ಸಂಡೆ ಫಾರ್ ಸೋಶಿಯಲ್ ವರ್ಕ್ ರಿಂದ ಶಾಲಾ ಆವರಣ ಸ್ವಚ್ಛಗೊಳಿಸುವ ಅಭಿಯಾನ

ರಾಯಚೂರು: ಮಸ್ಕಿ ಪಟ್ಟಣದ ಅಭಿನಂದನ್ ಸಂಸ್ಥೆಯು ಆರಂಭಿಸಿದ “ಸಂಡೆ ಫಾರ್ ಸೋಶಿಯಲ್ ವರ್ಕ್” ಅಭಿಯಾನದಲ್ಲಿ ಈ ವಾರ ಮಸ್ಕಿ ನಗರದ ಬಾಲಕಿಯರ ಸರಕಾರಿ ಪ್ರೌಢ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಸಸಿಗಳನ್ನು ನಡೆಲಾಯಿತು. ಸೋಮವಾರ ನಡೆಯುವ SSLC ಪರೀಕ್ಷೆಯ ದಿನದಂದು ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ನಿರ್ಮಿಸುವುದು

ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಶಿಕ್ಷಕರಾದ ಪಂಪಾಪತಿ ಹೂಗಾರ ಅವರು ಕೊರೊನಾದ 2ನೇ ಅಲೆಯ ನಂತರ ನಡೆಯುತ್ತಿರುವ SSLC ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಯಾವುದೇ ಆತಂಕ ಇಲ್ಲದೇ ಉತ್ತಮ ವಾತಾವರಣದಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆಯಲು ಅವಕಾಶ ಕಲ್ಪಿಸುವ ಕಾರ್ಯವನ್ನು ಅಭಿನಂದನ್ ಸಂಸ್ಥೆಯು ಮಾಡುತ್ತಿರುವುದು ಒಂದು ಪ್ರಶಂಸೆಗೂ ಮೀರಿದ ಸೇವೆಯಾಗಿದೆ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದು ಯಶಸ್ವಿ ಮತ್ತು ಚೈತನ್ಯಪೂರ್ಣ ಸಂಸ್ಥೆಗಳ ಕೊರತೆಯನ್ನು ಈ ಸಂಸ್ಥೆಯು ನೀಗಿಸಿದೆ ಹಾಗೂ ಈ ಸಂಸ್ಥೆಯ ಕಾರ್ಯಗಳು ಹೀಗೆ ಮುಂದುವರೆಯಲಿ

ಈ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನ ಭಾರತದಾದ್ಯಂತ ವ್ಯಾಪಕವಾಗಿ ಹರಡಲಿ ಎಂದು ಹರಸಿದರು. ಸಾಮಾಜಿಕ ಚಟುವಟಿಕೆಗಳ ಮಾಡುವುದರ ಮುಖಾಂತರ ಈ ಕಾರ್ಯಕ್ಕೆ ಮುಂದಾದ ಶಿಕ್ಷಣ ಸಂಸ್ಥೆ ಹುಟ್ಟುಹಬ್ಬದ ಯಾರು ಶಿಕ್ಷಕರು ಮೆಚ್ಚುಗೆ ಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಬಸ್ಸಪ್ಪ ತನಿಖೇದಾರ್,ಶಿಕ್ಷಕರಾದ ಕಳಕಪಪ್ಪ ಹಾದಿಮನಿ, ಮಹಾಂತೇಶ ಹಡಪದ್ , ಮಹಮ್ಮದ್ ಗವಾನ್, ಅನ್ವರ್ ಹುಸೇನ್, ಮಹೇಶ್,ಬಂದಲಿಸಾಬ್ ಹಾಗೂ ಕಂದಾಯ ಅಧಿಕಾರಿಗಳಾದ ಶಿವರಾಜ್, ಸಂಸ್ಥೆಯ ಅಭಿನಂದನ್ ಸಂಸ್ಥೆಯ ಕಾರ್ಯದರ್ಶಿಗಳಾದ ರಾಮಣ್ಣ ಹಂಪರಗುಂದಿ, ಸಂಸ್ಥೆಯ ಸದಸ್ಯರಾದ ಮಲ್ಲಿಕಾರ್ಜುನ ಬಡಿಗೇರ್, ಬಸವರಾಜ ರಂಗಾಪೂರ, ಮಲ್ಲಿಕಾರ್ಜುನ ಕುರಿ, ಹನುಮಂತ, ಅಮೀತ್ ಕುಮಾರ್ ಪುಟ್ಟಿ, ಕಾರ್ತಿಕ್ ಜೋಗೀನ್, ಕಿಶೋರ್ ಹಾಗೂ ಇತರರು ಇನ್ನಿತರ ಉಪಸ್ಥಿತರಿದ್ದರು.

ವರದಿ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ✍️

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!