ಕೆಆರ್‌ಎಸ್‌ ಡ್ಯಾಂ ಬಳಿ ಕಲ್ಲು ಕುಸಿತದಿಂದ ಜನರಲ್ಲಿ ಆತಂಕ

ಮಂಡ್ಯ : ಕೆಆರ್‌ಎಸ್‌ ಡ್ಯಾಂನಲ್ಲಿ ಕಲ್ಲುಗಳು ಕುಸಿಯುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಜನರಲ್ಲಿ ಆತಂಕ ಮನೆ ಮಾಡಿದೆ.

ಮಂಡ್ಯ ಸಂಸದೆ ಸುಮಲತಾ ಕೆಆರ್‌ಎಸ್‌ ಡ್ಯಾಂನಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಲ್ಲದೇ ಅಕ್ರಮ ಗಣಿಗಾರಿಕೆಯಿಂದಲೇ ಡ್ಯಾಂ ಗೆ ಅಪಾಯವಿದೆ ಅಂತಾನೂ ಆರೋಪ ಮಾಡಿದ್ದರು. ಆದ್ರೀಗ ಗಾರ್ಡನ್ ನಿಂದ ಕೆಆರ್ ಎಸ್ ಜಲಾಶಯದ ಮೇಲೆ ಹೋಗುವ ರಸ್ತೆಯಲ್ಲಿ ಕಲ್ಲು ಕುಸಿತವಾಗಿದ್ದು, ಡ್ಯಾಂನ ಕಲ್ಲುಗಳು ಕುಸಿತವಾಗಿರವುದು ಸುಮಲತಾ ಹೇಳಿಕೆ ಪುಷ್ಟಿ ನೀಡುವಂತಿದೆ.

ಸುಮಾರು 90 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಡ್ಯಾಂನಲ್ಲಿ ಇದೇ ಮೊದಲ ಬಾರಿಗೆ ಕಲ್ಲುಗಳು ಕುಸಿತವಾಗಿದ್ದು, ಡ್ಯಾಂ ಸುರಕ್ಷತೆಗೆ ನಿರ್ಮಾಣ ಮಾಡಿದ್ದ ತಡೆಗೋಡೆಯ ಕಲ್ಲುಗಳು ಕುಸಿತವಾಗಿದೆ. ಇದೀಗ ನೀರಾವರಿ ನಿಗಮದ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

ಇದೀಗ ಡ್ಯಾಂನಲ್ಲಿನ ಕಲ್ಲುಗಳು ಕುಸಿದಿರೋದು ಸಂಸದೆ ಸುಮಲತಾ ಹೇಳಿಕೆಗೆ ಬಲಬಂದತಾಗಿದೆ. ಈ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಡ್ಯಾಂ ಸುರಕ್ಷತೆಯ ಕುರಿತು ಪರಿಶೀಲನೆ ನಡೆಯುವ ಸಾಧ್ಯತೆಯೂ ಇದೆ. ಅಲ್ಲದೇ ಜನರ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿಯೂ ಸರಕಾರ ದಿಟ್ಟ ಕ್ರಮಕೈಗೊಳ್ಳುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ.

You May Also Like

error: Content is protected !!