BREAKING NEWS: RTI ಕಾರ್ಯಕರ್ತನ ಕೊಲೆ: ಶಾಸಕರ ಆಪ್ತ ಅರೆಸ್ಟ್, ಪುತ್ರ ಎಸ್ಕೆಪ್

ಬಳ್ಳಾರಿ: ಆರ್.ಟಿ.ಐ. ಕಾರ್ಯಕರ್ತ ಟಿ. ಶ್ರೀಧರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರ ಆಪ್ತ ಹಾಲೇಶನನ್ನು ಪೊಲೀಸರು ಬಂಧಿಸಿದ್ದಾರೆ. ಹಾಲೇಶನನ್ನು ಬಂಧಿಸುತ್ತಿದ್ದಂತೆ ಶಾಸಕರ ಪುತ್ರ ಭರತ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ.

ಜುಲೈ 15 ರಂದು ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಆರ್.ಟಿ.ಐ. ಕಾರ್ಯಕರ್ತ ಟಿ. ಶ್ರೀಧರ್(38) ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಕೆ. ಹಾಲೇಶ್ ನನ್ನು ನಿನ್ನೆ ಪೊಲೀಸರು ವಶಕ್ಕೆ ಪಡೆದಿದ್ದರು.

ಹಾಲೇಶ್ ಮತ್ತು ಪಿ.ಟಿ. ಭರತ್ ನಾಯ್ಕ ಅವರ ವಿರುದ್ಧ ಶ್ರೀಧರ್ ಪತ್ನಿ ಜೀವ ಬೆದರಿಕೆ ಇದೆ ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಹಾಲೇಶನ ಬಂಧಿಸಿದ್ದು, ಆತನ ಬಂಧನವಾಗುತ್ತಿದ್ದಂತೆ ಪೋನ್ ಸ್ವಿಚ್ ಆಫ್ ಮಾಡಿ ಭರತ್ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.

You May Also Like

error: Content is protected !!