ಪಾವಗಡ: ತಾಲೂಕು ಬಳ್ಳಿ ಬಟ್ಟಲು ಗ್ರಾಮದ ರಾಜ್ಯ ಹೆದ್ದಾರಿ ರಸ್ತೆ ಬದಿ ತುಮಕೂರು ಮತ್ತು ಚಿತ್ರದುರ್ಗ ಮಾರ್ಗದ ಖಾಸಗಿ ಟ್ರಾವೆಲ್ಸ್ ಗೆ ಸಂಬಂಧಪಟ್ಟಂತ ಬಸ್ಸೊಂದು ಅಪಘಾತಕ್ಕೆ ಸಿಲುಕಿದೆ. ಮಂಗಳವಾರ ಬೆಳಿಗ್ಗೆ 10 ಗಂಟೆಯ ಸಮಯಕ್ಕೆ ಸರಿಯಾಗಿ ಬಸ್ ಅಪಘಾತಕ್ಕೆ ಅಪಘಾತವಾಗಿದೆ.
ಈ ಒಂದು ಬಸ್ಸಿನಲ್ಲಿ ಪ್ರಾಯಾಣಿಸುತ್ತಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳು ಹೊರತುಪಡಿಸಿ ಯಾವುದೇ ರೀತಿಯಾದಂತಹ ಬಾರಿ ಅಪಾಯ ಸಂಭವಿಸಿಲ್ಲ
ಬಸ್ ನ ಮುಂಭಾಗದ ಟೈರ್ ಪಂಚರ್ ಆಗಿದ್ದು. ಚಾಲಕರಿಗೆ ಬಸ್ ನಿಯಂತ್ರಣವು ಸಿಗದೇ ಆಯತಪ್ಪಿ ಬಸ್ ರಸ್ತೆ ಬದಿಯ ಹಳ್ಳಕ್ಕೆ ಇಳಿದಿದ್ದು ಬಸ್ ಮುಂಭಾಗದ ಭಾಗಗಳು ಪುಡಿಪುಡಿಯಾಗಿ ಹಾಳಾಗಿವೆ, ಒಂದು ಘಟನೆ ಅರಸೀಕೆರೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಜರುಗಿದೆ.