ಭಾರತಕ್ಕೆ ಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್ ಗಳ ಜಯ

ಕೊಲಂಬೋ: ಭಾರತ-ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಎದುರಾಳಿ ತಂಡದ ವಿರುದ್ಧ 7 ವಿಕೆಟ್ ಗಳ ಜಯಗಳಿಸಿದೆ.

ಆರಂಭಿಕರಾದ ಪೃಥ್ವಿ ಶಾ (43) ಮತ್ತು ಶಿಖರ್ ಧವನ್ (ಅಜೇಯ 86) ಇವರುಗಳ ಬಿರುಸಿನ ಆಟದ ಬಲದಿಂದ ಟೀಮ್ ಇಂಡಿಯಾ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಏಳು ವಿಕೆಟ್ ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0ಯಿಂದ ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್ ಗಳಲ್ಲಿ 9 ವಿಕೆಟ್ ಗೆ 262 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 36.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 263 ರನ್ ಸೇರಿಸಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಶಿಖರ್ ಧನವ್ ಮೊದಲ ಬಾರಿ ನಾಯಕನಾಗಿ ಭಾರತ ಕ್ರಿಕೆಟ್ ತಂಡದ ನೇತೃತ್ವ ವಹಿಸಿದ್ದರು.

ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಚೊಚ್ಚಲ ಅರ್ಧ ಶತಕದ ಮೂಲಕ ತಮ್ಮ 23 ನೇ ಜನ್ಮದಿನವನ್ನು ಆಚರಿಸಿದರು. ಲಂಕಾದ ಅನನುಭವಿ ಆಟಗಾರರು ವೇಗವಾಗಿ ವಿಕೆಟ್ ಒಪ್ಪಿಸುತ್ತಿದ್ದರಾದರೂ 262 ರನ್ ಗಳನ್ನು ಗಳಿಸಿದರು. ಆದರೆ ಭಾರತದ ಬಲಿಷ್ಠ ಬ್ಯಾಟಿಂಗ್ ಗೆ ಇದು ಸಾಧಾರಣ ಸವಾಲಾಗಿತ್ತು.

You May Also Like

error: Content is protected !!