡಿದ್ದೆ ಅವರು ಆ ದಿನಗಳಲ್ಲಿಯೇ ಇಡೀ ಬೆಳ್ಳಾವಿಯನ್ನು ಸಮಗ್ರ ಅಭಿವೃದ್ಧಿ ಪಡಿಸಿದ್ದರು ಕ್ಷೇತ್ರದಲ್ಲಿ ಬಿಳಿ ಪಟ್ಟಿಯಿಂದ ಕೂಡಿದ ಉತ್ತಮ ರಸ್ತೆಗಳು , ಕೆರೆ ಕಟ್ಟೆಗಳ ಅಭಿವೃದ್ಧಿ ಹಾಗೂ ಹೆಚ್ಚು ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದ್ದರು.

ಜಿಲ್ಲೆಯ ಬಡವರ ಪರವಾಗಿರುವ ಅವರು ಸಚಿವರಾಗ ಬೇಕೆನ್ನುವ ಉದ್ದೇಶವನ್ನು ಹೊಂದಿದ್ದೇನೆ ಅವರು ಸಚಿವರಾದರೆ ಇಡೀ ಜಿಲ್ಲೆ ಸೇರಿದಂತೆ ರಾಜ್ಯವೇ ಸಿದ್ದರಾಮಯ್ಯನವರ ಜತೆಯಲ್ಲಿ ಅಭಿವೃದ್ಧಿ ಯಾಗುವುದರಲ್ಲಿ ಯಾವುದೇ ಸಂಶಯಗಳಿಲ್ಲ

ನಾನು ನಮ್ಮ ಮನೆಯ ದೇವರ ಅಂದೂ ಹೆಸರಿನಲ್ಲಿ ಪ್ರಮಾಣ ಮಾಡಿದ್ದು
ಸುಮಾರು 15 ವರ್ಷಗಳಿಂದ ಇದೂವರೆವಿಗೂ ಕಾಲಿಗೆ ಚಪ್ಪಲಿ ತೊಟ್ಟಿಲ್ಲ ಇತ್ತೀಚಿನ ಚುನಾವಣಾ ಫಲಿತಾಂಶದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದಿಂದ 136 ಶಾಸಕರು ಆಯ್ಕೆಯಾಗಿದ್ದಾರೆ, ಸಿದ್ದರಾಮಯ್ಯನವರು ಮಧುಗಿರಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದಾಗ ಬಹಿರಂಗವಾಗಿ ಸಾವಿರಾರು ಜನರ ಮುಂದೆ ರಾಜಣ್ಣನವರನ್ನು ಗೆಲ್ಲಿಸಿ ಕೊಡಿ ನಾನು ಅವರನ್ನು ಸಚಿವರನ್ನಾಗಿ ಮಾಡಿಯೇ ಮಾಡುತ್ತೆನೆಂದು ಹೇಳಿಕೆ ನೀಡಿದ್ದರು. ಈಗ ಕಾಲ ಕೂಡಿ ಬಂದಿದ್ದು ಕ್ಷೇತ್ರದ ಮತದಾರರು 35 ಸಾವಿರಕ್ಕೂ ಹೆಚ್ಚು ಬಹುಮತಗಳನ್ನು ನೀಡಿ ಶಾಸಕರನ್ನಾಗಿಸಿದ್ದಾರೆ.
ನನ್ನ 15 ವರ್ಷಗಳ ವನವಾಸವು ಮುಕ್ತಾಯವಾಗುತ್ತೆಂದು ಈಬಾರಿಯು ಅವರು ಸಚಿವರಾಗಲಿಲ್ಲವೆಂದರೆ ನಾನು ನನ್ನ ಶಫಥವನ್ನು ಮುಂದುವರೆಸುತ್ತೆನೆಂದು ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!