ಕೆ.ಎನ್.ರಾಜಣ್ಣ ಬುದ್ದ,ಬಸವ,ಅಂಬೇಡ್ಕರ್ , ಶ್ರೀವಾಲ್ಮೀಕಿ ಮಹರ್ಷಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಅಭಿಮಾನಿಗಳಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ

ತುಮಕೂರು:ಸಹಕಾರಿ ಧುರೀಣ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಹಿನ್ನೇಲೆಯಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು, ಕರ್ನಾಟಕ ವಾಲ್ಮೀಕಿ ಸೇನೆಯ ರಾಜ್ಯಾಧ್ಯಕ್ಷ ಕುಪ್ಪೂರು ಶ್ರೀಧರನಾಯಕ ಅವರ ನೇತೃತ್ವದಲ್ಲಿ ಟೌನ್‌ಹಾಲ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು.

ಈ ವೇಳೆ ಮಾತನಾಡಿದ ಅವರು,ನಮ್ಮ ನಾಯಕರಾದ ಕೆ.ಎನ್.ರಾಜಣ್ಣ ಅವರು ಬುದ್ದ,ಬಸವ,ಅಂಬೇಡ್ಕರ್ ಅವರ ಹೆಸರಿನ ಜೊತೆಗೆ,ಶ್ರೀವಾಲ್ಮೀಕಿ ಮಹರ್ಷಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ನಮಗೆ ಎಲ್ಲಿಲ್ಲದ ಸಂತೋಷವನ್ನು ಉಂಟು ಮಾಡಿದೆ.ಇಡೀ ದೇಶದಲ್ಲಿ ಆದಿ ಕವಿ ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಏಕೈಕ ಶಾಸಕರು ನಮ್ಮ ಕೆ.ಎನ್.ರಾಜಣ್ಣ.ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರಕ್ಕೆ ಬಂದಂತಹ ಸಂದರ್ಭದಲ್ಲಿ ಈ ಬಾರಿ ಕೆ.ಎನ್.ರಾಜಣ್ಣ ಅವರನ್ನು ಗೆಲ್ಲಿಸಿ ಕಳುಹಿಸಿ,ನಾನು ಮಂತ್ರಿ ಮಾಡುತ್ತೇನೆ ಎಂಬ ಭರವಸೆ ನೀಡಿದ್ದರು, ಅವರ ಕೊಟ್ಟ ಮಾತಿನಂತೆ ನಮ್ಮ ನಾಯಕರನ್ನು ಮಂತ್ರಿ ಮಾಡಿದ್ದಾರೆ.ಆ ಮೂಲಕ ವಾಲ್ಮೀಕಿ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ನೀಡಿದ್ದಾರೆ.ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಎಲ್ಲರಿಗೂ ವಾಲ್ಮೀಕಿ ಸಮುದಾಯ ಅಭಿನಂದನೆ ತಿಳಿಸುತ್ತದೆ.ಕೆ.ಎನ್.ರಾಜಣ್ಣ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆದು ವಾಲ್ಮೀಕಿ ಸಮುದಾಯಕ್ಕೆ ಕೀರ್ತಿ ತರಲೆಂಬುದು ನಮ್ಮಗಳ ಹಾರೈಕೆಯಾಗಿದೆ ಎಂದರು.

ಈ ವೇಳೆ ಕರ್ನಾಟಕ ವಾಲ್ಮೀಕಿ ಸೇನೆಯ ರಾಜ್ಯಾಧ್ಯಕ್ಷ ಕುಪ್ಪೂರು ಶ್ರೀಧರನಾಯಕ್, ಮಾರಣ್ಣ ಪಾಳ್ಳೇಗಾರ್,ಧನುಷ್ ಮದಕರಿ,ರಾಕೇಶ್,ಸೋಲಾರ್ ರಾಜಣ್ಣ, ಗೋಪಾಲ್, ಶಂಕರಪ್ಪ, ಹರೀಶ್ ದೇವಲಾಪುರ, ರಂಜನ್‌ಕುಮಾರ್, ರಂಗನಾಥ್, ಬಂಡೆಕುಮಾರ್, ರಾಮಯ್ಯ, ಮರಳೂರು ನಾಗರಾಜು, ಇನ್ನಿತರರು ಪಾಲ್ಗೊಂಡಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!